Site icon Vistara News

Bharat GPT: ಭಾರತ್‌ ಜಿಪಿಟಿ ಸಂಶೋಧನೆಗೆ ಎಸ್‌ಎಂಎಲ್‌ನಿಂದ ಹೂಡಿಕೆ

SML Sponsoring to bharat GPT technology

SML Sponsoring to bharat GPT technology

ಬೆಂಗಳೂರು: ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದ ಚಾಟ್‌ಜಿಪಿಟಿಯ (Chat GPT) ಉಪಯೋಗ ಎಲ್ಲರಿಗೂ ತಿಳಿದ ವಿಷಯವೇ. ಬಹುತೇಕ ಇಂಗ್ಲಿಷ್ ಭಾಷೆಯಲ್ಲಿ ಉಪಯೋಗಿಸಬಹುದಾದಂತಹ ತಂತ್ರಜ್ಞಾನವನ್ನ (Technology) ನಮ್ಮ ದೇಶದ ಬಹುಭಾಷೆಗಳಿಗೆ ಅಳವಡಿಸುವಂತಹ ಮಹತ್ವಾಕಾಂಕ್ಷಿ ಯೋಜನೆ ಭಾರತ್‌ ಜಿಪಿಟಿಗೆ (Bharat GPT) ಟೆಲಿಕಾಂ ದೈತ್ಯ ಜಿಯೋ ಕೈಜೋಡಿಸಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಮಹತ್ವಾಕಾಂಕ್ಷಿ ಯೋಜನೆಯನ್ನ ಅನುಷ್ಠಾನಗೊಳಿಸುತ್ತಿರುವ ಒಕ್ಕೂಟಕ್ಕೆ (Consortium) ಬೆಂಗಳೂರು ಮೂಲದ ಎಸ್‌ಎಂಎಲ್ (ಸೀತಾ ಮಹಾಲಕ್ಷ್ಮಿ ಹೆಲ್ತ್‌ಕೇರ್) ಪ್ರೈವೇಟ್ ಲಿಮಿಟೆಡ್ (SML – SEETHA MAHALAXMI HEALTH CARE PVT LTD) ಪ್ರಾಯೋಜಕತ್ವ ನೀಡಿದೆ.

ಬೆಂಗಳೂರು ಮೂಲದ ಎಸ್‌ಎಂಎಲ್ (ಸೀತಾ ಮಹಾಲಕ್ಷ್ಮಿ ಹೆಲ್ತ್‌ಕೇರ್) ಪ್ರೈವೇಟ್ ಲಿಮಿಟೆಡ್ ಈಗ ಭಾರತ ಮತ್ತು ಬೃಹತ್ ಭಾಷಾ ಪ್ರತಿಷ್ಠಾನದ ಮಾದರಿಗಳ ರಚನೆಯಲ್ಲಿ ಕೆಲಸ ಮಾಡುತ್ತಿರುವ ಭಾರತ್‌ಜಿಪಿಟಿ ಒಕ್ಕೂಟದ ಸಂಶೋಧನೆಗೆ ಹೂಡಿಕೆ ಮಾಡಿರುವುದು ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಮಹತ್ವದ ಮೈಲಿಗಲ್ಲುಗಳಲ್ಲೊಂದಾಗಿದೆ.

ಮೇ 2022 ರಲ್ಲಿ ಪ್ರೊ.ಗಣೇಶ್ ಮತ್ತು ಡಾ.ವಿಷ್ಣುವರ್ಧನ್ ಅವರು ಬೋಸ್ಟನ್‌ನ ಎಂಐಟಿಯಲ್ಲಿ ಭೇಟಿಯಾದಾಗ ಭಾರತದ ಜನರಿಗೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ನ ಭಾಷಾ ಮಾದರಿಯಾದ ಭಾರತ್‌ಜಿಪಿಟಿ ರಚಿಸುವಂತಹ ನಿರ್ಧಾರವನ್ನು ಕೈಗೊಳ್ಳಲಾಯಿತು.

ಭಾರತ ದೇಶದಲ್ಲಿರುವ ವಿಶಾಲವಾದ ಜನಸಂಖ್ಯೆಯ ಹೊರತಾಗಿಯೂ, ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪ್ರಾತಿನಿಧ್ಯವು ಕಡಿಮೆಯಾಗಿದೆ, ಇದು ಕಲಿಕೆ ಮತ್ತು ಸಂವಹನದ ಅಂತರವನ್ನು ಸೃಷ್ಟಿಸಿತ್ತು. ಭಾರತ್‌ಜಿಪಿಟಿಯ ಮೂಲಕ ನಾವು ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದೇವೆ. ಅತಿ ಶೀಘ್ರದಲ್ಲೇ ಭಾರತ್‌ ಜಿಪಿಟಿ ಒಕ್ಕೂಟದಿಂದ ಮೊದಲ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು SML ಪ್ರೈವೇಟ್ ಲಿಮಿಟೆಡ್‌ನ ಸಿಇಇ ಡಾ. ವಿಷ್ಣುವರ್ಧನ್ ಎಂದು ಹೇಳಿದ್ದಾರೆ.

ಭಾರತ್‌ ಜಿಪಿಟಿಯ ರಚನೆಯ ಹೊಣೆಯನ್ನು ಹೊಣೆಯನ್ನು ಹೊತ್ತಿರುವ ಐಐಟಿ ಬಾಂಬೆಯ ಪ್ರೊ.ಗಣೇಶ್ ರಾಮಕೃಷ್ಣನ್ ನೇತೃತ್ವದ ತಂಡದಲ್ಲಿ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಹೈದರಾಬಾದ್, ಐಐಟಿ ಕಾನ್ಪುರ್, ಐಐಟಿ ಮಂಡಿ, ಐಐಟಿ ಹೈದರಾಬಾದ್, ಐಐಎಂ ಇಂದೋರ್ ಮತ್ತು ಭಾಷಿನಿ (ಮೀಟಿಯ ಅಂಗಸಂಸ್ಥೆ) ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಶೈಕ್ಷಣಿಕ ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ, ರಿಲಯನ್ಸ್‌ ಜಿಯೋ ಮತ್ತು ನ್ಯಾಸ್ಕಾಮ್‌ ಸಂಸ್ಥೆಗಳು ಈ ಒಕ್ಕೂಟದ ಜೊತೆ ಕೈಜೋಡಿಸಿವೆ.

ಐಐಟಿ ಬಾಂಬೆಯ ಪ್ರೊ. ಗಣೇಶ್ ರಾಮಕೃಷ್ಣನ್ ಮಾತನಾಡಿ, ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಸಂಪೂರ್ಣ ಸಾಮರ್ಥ್ಯವನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಭಾರತ್‌ಜಿಪಿಟಿ ನೆರವಾಗಲಿದೆ. ಈ ಸಾರ್ವಜನಿಕ – ಖಾಸಗಿ ಸಹಭಾಗಿತ್ವವು (PPP) ಅಡಿಪಾಯ ಮಾದರಿಗಳು, ಸಂಭಾಷಣಾ ಏಜೆಂಟ್‌ಗಳು, ತಾಂತ್ರಿಕ ವಿಧಾನಗಳು, AI- ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಡೇಟಾಸೆಟ್ ಸೇರಿದಂತೆ ವೈವಿಧ್ಯಮಯ ಆವಿಷ್ಕಾರಗಳು ದೇಶದಾದ್ಯಂತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸಲು ನೆರವಾಗಲಿದೆ ಎಂದು ತಿಳಿಸಿದರು.

ನ್ಯಾಸ್ಕಾಮ್‌ನ ಅಧ್ಯಕ್ಷರಾದ ದೇಬ್ಜಾನಿ ಘೋಷ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, “ಭಾರತ್‌ಜಿಪಿಟಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಮ್ಮ ಐಐಟಿಗಳು ನಿಜವಾಗಿಯೂ ಶ್ಲಾಘನೀಯ ಪ್ರಯತ್ನವನ್ನು ಮಾಡಿವೆ. ನಿಮ್ಮ ಪ್ರಯಾಣವನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಭಾರತದ ಲಾರ್ಜ್‌ ಲ್ಯಾಂಗ್ವೆಜ್‌ ಮಾಡ್ಯೂಲ್‌ (LLM) ಸಾಕಾರಗೊಳಿಸುವುದಕ್ಕೆ ಮುಂದಾಗಿರುವುದು ಶ್ಲಾಘನೀಯ. ಪ್ರೊ.ಗಣೇಶ್ ಮತ್ತು ಡಾ.ವಿಷ್ಣು ಅವರು ಕೈಗೆತ್ತಿಕೊಂಡಿರುವ ಕಾರ್ಯ ಯಶಸ್ವಿಯಾಗಲಿ ಎಂದು ಸಂದೇಶ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Reliance Jio: ಐಐಟಿ ಬಾಂಬೆ, ಜಿಯೋದಿಂದ ‘ಭಾರತ್ ಜಿಪಿಟಿ’ ಅಭಿವೃದ್ಧಿ

Exit mobile version