Site icon Vistara News

Vivo New Smartphone | ವಿವೊ ವೈ55 5ಜಿ ಸ್ಮಾರ್ಟ್‌ ಫೋನ್‌ ಬಿಡುಗಡೆ; ಏನಿದರ ವಿಶೇಷತೆ?

ಬೆಂಗಳೂರು: ವಿವೊ ಸಂಸ್ಥೆಯು ತನ್ನ ಹೊಸ ಸ್ಮಾರ್ಟ್‌ಫೋನ್‌ ಆಗಿ ವಿವೊ ವೈ55 5ಜಿ (Vivo New Smartphone) ಫೋನನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ತೈವಾನ್‌ನಲ್ಲಿ ಬಿಡುಗಡೆಯಾಗಿರುವ ಈ ಫೋನಿನ ವಿಶೇಷತೆ ಏನು? ಹೇಗಿದೆ ವಿನ್ಯಾಸ? ಬೆಲೆ ಎಷ್ಟು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Samsung no. 1: ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಮತ್ತೆ ಅಗ್ರ ಸ್ಥಾನ: ಸಮೀಕ್ಷೆ

ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 12 ಆಧಾರಿತ ಫನ್‌ಟಚ್‌ ಒಎಸ್‌ ಹೊಂದಿದೆ. 6.58 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಡಿಸ್ಪ್ಲೇ ಇದರಲ್ಲಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 700 ಪ್ರೊಸೆಸರ್‌ ಅಳವಡಿಕೆ ಮಾಡಲಾಗಿದೆ. ತ್ರಿಬಲ್‌ ಕ್ಯಾಮರಾವಿರುವ ಇದರಲ್ಲಿ 50ಎಂಪಿ ಪ್ರೈಮರಿ ಕ್ಯಾಮರಾವಿದೆ ಹಾಗೆಯೇ 8 ಎಂಪಿ ಸೆಲ್ಫೀ ಕ್ಯಾಮರಾವಿದೆ. 5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ. ಈ ಫೋನು 6ಜಿಬಿ ರ್ಯಾಮ್‌ ಹಾಗೂ 128 ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹೊಂದಿದೆ.

ಬೆಲೆ ಎಷ್ಟು?
4ಜಿಬಿ ರ್ಯಾಮ್‌ ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ವಿವೊ ವೈ55 5ಜಿ ಫೋನಿನ ಬೆಲೆ 21,000 ರೂ. ಹಾಗೆಯೇ 6ಜಿಬಿ ರ್ಯಾಮ್‌ ಜತೆ 128 ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹೊಂದಿರುವ ಫೋನಿ ಬೆಲೆ 22,700 ರೂ. ಆಗಿದೆ. ಈ ಫೋನು ಗ್ಯಾಲಾಕ್ಸಿ ಬ್ಲೂ ಮತ್ತು ಸ್ಟಾರ್‌ ಬ್ಲಾಕ್‌ ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನು ಯಾವಾಗ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನುವುದರ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

Exit mobile version