ನವ ದೆಹಲಿ: ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್‌ನಲ್ಲಿ (WhatsApp) ಈಗ ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಗ್ರಾಹಕರು ತಮ್ಮ ಪ್ರೊಫೈಲ್ ಫೋಟೊ, ಸ್ಟೇಟಸ್ ಹಾಗೂ ಲಾಸ್ಟ್ ಸೀನ್ ಕೆಲವರಿಗೆ ಮಾತ್ರ ಕಾಣಸಿಗುವಂತೆ ಮಾಡಬಹುದು.
ಈ ಹಿಂದೆ ವಾಟ್ಸ್ಆ್ಯಪ್‌ನಲ್ಲಿ ಈ ರೀತಿಯ ಒಂದು ಫೀಚರ್ ಇರಲಿಲ್ಲ. ನಿಮ್ಮ ಪ್ರೊಫೈಲ್ ಚಿತ್ರ, ಸ್ಟೇಟಸ್ ಹಾಗೂ ಲಾಸ್ಟ್ ಸೀನ್‌ಗೆ ದೃಶ್ಯತೆಗೆ ಸಂಬಂಧಿಸಿದಂತೆ ಕೇವಲ ಮೂರು ಆಯ್ಕೆಗಳಿತ್ತು.
- ಎಲ್ಲರೂ ನೋಡಬಹುದು: ಇದರಲ್ಲಿ ನಿಮ್ಮ ಸಂಪರ್ಕ ಸಂಖ್ಯೆ ಇರುವ ಎಲ್ಲರಿಗೂ ಕಾಣುತ್ತದೆ
- ನನ್ನ ಸಂಪರ್ಕದವರು: ಈ ಆಯ್ಕೆಯಲ್ಲಿ ನಿಮ್ಮ ಫೋನಿನಲ್ಲಿ ಸೇವ್ ಆಗಿರುವ ಸಂಪರ್ಕ ಸಂಖ್ಯೆಯವರು ಮಾತ್ರ ನೋಡಬಹುದು
- ಯಾರೂ ನೋಡುವ ಹಾಗಿಲ್ಲ: ಈ ಆಯ್ಕೆಯಲ್ಲಿ ನಿಮ್ಮ ಫೋಟೋ, ಸ್ಟೇಟಸ್‌ಗಳು ಯಾರಿಗೂ ಕಾಣುವುದಿಲ್ಲ.
ಆದರೆ, ಈಗ ಇದಕ್ಕೊಂದು ಹೊಸ ಆಯ್ಕೆಯನ್ನು ಸೇರಿಸಲಾಗಿದೆ. ಆಯ್ದ ಕೆಲವು ಸಂಪರ್ಕ ಸಂಖ್ಯೆಯವರಿಗೆ ಮಾತ್ರ ನಿಮ್ಮ ಚಿತ್ರ, ಸ್ಟೇಟಸ್ ಕಾಣುವ ಹಾಗೆ ಮಾಡಬಹುದು. ನಿಮ್ಮ ಸಂಪರ್ಕದಲ್ಲ ಕೆಲವರಿರುತ್ತಾರೆ, ಆದರೆ ಅವರು ನಿಮ್ಮ ಸ್ಟೇಟಸ್ ಅಥವಾ ಫೋಟೋ ನೋಡುವುದು ನಿಮಗೆ ಇಷ್ಟವಿರುವುದಿಲ್ಲ. ಹೀಗಿರುವಾಗ ಈ ಆಯ್ಕೆ ಉಪಯುಕ್ತ. ʼಮೈ ಕಾಂಟಾಕ್ಟ್ಸ್ ಎಕ್ಸೆಪ್ಟ್ʼ ಎಂಬ ಒಂದು ಆಯ್ಕೆಯನ್ನು ಪರಿಚಯಿಸಲಾಗಿದೆ. ನಿಮ್ಮ ಆಪ್ತರು, ನೀವು ಇಚ್ಛಿಸುವವರು ಮಾತ್ರವೇ ನಿಮ್ಮ ಫೋಟೊ ಅಥವಾ ಸ್ಟೇಟಸ್ ನೋಡಬಹುದು. ಇದರಿಂದ ಯುವಪೀಳಿಗೆಗೆ ಅನೇಕ ಲಾಭವಾಗುವುದಂತೂ ಸತ್ಯ.
ಇದನ್ನೂ ಓದಿ: WhatsApp| ವಾಟ್ಸ್‌ಆ್ಯಪ್ ಪೇನಲ್ಲಿ ಹಣ ಪಾವತಿಸಿ, ₹105 ಕ್ಯಾಶ್‌ಬ್ಯಾಕ್ ಪಡೆಯಿರಿ!