ಆಕರ್ಷಕ ಪರಿಸರ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು (Assam Tour) ಹೊಂದಿರುವ ಪುಟ್ಟ ಗ್ರಾಮ ಪೆಲ್ಲಿಂಗ್ (Pelling Tour) ಹಿಮಾಲಯದ (himalaya) ಇಳಿಜಾರಿನಲ್ಲಿದೆ. ತನ್ನ ಸೌಂದರ್ಯದಿಂದಲೇ ಸಿಕ್ಕಿಂಗೆ (sikkim) ಬರುವ ಪ್ರವಾಸಿಗರನ್ನು (tourist) ತನ್ನತ್ತ ಸೆಳೆಯುತ್ತದೆ. ಪ್ರಕೃತಿಯ ಮಡಿಲಲ್ಲಿ ಮನ ಶಾಂತಿಯನ್ನು ಹುಡುಕುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಪೆಲ್ಲಿಂಗ್ನಲ್ಲಿ ಅತ್ಯಂತ ಆಸಕ್ತಿದಾಯಕ ಹಲವಾರು ತಾಣಗಳಿವೆ. ಈ ತಾಣಗಳು ನಿಮ್ಮ ಪ್ರವಾಸದ ಅನುಭವ1ವನ್ನು ರೋಮಾಂಚಕಗೊಳಿಸುವುದು ಮಾತ್ರವಲ್ಲ ಸ್ಮರಣೀಯಗೊಳಿಸುತ್ತದೆ.
ಕಾಂಚನಜುಂಗಾ
ಪ್ರಪಂಚದ ಮೂರನೇ ಅತೀ ಎತ್ತರದ ಶಿಖರವಾದ ಕಾಂಚನಜುಂಗಾವನ್ನು ಪೆಲ್ಲಿಂಗ್‌ನಿಂದ ಅತ್ಯಂತ ಹತ್ತಿರದಿಂದ ನೋಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪರ್ವತವು ಗುಲಾಬಿ ಬಣ್ಣಕ್ಕೆ ತಿರುಗುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಹಚ್ಚ ಹಸಿರಿನ ಕಾಡುಗಳ ನಡುವೆ ಹರಿಯುವ ಜಲಪಾತಗಳು ತನ್ನ ಸೌಂದರ್ಯದಿಂದ ಮೋಡಿಮಾಡುವುದು ಮಾತ್ರವಲ್ಲ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಸಾಂಸ್ಕೃತಿಕ ವೈಭವ
ಲೆಪ್ಚಾಗಳು, ಭುಟಿಯಾಗಳು ಮತ್ತು ನೇಪಾಳಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಪೆಲ್ಲಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾಗಿದೆ. ಇಲ್ಲಿನ ಜನರು ತಮ್ಮ ಧಾರ್ಮಿಕತೆ ಮತ್ತು ಅವರಲ್ಲಿ ಐಕ್ಯತೆಯನ್ನು ತೋರಿಸಲು ಆಚರಿಸುವ ಬುಮ್ಚು ಹಬ್ಬದ ಸಂದರ್ಭದಲ್ಲಿ ಪಾಂಗ್ಟೋಡ್ ಚಾಮ್ ನೃತ್ಯ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಈ ವೇಳೆ ಸಿಕ್ಕಿಮರ ಆತಿಥ್ಯವನ್ನು ಅನುಭವಿಸಬಹುದು.
ಸಾಹಸ ಪ್ರಿಯರಿಗಾಗಿ ಸಾಕಷ್ಟು ಅವಕಾಶ
ಜೀವನದಲ್ಲಿ ರೋಮಾಂಚನವನ್ನು ಬಯಸುವವರಿಗೆ ಪೆಲ್ಲಿಂಗ್‌ನಲ್ಲಿ ಸಾಕಷ್ಟು ಉತ್ಸಾಹ ತುಂಬುವ ತಾಣಗಳಿವೆ. ಯುಕ್ಸೋಮ್ ಅಥವಾ ಖೆಚಿಯೋಪಾಲ್ರಿ ಸರೋವರವಿರುವ ಹತ್ತಿರದ ಹಳ್ಳಿಗಳಿಗೆ ಪಾದಯಾತ್ರೆ ಮಾಡುವಾಗ ವಿವಿಧ ಜಾತಿಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಸಾಹಸ ಪ್ರಿಯ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ರಿವರ್ ರಾಫ್ಟಿಂಗ್ ಅಥವಾ ಮೌಂಟೇನ್ ಬೈಕಿಂಗ್‌ನಂತಹ ಚಟುವಟಿಕೆಗಳನ್ನು ನಡೆಸಬಹುದು.
ಆಧ್ಯಾತ್ಮಿಕ ಧಾಮ
ಪೆಲ್ಲಿಂಗ್ ಸುತ್ತಮುತ್ತ ಇರುವ ಅನೇಕ ಹಳೆಯ ಮಠಗಳಲ್ಲಿ ಪೆಮಯಾಂಗಟ್ಸ್ ಮಠವು ಒಂದಾಗಿದೆ. ಸಂಕೀರ್ಣವಾದ ಧಾರ್ಮಿಕ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ಹೊಂದಿರುವ ಇದು ಸಂದರ್ಶಕರನ್ನು ಮೋಡಿ ಮಾಡುತ್ತದೆ. ಮನ ಶಾಂತಿ ಬಯಸುವವರು ಇಲ್ಲಿ ಸನ್ಯಾಸಿಗಳಂತೆ ಜೀವನ ನಡೆಸಬಹುದು.
ಸುಸ್ಥಿರ ಪ್ರವಾಸೋದ್ಯಮ
ಪೆಲ್ಲಿಂಗ್ ಸುಸ್ಥಿರ ಪ್ರವಾಸೋದ್ಯಮಕ್ಕೆ ಮೀಸಲಾಗಿದೆ. ಪರಿಸರ ಸ್ನೇಹಿ ಯೋಜನೆಗಳಿಗೆ ಇದು ಒತ್ತು ನೀಡುತ್ತದೆ. ಸ್ಥಳೀಯ ಜನರ ಜೀವನೋಪಾಯವನ್ನು ಬೆಂಬಲಿಸುವ ಜೊತೆಗೆ ಜವಾಬ್ದಾರಿಯುತ ಪ್ರಯಾಣವನ್ನು ಪ್ರೋತ್ಸಾಹಿಸುವ ಹಲವಾರು ಸಮುದಾಯ ಆಧಾರಿತ ಪ್ರವಾಸೋದ್ಯಮಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ.
ಸ್ಥಳೀಯ ಖಾದ್ಯಗಳನ್ನು ಸವಿಯಬಹುದು
ಸಿಕ್ಕಿಮೀಸ್ ಪಾಕಪದ್ಧತಿ ಬಾಯಲ್ಲಿ ನೀರುಣಿಸುತ್ತದೆ. ವಿಶಿಷ್ಟವಾದ ರುಚಿ ಮತ್ತು ಪದಾರ್ಥಗಳನ್ನು ಇದು ಒಳಗೊಂಡಿದೆ. ಸ್ಥಳೀಯ ಆಹಾರಗಳಾದ ಮೊಮೊಸ್, ತುಕ್ಪಾ ಮತ್ತು ಗುಂಡ್ರುಕ್ ಹಾಗೂ ಟಿಬೆಟಿಯನ್ನರು ಮತ್ತು ನೇಪಾಳಿಗಳ ಭಕ್ಷ್ಯಗಳನ್ನು ಸವಿಯಬಹುದು. ಸಾವಯವ ಹಣ್ಣು, ತರಕಾರಿಗಳ ಅಧಿಕೃತ ಪಾಕವಿಧಾನಗಳನ್ನು ಆನಂದಿಸಬಹುದು.
ಇದನ್ನೂ ಓದಿ: Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!
ಹಕ್ಕಿಗಳ ಕಲರವ
ಪೆಲ್ಲಿಂಗ್ ಸುತ್ತಮುತ್ತ ನಿತ್ಯಹರಿದ್ವರ್ಣ ಪರಿಸರದ ನಡುವೆ ಹಲವಾರು ಪಿಕ್ನಿಕ್ ತಾಣಗಳಿವೆ. ಮೋಡಿ ಮಾಡುವ ಚಿಲಿಪಿಲಿ ಹಕ್ಕಿಗಳ ಕಲರವವನ್ನು ಕೇಳಿ ಆನಂದಿಸುತ್ತಾ ಆಧುನಿಕ ಒತ್ತಡದ ಬದುಕಿನಿಂದ ದೂರವಾಗಿ ಮನಃಶಾಂತಿಯನ್ನು ಆನಂದಿಸಬಹುದು.
ವರ್ಷ ಪೂರ್ತಿ ವಿಶಿಷ್ಟ ಅನುಭವ
ಪೆಲ್ಲಿಂಗ್ ನಲ್ಲಿ ವರ್ಷ ಪೂರ್ತಿ ವಿಭಿನ್ನ ಋತುಗಳನ್ನು ಇಲ್ಲಿ ಆನಂದಿಸಬಹುದು. ವಸಂತಕಾಲದಲ್ಲಿ ಆಕಾಶವು ಸ್ಪಷ್ಟವಾಗಿರುವಾಗ ಪ್ರವಾಸಿಗರು ಪ್ರಕೃತಿಯ ನಡುವೆ ಹೆಜ್ಜೆ ಹಾಕಬಹುದು. ಆಕರ್ಷಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಮಳೆಗಾಲದಲ್ಲಿ ಪ್ರಕೃತಿ ಪ್ರಿಯರು ಇಲ್ಲಿ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ಶರತ್ಕಾಲ ಮತ್ತು ಚಳಿಗಾಲದಲ್ಲಿ ಪ್ರವಾಸಿಗರು ಹಿಮಾಲಯದ ಸೌಂದರ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಹುದು.