ಜಲಪಾತಗಳಿಂದ (waterfalls) ಹಿಡಿದು ಪ್ರಾಚೀನ ಕೋಟೆಗಳವರೆಗೆ (ancient forts) ಬೆಳಗಾವಿಯಲ್ಲಿ ಪ್ರವಾಸಿಗರು (Belagavi Tour) ಮಿಸ್ ಮಾಡಿಕೊಳ್ಳಲೇಬಾರದ ಒಂಬತ್ತು ಆಕರ್ಷಕ ಪ್ರವಾಸಿ (Tourist place) ತಾಣಗಳಿವೆ.
ರಜೆಯಲ್ಲಿ ಬೆಳಗಾವಿಯತ್ತ ಹೊರಟರೆ ರಮಣೀಯ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ.
ಪ್ರವಾಸಿ ತಾಣಗಳಿಗೆ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಎಲ್ಲರ ಮೆಚ್ಚುಗೆ ಪಡೆಯಬೇಕು ಎನ್ನುವ ಯೋಚನೆ ಇದ್ದರೆ ಕೂಡಲೇ ಬ್ಯಾಗ್ ಪ್ಯಾಕ್ ಮಾಡಿ ಬೆಳಗಾವಿಯತ್ತ ಪ್ರವಾಸ ಹೊರಡಲು ತಯಾರಾಗಿ. ಎಲ್ಲರ ಮನ ಸೆಳೆಯುವ ಹಲವಾರು ಸುಪ್ರಸಿದ್ದ ತಾಣಗಳು ಇಲ್ಲಿವೆ.
ಬೆಳಗಾವಿ ಕೋಟೆ
12ನೇ ಶತಮಾನದ ಬೆಳಗಾವಿ ಕೋಟೆ ಮರಗಳಿಂದ ಸುತ್ತುವರಿದಿದ್ದು, ಕಮಾನಿನ ಗೇಟ್‌ವೇಗಳ ಮೂಲಕ ಹೆಜ್ಜೆ ಹಾಕುತ್ತ ಸಾಗುವಾಗ ಎತ್ತರದ ಗೋಡೆಗಳ ಮೇಲೆ ವಿವಿಧ ಆಡಳಿತಗಾರರು ಹೋರಾಡಿದ ಭೀಕರ ಯುದ್ಧಗಳ ಚಿತ್ರಣ ಮನದಲ್ಲಿ ಮೂಡುವುದು. ಸಂಕೀರ್ಣವಾದ ಕೆತ್ತನೆಗಳೊಂದಿಗೆ ಅರಮನೆ, ಮಸೀದಿ ಮತ್ತು ದೇವಾಲಯಗಳ ಕುಸಿಯುತ್ತಿರುವ ಅವಶೇಷಗಳನ್ನು ಕಿರಿದಾದ ಮಾರ್ಗಗಳನ್ನು ಸುತ್ತಾಡುವಾಗ ಫೋಟೋ, ವಿಡಿಯೋ ಮಾಡಲು ಮರೆಯದಿರಿ. ಇಲ್ಲಿಯೇ ಚಿಕ್ಕ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ ಸುಂದರ ನೆನಪುಗಳನ್ನು ಮನದ ಜೋಳಿಗೆಯಲ್ಲಿ ತುಂಬಿಕೊಳ್ಳಿ.
ಬೆಳಗಾವಿ ನಗರದ ಬಹುಭಾಗವನ್ನು ಈ ಕೋಟೆ ಆವರಿಸಿದೆ ಇಲ್ಲಿ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.
ಕಮಲ್ ಬಸ್ತಿ
ಕೋಟೆಯ ಗೋಡೆಗಳ ಒಳಗಿರುವ ಕಮಲ್ ಬಸ್ತಿ ಜೈನ ದೇವಾಲಯ 12ನೇ ಶತಮಾನದ ಸೊಗಸಾದ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಬೆಳಗಾವಿಯ ಕಿರೀಟದಲ್ಲಿ ವೈಭವದಿಂದ ಮಿನುಗುತ್ತಿರುವ ಈ ಪ್ರತಿಷ್ಠಿತ ದೇವಾಲಯದಲ್ಲಿ ಪ್ರಾಚೀನ ಕಥೆಗಳು ಅನುರಣಿಸುತ್ತಿರುವಂತೆ ಭಾಸವಾಗುವುದು. ಬಹು-ಪದರದ ಅಲಂಕೃತ ಛಾವಣಿಗಳು, ಕಲ್ಲಿನ ಸ್ತಂಭಗಳನ್ನು ಒಳಗೊಂಡಿರುವ ಪೌರಾಣಿಕ ವ್ಯಕ್ತಿಗಳನ್ನು ಇಲ್ಲಿ ಕಾಣಬಹುದು.
ಇಲ್ಲಿ 40 ಸಮಾನ ಅಂತರದಲ್ಲಿ ಕೆತ್ತಿದ ಕಂಬಗಳು, ಗುಮ್ಮಟಗಳು ಆಕರ್ಷಣೀಯವಾಗಿದೆ. ರಟ್ಟ ರಾಜವಂಶದ ಕುಶಲಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ. ಇಲ್ಲಿಗೆ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.
ಗೋಕಾಕ್ ಜಲಪಾತ
ಹಸಿರು ಕಾಡುಗಳ ನಡುವೆ ಸುಮಾರು 157 ಮೀಟರ್ ಎತ್ತರದಿಂದ ಧುಮುಕುವ ಗೋಕಾಕ್ ಜಲಪಾತ ಬೃಹತ್ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ನದಿಯಲ್ಲಿ ದೋಣಿ ಸವಾರಿ ಮಾಡಿ ತಂಗಾಳಿಯಲ್ಲಿ ಆನಂದಿಸಬಹದು. ಮಳೆ, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಟ್ರೆಕ್ಕಿಂಗ್ ಮಾಡಲು ಅವಕಾಶವಿದೆ. ಯಾವುದೇ ಶುಲ್ಕವಿಲ್ಲ.
ಕಿತ್ತೂರು ಕೋಟೆ
16 ನೇ ಶತಮಾನದಲ್ಲಿ ನಿರ್ಮಿಸಲಾದ ಭವ್ಯವಾದ ಕಿತ್ತೂರು ಕೋಟೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಹಳ್ಳಿಗಾಡಿನ ದೋಣಿಗಳ ಮೇಲೆ ಸೊಂಪಾದ ಕಾಡುಗಳಿಂದ ರಚಿಸಲಾದ ಶಾಂತವಾದ ಸರೋವರದ ನೀರಿನಲ್ಲಿ ಪೆಡಲ್ ಮಾಡಿ ಹಳೆಯ ಅರಮನೆಯ ಹಾದಿಗಳಲ್ಲಿ ಸುತ್ತಾಡಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ನನ್ನು ನೆನಪಿಸಿಕೊಳ್ಳಬಹುದು. ಚೆನ್ನಮ್ಮ ತನ್ನ ಅಂತಿಮ ದಿನಗಳನ್ನು ಕಳೆದ ಜೈಲು ಕೊಠಡಿಯ ಒಂದು ನೋಟ ಅಥವಾ 1967 ರಲ್ಲಿ ನಿರ್ಮಿಸಲಾದ ಕಿತ್ತೂರಿನ ಸರೋವರದ ಇತಿಹಾವನ್ನು ಇಲ್ಲಿ ಕಾಣಬಹುದು.
ಪ್ರಾದೇಶಿಕ ಆಡಳಿತಗಾರರಾದ ದೇಸಾಯಿ ಕುಟುಂಬ ಇದನ್ನು ನಿರ್ಮಿಸಿದ್ದು, ಇಲ್ಲಿ ಅರಮನೆ, ಮ್ಯೂಸಿಯಂ, ದೇವಸ್ಥಾನ, ಸರೋವರವನ್ನು ವೀಕ್ಷಿಸಬಹುದು. ಕನಿಷ್ಠ ಪ್ರವೇಶ ಶುಲ್ಕವಿದೆ.
ಶಿವಗಿರಿ ಬೆಟ್ಟ
ಒಂದು ಬದಿಯಲ್ಲಿ ಪಶ್ಚಿಮ ಘಟ್ಟದ ಇಳಿಜಾರು ಮತ್ತು ಇನ್ನೊಂದೆಡೆ ಹತ್ತಿ ಉಣ್ಣೆಯ ಮೋಡಗಳು ತೇಲುತ್ತಿರುವ ವಿಸ್ತಾರವಾದ ಬೆಳಗಾವಿ ನಗರವನ್ನು ನೋಡುವಾಗ ಉಸಿರು ಬಿಗಿ ಹಿಡಿದ ಅನುಭವ. ಹಸಿರು ಶಿವಗಿರಿ ಗಿರಿಧಾಮದ ಮೇಲಿನ ವೈಮಾನಿಕ ನೋಟವು ಪ್ರವಾಸಿಗರನ್ನು ವಿಸ್ಮಯಗೊಳಿಸುವುದು. ಜಾಂಬೋಟಿ ಜಲಪಾತ, ಉದ್ಯಾನಗಳು ಇಲ್ಲಿನ ಆಕರ್ಷಣೆ. ಖಾಸಗಿ ಟ್ಯಾಕ್ಸಿ ಮೂಲಕ ಬೆಳಗಾವಿಯಿಂದ 30 ಕಿ.ಮೀ. ದೂರದಲ್ಲಿರುವ ಶಿವಗಿರಿ ಬೆಟ್ಟ ತಲುಪಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ. ಇಲ್ಲಿ ಸುಂದರವಾದ ಸೂರ್ಯಾಸ್ತದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.
ಸಿದ್ಧೇಶ್ವರ ದೇವಸ್ಥಾನ
12 ನೇ ಶತಮಾನದ ಕಲ್ಲಿನ ಕೆತ್ತನೆಯ ಐತಿಹಾಸಿಕ ಸಿದ್ಧೇಶ್ವರ ದೇವಾಲಯ ಶಿವನಿಗೆ ಸಮರ್ಪಿತವಾಗಿದೆ. ಶ್ರೀಗಂಧದ ಕಮಾನುಗಳು ಪೂಜ್ಯ ಲಿಂಗವನ್ನು ಹೊಂದಿರುವ ಒಳಗಿನ ಗರ್ಭಗುಡಿಯೊಳಗೆ ಸಂಜೆಯ ಆರತಿಗೆ ಹಾಜರಾಗಿ. ದೇವಾಲಯದ ಶಬ್ದಗಳು ಮತ್ತು ಪ್ರಜ್ವಲಿಸುವ ದೀಪಗಳು ಮನಸ್ಸಿಗೆ ಶಾಂತಿ ತುಂಬುವುದು. ಕಪ್ಪು ಕಲ್ಲಿನ ನೆಲದ ಮೇಲೆ ಕುಳಿತು ಧ್ಯಾನ ಮಾಡುವಾಗ ದೇಹದೊಳಗೆ ಶಕ್ತಿ ಸಂಚಾರವಾದ ಅನುಭವ ಕೊಡುವುದು.
ರಟ್ಟ ರಾಜವಂಶದ ದೊರೆ ಸಿದ್ಧರಸ ನಿರ್ಮಿಸಿರುವ ಈ ದೇವಾಲಯ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ.
ರೇಷ್ಮೆ ಸೀರೆ ಖರೀದಿಸಿ
ಕಾರ್ಪೊರೇಷನ್ ವೃತ್ತದ ಬಳಿಯಿರುವ ಅಂಗಡಿಗಳಾದ್ಯಂತ ಸಾಂಪ್ರದಾಯಿಕ ನೇಯ್ಗೆ, ಮುದ್ರಣಗಳು ಮತ್ತು ಕರಕುಶಲತೆಯನ್ನು ಕಾಣಬಹುದು. ಕೈಗೆಟುಕುವ ದರದಲ್ಲಿ ರೇಷ್ಮೆ ಸೀರೆಗಳನ್ನು ಖರೀದಿ ಮಾಡಬಹುದು. ಇಲ್ಲಿ ಚಂದೇರಿ ರೇಷ್ಮೆ ಸೀರೆಗಳು, ಕೈಮಗ್ಗದ ಕಾಟನ್ ಕುರ್ತಿಗಳು ಖರೀದಿ ಮಾಡಲು ಮರೆಯದಿರಿ.
ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!
ಮಿಲಿಟರಿ ಮಹಾದೇವ ದೇವಸ್ಥಾನ
ಶಿವನಿಗೆ ಸಮರ್ಪಿತವಾಗಿರುವ ಇನ್ನೊಂದು ದೇಗುಲ ಮಿಲಿಟರಿ ಮಹಾದೇವ ದೇವಾಲಯ. ಕಲ್ಲಿನ ಮಾರ್ಗದಲ್ಲಿ ದೇವಾಲಯವನ್ನು ತಲುಪಬೇಕಾದರೆ ಅರ್ಧ ದಿನವನ್ನು ಟ್ರೆಕ್ಕಿಂಗ್ ನಲ್ಲಿ ಕಳೆಯಬೇಕು. ಮರಾಠ ದೊರೆ ಸಾರ್ಜೆಂಟ್ ಧೂಳಪ್ಪ ಇದನ್ನು ನಿರ್ಮಿಸಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.