Site icon Vistara News

makemytrip : ರೈಲು ಪ್ರಯಾಣದ ವೇಳೆ ಹೊಸತನ ತರಲು ವೈಶಿಷ್ಟ್ಯಗಳನ್ನು ಪರಿಚಯಿಸಿದ ಮೇಕ್‌ಮೈಟ್ರಿಪ್‌

Makemytrip

ಬೆಂಗಳೂರು : ಭಾರತೀಯ ರೈಲ್ವೆಯು ದೇಶದ ಜೀವನಾಡಿಯ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಇಡೀ ದೇಶದ ಉದ್ದಗಲಕ್ಕೂ ರೈಲುಗಳು ತನ್ನ ಬಾಹುಗಳನ್ನು ಚಾಚಿವೆ. ಭಾರತೀಯ ರೈಲಿನಲ್ಲಿ ಪ್ರತಿಯೊಬ್ಬರಿಗೂ ಪ್ರಯಾಣ ಅನುಭವmakemytripವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಆನ್‌ಲೈನ್‌ ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್‌ (makemytrip) ಹಲವು ತಂತ್ರಜ್ಞಾನ ಆಧರಿತ ಸೌಲಭ್ಯಗಳನ್ನು ಪರಿಚಯಿಸಿದ್ದು ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಬುಕಿಂಗ್ ಅನುಭವವನ್ನು ವಿವಿಧ ಹಂತಗಳನ್ನಾಗಿ ವಿಭಾಗಿಸಿದ್ದು, ಈ ಪ್ರತಿ ಹಂತದಲ್ಲೂ ಅನುಭವ ಸುಧಾರಣೆಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದೆ. ಟ್ರೈನ್​ ಟಿಕೆಟ್ ಬುಕಿಂಗ್‌ನಲ್ಲಿ ಅತ್ಯಂತ ಸಾಮಾನ್ಯ ಸಮಸ್ಯೆಗಳೆಂದರೆ, ಕನ್ಫರ್ಮ್ಡ್‌ ಟಿಕೆಟ್‌ಗಳನ್ನು ಪಡೆದುಕೊಳ್ಳುವಲ್ಲಿ ಎದುರಾಗುವ ಸಮಸ್ಯೆಗಳಾಗಿವೆ. ದೃಢೀಕೃತ ಟಿಕೆಟ್‌ಗಳ ಬುಕಿಂಗ್ ವಿಂಡೋ 120 ದಿನಗಳಿಗೂ ಮೊದಲು ಆರಂಭವಾಗುತ್ತದೆ ಮತ್ತು ತುಂಬಾ ಬೇಗ ಭರ್ತಿಯಾಗುತ್ತದೆ. ಇದರಿಂದ ಪ್ರಯಾಣಿಕರಿ ವೇಟ್‌ಲಿಸ್ಟ್‌ನಲ್ಲಿ ಇರಬೇಕಾಗುತ್ತದೆ. ಇದರಿಂದ ತುಂಬಾ ಸವಾಲುಗಳು ಎದುರಾಗುತ್ತವೆ. ಅದರಲ್ಲೂ ಗ್ರೂಪ್ ಟ್ರಾವೆಲರ್‌ಗಳಿಗೆ ಟ್ರಾವೆಲ್‌ ಪ್ಲಾನ್‌ನಲ್ಲಿ ಖಾತರಿ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಮಹತ್ವದ ವೈಶಿಷ್ಟವೇನೆಂದರೆ, ಮೇಕ್‌ಮೈಟ್ರಿಪ್‌ ಟ್ರೇನ್ಸ್‌ನಲ್ಲಿ ಸೀಟ್ ಲಾಕ್‌ ಫೀಚರ್ ಅನ್ನು ಅಳವಡಿಸಲಾಗಿದ್ದು, ಶುಲ್ಕದ 25% ಪಾವತಿ ಮಾಡಿ ಕನ್ಫರ್ಮ್ಡ್‌ ಟಿಕೆಟ್ ಅನ್ನು ಪಡೆದುಕೊಳ್ಳಬಹುದು. ಉಳಿದ ಮೊತ್ತವನ್ನು ಪ್ರಯಾಣದ 24 ಗಂಟೆಗಳ ಮೊದಲು ಪಾವತಿ ಮಾಡಬಹುದಾಗಿರುತ್ತದೆ.

ಟ್ರೈನ್​ ಟಿಕೆಟ್ ಬುಕಿಂಗ್‌ನಲ್ಲಿ ಇನ್ನೊಂದು ಪ್ರಮುಖ ಸಮಸ್ಯೆಯೇನೆಂದರೆ, ನಿರ್ದಿಷ್ಟ ದಿನದಿಂದ ಕನ್ಫರ್ಮ್ಡ್‌ ಟಿಕೆಟ್‌ಗಳು ನಮಗೆ ಬೇಕಾದ ಟ್ರೇನ್‌ಗಳಲ್ಲಿ ಸಿಗುವುದಿಲ್ಲ. ಇದರಿಂದ ತುಂಬಾ ಸಮಸ್ಯೆಗಳಾಗುತ್ತವೆ. ಇದಕ್ಕಾಗಿ ಮೇಕ್‌ಮೈಟ್ರಿಪ್‌ ಈಗ ಕನೆಕ್ಟೆಡ್‌ ಟ್ರಾವೆಲ್ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಬಸ್ ಮತ್ತು ರೈಲು ಪ್ರಯಾಣವನ್ನು ಸುಲಭವಾಗಿ ಸಂಯೋಜನೆ ಮಾಡುತ್ತದೆ ಮತ್ತು ಲೇಓವರ್ ಸಮಯ ಮತ್ತು ಒಟ್ಟಾರೆ ಪ್ರಯಾಣ ಅವಧಿಯನ್ನು ಪರಿಗಣಿಸಿ ಹಲವು ಸಂಯೋಜನೆಗಳನ್ನು ಒದಗಿಸುತ್ತದೆ.

ಅನುಕೂಲಕರ ಹೆಜ್ಜೆ

ನಮ್ಮ ಹೊಸ ಸೌಲಭ್ಯಗಳನ್ನು ಪರಿಚಯಿಸಿದ ನಂತರದಲ್ಲಿ ಟ್ರೇನ್ ಬುಕಿಂಗ್‌ನಿಂದ ಪ್ರಯಾಣದವರೆಗೆ ಪ್ರತಿ ಹೆಜ್ಜೆಯೂ ಇನ್ನಷ್ಟು ಅನುಕೂಲಕರವಾಗಿರಲಿದೆ. ಪ್ರಯಾಣಿಕರಿಗೆ ಅಪಾರ ಆಯ್ಕೆ ಒದಗಿಸುವುದು, ಅನುಕೂಲ ಕಲ್ಪಿಸುವುದು, ಮನಃಶಾಂತಿ ಒದಗಿಸುವುದು, ಹೊಸ ಮಾನದಂಡಗಳನ್ನು ನಿಗದಿ ಮಾಡುವುದು ಇತ್ಯಾದಿಯನ್ನು ನಾವು ಇದಕ್ಕೆ ಆಧಾರವಾಗಿರಿಸಿಕೊಂಡಿದ್ದೇವೆ” ಎಂದು ಮೇಕ್‌ಮೈಟ್ರಿಪ್‌ನ ಸಹಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮ್ಯಾಗೋವ್ ಹೇಳಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ತೃಪ್ತಿಕರವಾದ ಊಟವಿಲ್ಲದೆ ಯಾವುದೇ ಪ್ರಯಾಣಕ್ಕೆ ಪೂರ್ಣ ವಿರಾಮ ಬೀಳುವುದಿಲ್ಲ. ಫುಡ್ ಇನ್ ಟ್ರೈನ್ ಸೌಲಭ್ಯದಲ್ಲಿ, ಪ್ರಯಾಣಿಕರು ವಿವಿಧ ರೆಸ್ಟೋರೆಂಟ್‌ಗಳನ್ನು ಹುಡುಕಬಹುದು. ಪ್ರಯಾಣ ಪ್ರಾರಂಭಿಸಿದ ನಂತರವೂ ತಮ್ಮ ಆಸನಗಳಿಗೆ ಆಹಾರ ವಿತರಣೆಯನ್ನು ಸುಲಭವಾಗಿ ಷೆಡ್ಯೂಲ್ ಮಾಡಬಹುದು. ಚಿಂತೆ ರಹಿತ ಪ್ರಯಾಣಕ್ಕಾಗಿ, ಬುಕಿಂಗ್ ಸ್ಥಿತಿ ಮತ್ತು ಪರ್ಸನಲೈಸ್ ಮಾಡಿದ ಪರ್ಯಾಯ ಪ್ರಯಾಣ ಶಿಫಾರಸುಗಳನ್ನು ನೀಡಲು ಪಿಎನ್‌ಆರ್‌ ಮತ್ತು ಲಭ್ಯತೆಯ ಎಚ್ಚರಿಕೆಗಳನ್ನೂ ಕೂಡಾ ಸಹ ಒದಗಿಸುತ್ತದೆ. ಟ್ರೈನ್ ಟ್ರ್ಯಾಕಿಂಗ್ ಮತ್ತು ಪ್ಲಾಟ್‌ಫಾರ್ಮ್ ಲೊಕೇಟರ್ ವೈಶಿಷ್ಟ್ಯಗಳು ರೈಲು ಪ್ರಯಾಣಿಕರಿಗೆ ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ ಸಹ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುತ್ತದೆ..

Exit mobile version