Site icon Vistara News

Summer Tourism: ಏಪ್ರಿಲ್‌ನಲ್ಲಿ ಪ್ರವಾಸ ಮಾಡುವ ಯೋಚನೆ ಇದೆಯೆ?; ಇಲ್ಲಿವೆ ವಿಶ್ವ ಪ್ರಸಿದ್ಧ ತಾಣಗಳು

Summer Tourism

ಏಪ್ರಿಲ್ ತಿಂಗಳೆಂದರೆ ಭಾರತದಾದ್ಯಂತ (india) ಪ್ರವಾಸಕ್ಕೆ ಸೂಕ್ತ ಸಮಯ. ಶಾಲಾ ಮಕ್ಕಳಿಗೆ (school childrens) ರಜೆಯ ಸಂದರ್ಭ. ಜೊತೆಗೆ ತೀವ್ರ ಬಿಸಿಲಿನಿಂದ ತಪ್ಪಿಸಿಕೊಂಡು ಎಲ್ಲಾದರೂ ತಂಪಾದ ಮನಸ್ಸಿಗೆ ಹಿತಕೊಡುವ ಸ್ಥಳದಲ್ಲಿ ಕೆಲಕಾಲ ಕುಳಿತುಕೊಳ್ಳಬೇಕು ಎಂದೆನಿಸುತ್ತದೆ. ಹೀಗಾಗಿ ಈ ಬಾರಿ ಏಪ್ರಿಲ್ ತಿಂಗಳಲ್ಲಿ (april month) ಪ್ರವಾಸ ಹೊರಡುವ ಯೋಚನೆಯಲ್ಲಿದ್ದರೆ (Summer Tourism) ನಿಮ್ಮ ಯೋಜನೆಯಲ್ಲಿ ಈ ಸ್ಥಳಗಳ ಬಗ್ಗೆಯೂ ಯೋಚಿಸಬಹುದು.

ಭಾರತಾದ್ಯಂತ ಏಪ್ರಿಲ್ ತಿಂಗಳಲ್ಲಿ ಭೇಟಿ ನೀಡಬಹುದಾದ ಹಲವಾರು ಪ್ರಸಿದ್ಧ ಸ್ಥಳಗಳಿವೆ. ಭವ್ಯವಾದ ಅಂಡಮಾನ್ ದ್ವೀಪ, ಕಡಿಮೆ ಪ್ರವಾಸಿಗರನ್ನು ಆದ್ಯತೆ ನೀಡುವ ಗೋವಾ ನಿತ್ಯದ ಜಂಜಾಟಕ್ಕೆ ಬ್ರೇಕ್ ಬೇಕು ಎಂದುಕೊಳ್ಳುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಎಲ್ಲರಿಗೂ ಇಲ್ಲಿ ಹೋಗಿ, ತಂಗಲು ಸಾಧ್ಯವಿಲ್ಲ. ಅದರಲ್ಲೂ ಕುಟುಂಬ ಸದಸ್ಯರೊಂದಿಗೆ ಹೊರಡುವಾಗ ಬಜೆಟ್ ಪ್ಲಾನ್ ಮಾಡಿಕೊಂಡೇ ಹೋಗಬೇಕು. ಜೊತೆಗೆ ಅಲ್ಲಿನ ಪರಿಸರ, ಸಂಸ್ಕೃತಿಯ ಬಗ್ಗೆ ಕೊಂಚವಾದರೂ ತಿಳಿದಿರಬೇಕು. ಹೀಗಾಗಿ ಕಡಿಮೆ ಖರ್ಚಿನಲ್ಲಿ ದೇಶಾದ್ಯಂತ ಮನೆ ಮಂದಿಯೊಂದಿಗೆ ಸುತ್ತಾಡಬೇಕು ಎನ್ನುವ ಯೋಚನೆ ಇದ್ದರೆ ಭಾರತದಾದ್ಯಂತ ಇರುವ ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ಪ್ರವಾಸಕ್ಕೆ ಸೂಕ್ತ ಎಂದೆನಿಸುವ ತಾಣಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು


ಕಾಶ್ಮೀರ (kashmira)

ಭವ್ಯವಾದ ಪರ್ವತ, ಪ್ರಶಾಂತವಾದ ಸರೋವರ, ಮನಸ್ಸಿಗೆ ಹಿತ ಕೊಡುವ ಉದ್ಯಾನವನಗಳೊಂದಿಗೆ ಕಾಶ್ಮೀರದ ಸೌಂದರ್ಯ ಎದ್ದು ಕಾಣುವುದೇ ಏಪ್ರಿಲ್‌ ತಿಂಗಳಲ್ಲಿ. ಇಳಿಜಾರುಗಳಲ್ಲಿನ ಹಿಮವು ಕರಗಿ ವಾತಾವರಣವು ಹಸಿರಾಗುತ್ತದೆ. ಧರೆಯ ಮೇಲಿನ ಸ್ವರ್ಗವೆಂದೇ ಕರೆಯಲ್ಪಡುವ ಕಾಶ್ಮೀರಕ್ಕೆ ಈಗ ಪ್ರವಾಸ ಹೊರಡಬಹುದು.

ಕೇರಳ (kerala)

ವಸಂತ ಋತು ಕಾಲಿಡುವ ಹೊತ್ತಿಗೆ ಉಷ್ಣವಲಯದ ಕೇರಳ ಆಕರ್ಷಣೆಯ ತಾಣವಾಗುತ್ತದೆ. ಏಪ್ರಿಲ್‌ ತಿಂಗಳು ಇಲ್ಲಿ ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ಕ್ರೂಸ್ ಅಲೆಪ್ಪಿಯ ಹಿನ್ನೀರು, ಕೋವಲಂ, ಪ್ರಾಚೀನ ಕಡಲತೀರಗಳು ಮತ್ತು ಮುನ್ನಾರ್‌ನ ಹಸಿರು ಚಹಾ ತೋಟಗಳು ಕೇರಳದ ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ.

ಮಸ್ಸೂರಿ (Mussoorie)

ಉರಿ ಬಿಸಿಲಿನ ತಾಪದಿಂದ ಓಡಿ ಹೋಗಿ ಅವಿತುಕೊಳ್ಳಬೇಕು ಎನ್ನುವ ಯೋಚನೆ ಇದ್ದರೆ ಬೆಟ್ಟಗಳ ರಾಣಿ ಮಸ್ಸೂರಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತರಾಖಂಡದ ಈ ಎತ್ತರದ ಹಳ್ಳಿಯಲ್ಲಿ ನಯನ ಮನೋಹರವಾದ ಹಲವಾರು ತಾಣಗಳಿವೆ. ಜಲಪಾತಗಳು, ಸುಂದರವಾದ ಉದ್ಯಾನಗಳು ಮತ್ತು ಸಣ್ಣ ದೇವಾಲಯಗಳು ನಗರದ ಸದ್ದುಗದ್ದಲಗಳಿಂದ ದೂರವಾಗಿ ಕುಳಿತು ಕೊಳ್ಳಬೇಕು ಎನ್ನುವ ಯೋಚನೆಯಲ್ಲಿರುವವರಿಗೆ ಮನ ಶಾಂತಿಯನ್ನು ಕೊಡುವುದರಲ್ಲಿ ಸಂದೇಹವೇ ಇಲ್ಲ.


ಉದಯಪುರ (udaipur)

‘ಪೂರ್ವದ ವೆನಿಸ್’ ಅಥವಾ ‘ಸರೋವರಗಳ ನಗರ’ ಎಂದು ಕರೆಯಲ್ಪಡುವ ರಾಜಸ್ಥಾನದ ಉದಯಪುರವು ಶತಮಾನಗಳಷ್ಟು ಹಳೆಯದಾದ ರಾಜಮನೆತನದ ವಾಸ್ತುಶಿಲ್ಪ, ಮಾನವ ನಿರ್ಮಿತ ಅದ್ಭುತ ಸರೋವರಗಳು ಮತ್ತು ಸುಸಜ್ಜಿತ ಉದ್ಯಾನವನಗಳಿಗೆ ಹೆಸರುವಾಸಿಯಾಗಿದೆ. ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಉದಯಪುರ ನಗರವು ಏಪ್ರಿಲ್ ತಿಂಗಳಲ್ಲಿ ಪ್ರವಾಸಕ್ಕೆ ಸೂಕ್ತ ಆಯ್ಕೆಯಾಗಿದೆ.

ಡಾರ್ಜಿಲಿಂಗ್ (Darjeeling)

ಪ್ರಕೃತಿಯೊಂದಿಗೆ ಕಾಲ ಕಳೆಯಬೇಕು ಎಂದು ಬಯಸುವವರಾದರೆ ಏಪ್ರಿಲ್‌ ತಿಂಗಳಲ್ಲಿ ಡಾರ್ಜಿಲಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ವೈಟ್-ವಾಟರ್ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ ಅನುಭವಗಳನ್ನು ನೆನಪಿನ ಬುಟ್ಟಿಗೆ ಹಾಕಿಕೊಳ್ಳಬಹುದು.


ಮನಾಲಿ (manali)

ಹಿಮಾಚಲ ಪ್ರದೇಶದ ಕುಲು ಕಣಿವೆಯ ಹೃದಯಭಾಗದಲ್ಲಿರುವ ಮನಾಲಿ ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ. ಗ್ರಾಮದ ಸೌಂದರ್ಯ ಪ್ರವಾಸಿಗರಿಗೆ ಬೆರಗು ಮೂಡಿಸುತ್ತದೆ. ಹಿತವಾದ ಹವಾಮಾನ ಮನಸ್ಸಿಗೆ ಉಲ್ಲಾಸ ತುಂಬುತ್ತದೆ.

ಅಂಡಮಾನ್ (Andaman)

ಮೋಡಿಮಾಡುವ ಅಂಡಮಾನ್ ದ್ವೀಪಗಳು ಏಪ್ರಿಲ್ ನಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸ್ವಾಗತಿಸುತ್ತದೆ. ಸುಂದರ ಕಡಲತೀರಗಳು, ಸ್ಫಟಿಕ ನೀಲಿ ನೀರು, ಸುಂದರವಾದ ಹವಳದ ಬಂಡೆಗಳ ನಡುವೆ ಭವ್ಯವಾದ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಅನುಭವವನ್ನು ಮೆಚ್ಚುವವರಿಗೆ ಇದು ಬೇಸಿಗೆಯ ಸೂಕ್ತ ಆಯ್ಕೆಯಾಗಿದೆ.

Exit mobile version