Site icon Vistara News

Summer Tour: ಐತಿಹಾಸಿಕ ಹೆಗ್ಗುರುತಿನ ಶ್ರೀಮಂತ ನಗರ ತಿರುಚ್ಚಿ; ಬೇಸಿಗೆ ಪ್ರವಾಸದಲ್ಲಿ ನೋಡಲು ಮರೆಯದಿರಿ

Tiruchirappalli Tour

ನಗರಗಳು ಎಷ್ಟೇ ಆಧುನಿಕವಾಗಿ ರೂಪುಗೊಂಡರೂ ಅದನ್ನು ಜೀವಂತವಾಗಿ ಇರಿಸುವುದು ಹಳೆಯ ನೆನಪುಗಳೇ ಎಂದರೆ ತಪ್ಪಾಗಲಾರದು. ಹೀಗೆಯೇ ಭಾರತದ (india) ಅತ್ಯಂತ ಪುರಾತನ ನಗರವಾಗಿರುವ ತಿರುಚಿ (Trichy) ಅಥವಾ ತಿರುಚಿರಾಪಳ್ಳಿ (Tiruchirappalli tour) ಇಂದಿಗೂ ತನ್ನ ಹಳೆಯ ನೆನಪನ್ನು ಕಟ್ಟಿಕೊಂಡು ಆಧುನಿಕ ನಗರವಾಗಿ ರೂಪುಗೊಂಡಿದೆ. ಇದರಿಂದಲೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು (tourist) ನಗರದ ಉತ್ಸಾಹಭರಿತ ವಾತಾವರಣವನ್ನು ಕಣ್ತುಂಬಿಕೊಳ್ಳಬಹುದು.

ನಗರದ ಗದ್ದಲಗಳು ಇದ್ದರೂ ಪುರಾತನ ಐತಿಹಾಸಿಕ ಸ್ಥಳಗಳು, ಕಟ್ಟಡಗಳನ್ನು ಮೌನವಾಗಿ ಕುಳಿತು ತನ್ನದೇ ಕಥೆ ಹೇಳುವಂತಿದೆ., ಮಧ್ಯ ತಮಿಳುನಾಡಿನಲ್ಲಿರುವ ಈ ನಗರವು ತಲೆಮಾರುಗಳಿಂದ ಸಾಂಸ್ಕೃತಿಕ ಪರಂಪರೆಯಾಗಿದೆ. ಮುಂದಿನ ಬಾರಿ ತಮಿಳುನಾಡಿಗೆ ಭೇಟಿ ನೀಡುವ ಯೋಚನೆ ಇದ್ದರೆ ತಿರುಚ್ಚಿಗೆ ಭೇಟಿ ನೀಡಲು ಮರೆಯದಿರಿ. ತಿರುಚ್ಚಿಯ ಕೆಲವೊಂದು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Summer Tour: ದೇವರ ನಾಡಿನ ಸುಂದರ ನಗರ ತಿರುವನಂತಪುರಂ

ಪ್ರಾಚೀನ ಇತಿಹಾಸ

ದಕ್ಷಿಣ ಭಾರತದ ಮೂರು ಪ್ರಮುಖ ರಾಜವಂಶಗಳಿಂದ ಆಳಲ್ಪಟ್ಟಿರುವ ತಿರುಚ್ಚಿ ಒಂದು ಕಾಲದಲ್ಲಿ ಚೋಳರು, ಪಲ್ಲವರು ಮತ್ತು ಪಾಂಡ್ಯರಿಗೆ ನೆಲೆಯಾಗಿತ್ತು. ಇವರ ಕುರುಹುಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ಸಾಂಪ್ರದಾಯಿಕ ದೇವಾಲಯಗಳು, ಸ್ಮಾರಕಗಳು ಇಲ್ಲಿದ್ದು ಪ್ರವಾಸಿಗರು ಒಂದು ವಾರ ಪೂರ್ತಿ ಇಲ್ಲಿ ಓಡಾಡಬಹುದು. ಯಾಕೆಂದರೆ ಅಷ್ಟೊಂದು ನೋಡುವಷ್ಟು ತಾಣಗಳು ಇಲ್ಲಿವೆ.


ರಾಕ್ ಪೋರ್ಟ್ ದೇವಾಲಯ

ದೈತ್ಯ ಬಂಡೆಯ ಮೇಲಿರುವ ಮೂರು ದೇವಾಲಯಗಳು ಉಚ್ಚಿ ಪಿಳ್ಳ್ಯಾರ್ ದೇವಾಲಯ, ತಾಯುಮಾನಸ್ವಾಮಿ ದೇವಾಲಯ, ಮತ್ತು ಮಾಣಿಕ್ಕ ವಿನಾಯಕರ್ ದೇವಾಲಯ. ಇಲ್ಲಿಂದ ಅತ್ಯಂತ ವಿಹಂಗಮ ನೋಟಗಳನ್ನು ಕಾಣಬಹುದು. ಅತ್ಯಂತ ಸಂಕೀರ್ಣವಾಗಿ ನಿರ್ಮಿಸಲ್ಪಟ್ಟಿರುವ ಈ ದೇವಾಲಯಗಳು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ಭಗವಾನ್ ವಿಷ್ಣುವಿನ ಈ ದೇವಾಲಯ ಪ್ರಪಂಚದಲ್ಲೇ ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ತಿರುಚ್ಚಿಗೆ ಒಂದು ಐಕಾನ್ ಎಂದೇ ಹೇಳಲಾಗುತ್ತದೆ. ಹೀಗಾಗಿ ತಿರುಚ್ಚಿ ಪ್ರವಾಸ ಹೊರಡುವ ಯೋಜನೆ ಇದ್ದರೆ ಇಲ್ಲಿಗೊಮ್ಮೆ ಖಂಡಿತಾ ಭೇಟಿ ನೀಡಲು ಮರೆಯದಿರಿ.


ಶಿಷ್ಟಾಚಾರ ಪಾಲಿಸಿ

ತಿರುಚ್ಚಿಯಲ್ಲಿ ಸಾಮಾನ್ಯವಾಗಿ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಸಾಂಪ್ರದಾಯಿಕ ಧಿರಸುಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ತೋಳುಗಳು, ಮೊಣಕಾಲು ಮುಚ್ಚುವ ಬಟ್ಟೆಗಳನ್ನೇ ಧರಿಸಬೇಕು ಎನ್ನುವ ನಿಯಮ ಇಲ್ಲಿದೆ.

ಆಹಾರ, ಪಾನೀಯ

ತಿರುಚ್ಚಿಯಲ್ಲಿ ಸ್ಥಳೀಯ ಪಾಕಪದ್ಧತಿಯು ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿನ ಬೀದಿ ಆಹಾರ, ಪಾನೀಯವು ಹೆಚ್ಚು ಸುರಕ್ಷಿತ ಎಂದೇ ಪರಿಗಣಿಸಲ್ಪಟ್ಟಿ. ತಮಿಳುನಾಡಿನ ಮತ್ತು ದಕ್ಷಿಣ ಭಾರತ ಶೈಲಿಯ ಸಾಂಪ್ರದಾಯಿಕ ತಿನಿಸುಗಳನ್ನು ಇಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ.


ಶಾಪಿಂಗ್

ತಿರುಚ್ಚಿ ಭೇಟಿಯ ನೆನಪಿಗಾಗಿ ಯಾವುದಾದರೂ ವಸ್ತುಗಳನ್ನು ತೆಗೆದುಕೊಳ್ಳಬೇಕು ಎನ್ನುವ ಯೋಚನೆ ಇದ್ದರೆ ಕೆಲವು ಸ್ಥಳೀಯ ಮಾರುಕಟ್ಟೆಗಳಿಗೆ ಭೇಟಿ ನೀಡಿ. ಇದರಲ್ಲಿ ಚಿನ್ನಾರ್ ಬಜಾರ್, ಗಾಂಧಿ ಮಾರ್ಕೆಟ್ ಮತ್ತು ತಿಲ್ಲೈ ನಗರಗಳು ಶಾಪಿಂಗ್ ಪ್ರಿಯರಿಗೆ ಹೆಚ್ಚು ಮೆಚ್ಚುಗೆಯಾಗುವ ತಾಣಗಳು.

ಉತ್ತಮ ಸಮಯ

ಮಳೆಗಾಲ ತಿರುಚ್ಚಿಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ. ಇನ್ನು ಬೇಸಗೆಯಲ್ಲಿ ಈ ಭಾಗದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ತಿರುಚ್ಚಿ ಪ್ರವಾಸ ಮಾಡಬೇಕೆಂಬ ಯೋಚನೆ ಇದ್ದರೆ ಶರತ್ಕಾಲ ಅಥವಾ ಚಳಿಗಾಲವನ್ನು ಆಯ್ಕೆ ಮಾಡುವುದು ಉತ್ತಮ. ಹೀಗಿದ್ದಾಗಲೂ ಬೇಸಿಗೆ ಪ್ರವಾಸ ಕಾಲದಲ್ಲಿ ತಮಿಳುನಾಡಿಗೆ ಹೋದರೆ ಈ ಸ್ಥಳವನ್ನು ತಪ್ಪದೇ ನೋಡುವಂಥದ್ದು. ಹವಾಮಾನವೂ ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ.

ಸಾರಿಗೆ ಸಂಪರ್ಕ

ತಿರುಚ್ಚಿಗೆ ಸಂಪರ್ಕಿಸುವ ಸಾಕಷ್ಟು ಸಾರಿಗೆ ಸೌಲಭ್ಯಗಳಿವೆ. ವಿಮಾನ ಅಥವಾ ರೈಲು ಸಂಪರ್ಕ ನಗರವನ್ನು ಸಂಪರ್ಕಿಸುತ್ತದೆ. ನಗರದಲ್ಲಿ ಓಡಾಡಲು ಸಾಕಷ್ಟು ಆಟೋ, ಕ್ಯಾಬ್ ಗಳು ಸುಲಭವಾಗಿ ಲಭ್ಯವಾಗುತ್ತದೆ. ಆದರೆ ದರವನ್ನು ಮೊದಲೇ ನಿಗದಿಪಡಿಸಿ ವಾಹನ ಹತ್ತುವುದು ಉತ್ತಮ.

ಪ್ರಾಚೀನ ದೇವಾಲಯಗಳು, ಐತಿಹಾಸಿಕ ಹೆಗ್ಗುರುತುಗಳನ್ನು ಒಳಗೊಂಡಿರುವ ತಿರುಚ್ಚಿ ಆಧುನಿಕ ಜೀವನಕ್ಕೆ ಸಮೀಪದಲ್ಲೇ ಇದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವವರಿಗೆ ಇದು ತಮ್ಮ ಮನೆಯಂತೆ ಭಾಸವಾಗುತ್ತದೆ. ಇಲ್ಲಿನ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಶ್ರೀಮಂತ ಮತ್ತು ಪುರಾತನವಾಗಿವೆ. ಒಟ್ಟಿನಲ್ಲಿ ಪ್ರವಾಸಿಗರನ್ನು ತಿರುಚ್ಚಿ ಮೋಡಿ ಮಾಡುವುದರಲ್ಲಿ ಸಂದೇಹವಿಲ್ಲ.

Exit mobile version