Site icon Vistara News

Tour Guide: ದೇವಾಲಯಗಳ ಪಟ್ಟಣ ತಿರುವಣ್ಣಾಮಲೈ; ಒಮ್ಮೆ ನೋಡಲೇಬೇಕಾದ ಸ್ಥಳ

Tiruvannamalai tourism

ದೇವಾಲಯಗಳ ಪಟ್ಟಣ ಎಂದೇ ಕರೆಯಲ್ಪಡುವ ತಿರುವಣ್ಣಾಮಲೈ (Tiruvannamalai) ತಮಿಳುನಾಡಿನ (tamilandu) ಪವಿತ್ರ ಅಣ್ಣಾಮಲೈ(annamalai) ಬೆಟ್ಟದಲ್ಲಿದೆ. ಅನೇಕ ಆಶ್ರಮಗಳು, ಪುರಾತನ ದೇವಾಲಯಗಳ ನೆಲೆಯಾಗಿರುವ ತಿರುವಣ್ಣಾಮಲೈ ಆತ್ಮ ಶೋಧಕರು, ಪ್ರವಾಸಿ ಪ್ರಿಯ ಯಾತ್ರಿಕರನ್ನು ತನ್ನತ್ತ ಆಕರ್ಷಿಸುತ್ತದೆ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದು ಬಯಸಿದರೆ ಇಲ್ಲಿಗೊಮ್ಮೆ ಖಂಡಿತ ಭೇಟಿ ನೀಡಬಹುದು. ಅದರಲ್ಲೂ ಇಲ್ಲಿರುವ 9 ಸ್ಥಳಗಳಿಗೆ ಭೇಟಿ ನೀಡಿ. ಯಾಕೆಂದರೆ ಈ ಸ್ಥಳಗಳು ಅದ್ಬುತ ಅನುಭವವನ್ನು ಕೊಡುವುದರಲ್ಲಿ ಸಂದೇಹವೇ ಇಲ್ಲ.

ಅಣ್ಣಾಮಲೈಯಾರ್ ದೇವಸ್ಥಾನ

ಅಣ್ಣಾಮಲೈ ಬೆಟ್ಟಗಳ ತಪ್ಪಲಿನಲ್ಲಿರುವ ಪುರಾತನ ಅಣ್ಣಾಮಲೈಯಾರ್ ದೇವಾಲಯ ಚೋಳ ರಾಜವಂಶದ ದಕ್ಷಿಣ ಭಾರತದ ಅತೀ ದೊಡ್ಡ ಶಿವನ ದೇಗುಲವಾಗಿದೆ. ಸುಮಾರು 200 ಅಡಿ ಎತ್ತರ, ಸಂಕೀರ್ಣ ಕೆತ್ತನೆಯ ಗೋಪುರಗಳು ಇಲ್ಲಿನ ಆಕರ್ಷಣೆ. 25 ಎಕರೆ ಪ್ರದೇಶದಲ್ಲಿ ದೇವಾಲಯ ವ್ಯಾಪಿಸಿದೆ. ವಿಶಾಲವಾದ ಸಾವಿರ ಸ್ತಂಭಗಳ ಸಭಾಂಗಣ, ಪವಿತ್ರ ತೊಟ್ಟಿಗಳು ಮತ್ತು ಶಿಖರವನ್ನು ಅಲಂಕರಿಸುವ ಭವ್ಯವಾದ ಚಿನ್ನದ ಕಲಶ ಯಾತ್ರಿಕರ ಗಮನ ಸೆಳೆಯುವುದು. ಕಾರ್ತಿಕ ದೀಪದ ಸಂದರ್ಭದಲ್ಲಿ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಅಣ್ಣಾಮಲೈಯಾರ್ ಬೆಟ್ಟ

ದೂರದಿಂದಲೂ ಗೋಚರಿಸುವ ಹಸಿರುಕಲ್ಲಿನ ಶಿಖರ ಅಣ್ಣಾಮಲೈ ಅರುಣಾಚಲ ಹಿಲ್ಸ್ ಎಂದೂ ಕರೆಯಲ್ಪಡುತ್ತದೆ. ಪ್ರಾಚೀನ ದಂತಕಥೆಯ ಪ್ರಕಾರ ಈ ಬೆಟ್ಟವು ಶಿವನಿಗೆ ಸೇರಿದೆ. ಚಾರಣ ಪ್ರಿಯರಿಗೆ ಈ ಸ್ಥಳ ಖಂಡಿತ ಇಷ್ಟವಾಗುತ್ತದೆ. ಸುಮಾರು 25 ಕಿ.ಮೀ. ಪ್ರದೇಶವನ್ನು ವ್ಯಾಪಿಸಿರುವ ಈ ಬೆಟ್ಟ 100 ಕ್ಕೂ ಹೆಚ್ಚು ಪವಿತ್ರ ಸ್ಥಳಗಳು, ಕೆತ್ತನೆಗಳಿರುವ ಪ್ರಾಚೀನ ಗುಹೆಗಳನ್ನು ಒಳಗೊಂಡಿದೆ. ಅಣ್ಣಾಮಲೈಯಾರ್ ದೇವಾಲಯದ ಅಧಿಕಾರಿಗಳು ಇದನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Heat Stroke: ರಾಜ್ಯದಲ್ಲಿ 600 ಹೀಟ್ ಸ್ಟ್ರೋಕ್‌ ಕೇಸ್; ಏರುತ್ತಿದೆ ಶಾಖ, ಸಾವಿಗೂ ಕಾರಣವಾದೀತು, ಎಚ್ಚರಿಕೆ ವಹಿಸಿ!

ವಿರೂಪಾಕ್ಷ ಗುಹೆ

ಅಣ್ಣಾಮಲೈ ಬೆಟ್ಟದ ಅರ್ಧದಾರಿಯ ಉದ್ದಕ್ಕೂ ವಿರೂಪಾಕ್ಷ ಗುಹೆ ಇದೆ. ಅಲ್ಲಿ ಪೂಜ್ಯ ಋಷಿ ರಮಣ ಮಹರ್ಷಿಗಳು 20 ವರ್ಷಗಳ ಕಾಲ ಧ್ಯಾನ ಮಾಡಿದ್ದರು. ಅವರ ಸಮಾಧಿಯು ಇಲ್ಲಿದೆ. ಶಿವಲಿಂಗ ಪೂಜಾ ಸ್ಥಳಗಳನ್ನು ಹೊಂದಿರುವ ಕೋಣೆಗಳು ಇಲ್ಲಿನ ಆಕರ್ಷಣೆಯಾಗಿದೆ. ಸ್ಕಂದಾಶ್ರಮದಿಂದ 1.5 ಕಿ.ಮೀ. ದೂರದಲ್ಲಿದೆ. ಶ್ರೀ ರಮಣಾಶ್ರಮ ಇದರ ನಿರ್ವಹಣೆ ಮಾಡುತ್ತಿದೆ.

ಸ್ಕಂದಾಶ್ರಮ

ಧ್ಯಾನ ಮಾಡಲು ಬಯಸುವವರಿದೆ ಇಲ್ಲಿರುವ ಶ್ರೀ ಚಕ್ರ ದೇವಾಲಯವು ಸೂಕ್ತ ಸ್ಥಳ. ಇಲ್ಲಿ ಅನೇಕ ಮಹರ್ಷಿಗಳು ತಮ್ಮ ತಪಸ್ಸನ್ನು ಮಾಡುತ್ತಾರೆ. ಓದಲು, ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳವಾಗಿದೆ. ಇದು ಕಾಡುಗಳ ನಡುವೆ ಇದ್ದು, ಸುಮಾರು 1500 ಮೀಟರ್ ಎತ್ತರದಲ್ಲಿದೆ. ಇಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಶ್ರೀರಾಮ ವಾಸವಾಗಿದ್ದ ಎನ್ನಲಾಗಿದೆ.

ಗಿರಿವಾಲಂ ಪಥ

ಅಣ್ಣಾಮಲೈ ಬೆಟ್ಟದ ಸಮೀಪ 14 ಕಿ.ಮೀ. ದೂರದಲಿ ಗಿರಿವಲಮ್ ಬೆಟ್ಟವಿದ್ದು, ಬೆಟ್ಟದ ಸುತ್ತ ಸಾವಿರಾರು ಮಂದಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಭಜನೆಗಳನ್ನು ಹಾಡುತ್ತಾರೆ. ಪ್ರತಿ ಕಿಲೋಮೀಟರ್‌ ದೂರದಲ್ಲಿ ವಿಶ್ರಾಂತಿ ಸ್ಥಳಗಳಿವೆ. ಪ್ರಕೃತಿಯ ನಡುವೆ ನೆಲೆಗೊಂಡಿರುವ ವಿವಿಧ ದರ್ಗಾಗಳು, ಆಶ್ರಮಗಳು ಮತ್ತು ದೇವಾಲಯಗಳನ್ನು ಇಲ್ಲಿ ಕಾಣಬಹುದು. ಬೀದಿ ಅಂಗಡಿಗಳು ಇಲ್ಲಿದ್ದು, ಭಕ್ತರಿಗೆ ಉಪಾಹಾರವನ್ನು ಒದಗಿಸುತ್ತವೆ.

Tiruvannamalai tourism

ಸಾತನೂರು ಅಣೆಕಟ್ಟು

ತಿರುವಣ್ಣಾಮಲೈ ಪಟ್ಟಣದಿಂದ ಕೇವಲ 16 ಕಿ.ಮೀ. ದೂರದಲ್ಲಿ ಪೆನ್ನಯಾರ್ ನದಿಯ ನೀರಿಗೆ ಅಡ್ಡಲಾಗಿ ನಿರ್ಮಿಸಲಾದ 150 ಅಡಿ ಎತ್ತರ ಮತ್ತು ಸುಮಾರು 1 ಕಿ.ಮೀ. ಅಗಲದ ಸಾತನೂರ್ ಅಣೆಕಟ್ಟು ಪೂರ್ವ ಘಟ್ಟಗಳ ಕಾಡುಗಳ ಮಧ್ಯೆ ಇದೆ. ಇಲ್ಲಿರುವ ಜಲಾಶಯ, ಉದ್ಯಾನವನಗಳು, ದೋಣಿ ವಿಹಾರ, ಮರದಿಂದ ಕೂಡಿದ ಪಿಕ್ನಿಕ್ ತಾಣಗಳು ಸಂಪೂರ್ಣ ಮನೋರಂಜನೆಯನ್ನು ಒದಗಿಸುತ್ತದೆ. ಈ ಪ್ರದೇಶದ ಸುತ್ತಲೂ ವಿವಿಧ ಜಾತಿಯ ವೀಕ್ಷಣೆಗಳನ್ನು ಕಾಣಬಹುದು.

ಜಿಂಗೀ ಕೋಟೆ

ವಿಲ್ಲುಪುರಂ ಜಿಲ್ಲೆಯ ಮೂರು ಬಂಡೆಗಳ ಬೆಟ್ಟಗಳ ಮೇಲೆ ನೆಲೆಯಾಗಿರುವ ಜಿಂಗೀ ಕೋಟೆಯಲ್ಲಿ ಧಾನ್ಯ ಮಾಡಲು ಸೂಕ್ತ ಸ್ಥಳಗಳನ್ನು ಹೊಂದಿದೆ. 17 ನೇ ಶತಮಾನದ ಅರಮನೆಗಳನ್ನು ಇಲ್ಲಿ ಕಾಣಬಹುದು. 11 ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಜಿಂಗೀ ಕೋಟೆಯಲ್ಲಿ ಮೂರು ಬೆಟ್ಟಗಳಿವೆ. ಅಪರೂಪದ ಮನೆಗಳು, 17 ನೇ ಶತಮಾನದ ಕಪ್ಪು ಗ್ರಾನೈಟ್ ನ ಕೃಷ್ಣ ವಿಗ್ರಹ ಇಲ್ಲಿದೆ. ಫ್ರೆಂಚ್ ಮತ್ತು ಬ್ರಿಟಿಷರ ನಡುವಿನ ಯುದ್ದಕ್ಕೂ ಇದು ಸಾಕ್ಷಿಯಾಗಿತ್ತು.


ಶ್ರೀ ರಮಣ ಆಶ್ರಮ

ತಿರುವಣ್ಣಾಮಲೈ ಪಟ್ಟಣದ ಹೃದಯಭಾಗದಲ್ಲಿ 20ನೇ ಶತಮಾನದ ಋಷಿ ರಮಣ ಮಹರ್ಷಿ ಸ್ಥಾಪಿಸಿದ ಪ್ರಶಾಂತವಾದ ಶ್ರೀ ರಮಣಾಶ್ರಮ ಧ್ಯಾನಕ್ಕೆ ಸೂಕ್ತ ಸ್ಥಳ. ಇಲ್ಲಿ ಪ್ರವಚನಗಳು ನಡೆಯುತ್ತದೆ. ಸಾಕಷ್ಟು ಪುಸ್ತಕ ಸಂಗ್ರಹಗಳನ್ನು ಇಲ್ಲಿ ಕಾಣಬಹುದು.
1922ರಲ್ಲಿ ಸ್ಥಾಪಿಸಲಾದ ಅಂತಾರಾಷ್ಟ್ರೀಯ ಯಾತ್ರಾ ಸ್ಥಳವಾದ ಇಲ್ಲಿ ಚಾರಿಟಬಲ್ ಆಸ್ಪತ್ರೆ, ಗ್ರಂಥಾಲಯ ಮತ್ತು ಪ್ರಕಟಣೆ ವಿಭಾಗಗಳಿವೆ. ಅಣ್ಣಾಮಲೈಯಾರ್ ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿದೆ.

ರಮಣ ಮಹರ್ಷಿ ಪ್ರತಿಮೆ

ಮರದಿಂದ ನಿರ್ಮಿಸಲ್ಪಟ್ಟಿರುವ ರಮಣಾಶ್ರಮದ ರಸ್ತೆಯ ಮೇಲೆ 2014 ರಲ್ಲಿಸ್ಥಾಪನೆಗೊಂಡ 8 ಅಡಿ ಎತ್ತರದ ರಮಣ ಮಹರ್ಷಿಯ ಕಂಚಿನ ಪ್ರತಿಮೆ ಇದೆ. ಧ್ಯಾನಕ್ಕೆ ಸೂಕ್ತ ಸ್ಥಳ ಇದಾಗಿದೆ. ಇಲ್ಲಿ ಕಲ್ಲುಗಳ ಮೇಲೆ ರಮಣ ಮಹರ್ಷಿಯ ಸಂದೇಶವನ್ನು ಕಾಣಬಹುದು.

Exit mobile version