ಬೇಸಿಗೆ ರಜೆಯಲ್ಲಿ ತಿರುಗಾಡಿಕೊಂಡು ಬರಲು (summer travel) ಒಮ್ಮೆಯಾದರೂ ಹೊರಗೆ ಹೋಗದಿದ್ದರೆ, ಕುಟುಂಬವಾಗಿ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ರಜೆ ಎಂಬ ಒಂದು ಕಾರಣದಿಂದಾಗಿ, ಬಹುತೇಕ ಮಧ್ಯಮವರ್ಗದ ಮಂದಿ ಒಂದು ಪ್ರವಾಸವನ್ನು ಮಾಡಿಯೇ ತೀರುತ್ತಾರೆ. ಹತ್ತಿರವೇ ಆಗಿರಲಿ, ದೂರವೇ ಇರಲಿ, ಒಂದು ಪ್ರವಾಸ ಹಲವು ಏಕತಾನತೆಗಳನ್ನು ದೂರ ಇರಿಸುತ್ತದೆ ಎಂಬುದು ನಿಜವೂ ಹೌದು. ಬೇಸಿಗೆ ಬಿರು ಬಿಸಲಲ್ಲಿ, ಅದೇ ವಾಟರ್ ಪಾರ್ಕ್ ವಿಸಿಟ್, ಮೃಗಾಲಯಗಳ ಭೇಟಿ ಇತ್ಯಾದಿಗಳಿಂದ ಮನಸ್ಸಿಗೆ ನಿಜವಾದ ಶಾಂತಿ ನೆಮ್ಮದಿ ಸಿಗದಿದ್ದರೆ, ನಿಮ್ಮ ಮನಸ್ಸೇನೋ ಬೇರೆಯದನ್ನು ಹುಡುಕುತ್ತಿದ್ದರೆ, ಅಂಥವರಿಗೆ ಬೇಕು ಹಿಮಪರ್ವತಗಳು (hill stations)!
ಹೌದು. ಹಿಮಪರ್ವತಗಳನ್ನು ಕಣ್ತುಂಬಿಕೊಂಡರೆ ಸಿಗುವ ಶಾಂತಿ, ನೆಮ್ಮದಿಗಳೇ ಬೇರೆ. ಹಿಮಪರ್ವತವನ್ನೇರುವ ಕಷ್ಟ ತೆಗೆದುಕೊಳ್ಳದಿದ್ದರೂ, ಸುಮ್ಮನೆ ಅವುಗಳು ಕಣ್ಣಿಗೆ ಕಂಡರೂ ಸಾಕು, ಜೀವನ ಪಾವನ ಅಂತ ನಿಮಗನ್ನಿಸಿದರೆ, ಈ ಬೇಸಿಗೆ ರಜೆಯಲ್ಲಾದರೂ ಇಂಥ ದೃಶ್ಯ ಎಲ್ಲಿ ಸಿಕ್ಕೀತು ಎಂಬ ಅನುಮಾನ ನಿಮಗಿದ್ದರೆ, ಖಂಡಿತವಾಗಿಯೂ ನಿಮ್ಮ ಅನುಮಾನಕ್ಕೆ ಪರಿಹಾರ ಇಲ್ಲಿದೆ. ನಮ್ಮ ದೇಶದಲ್ಲಿ ಬೇಸಿಗೆಯಲ್ಲಿ, ಹೊಟೇಲಿನ ಕಿಟಕಿ ಬದಿಯಲ್ಲಿ ಕೂತು, ಹಿಮಬೆಟ್ಟಗಳನ್ನು ನೋಡುವ ಕನಸು ಕಾಣಬಹುದು. ಅದೂ ಎಪ್ರಿಲ್ ಮೇ ತಿಂಗಳಲ್ಲಿ.
ಹೌದು. ಬನ್ನಿ ಈ ಕಡು ಬೇಸಿಗೆಯಲ್ಲಿ ಮನಸ್ಸು ತಂಪು ತಂಪು ಕೂಲ್ ಆಗಬೇಕೆಂದರೆ ಈ ಜಾಗಗಳಿಗೊಮ್ಮೆ ಹೋಗಿ ಬನ್ನಿ.
1. ಮನಾಲಿ: ಉತ್ತರ ಭಾರತದಲ್ಲಿ ಬೇಸಿಗೆಯಲ್ಲೂ ಹಿಮ ಬೆಟ್ಟಗಳನ್ನು ನೋಡಬಹುದು, ಹಿಮದಲ್ಲಿ ಉರುಳಾಡಬಹುದು ಎಂದರೆ ಅಂಥ ಪ್ರಸಿದ್ಧ ಜಾಗಗಳಲ್ಲಿ ಪ್ರಮುಖವಾದದ್ದು ಹಿಮಾಚಲದ ಮನಾಲಿ. ಮನಾಲಿಯಲ್ಲಿ ಎಪ್ರಿಲ್ ಮೇ ತಿಂಗಳಲ್ಲೂ ಎತ್ತರದ ಜಾಗಗಳಲ್ಲಿ ಹಿಮ ಸಿಗುತ್ತದೆ. ಹಿಮ ಬೆಟ್ಟ್ಗಳಂತೂ ನಿಮ್ಮ ಕಣ್ಣಳತೆಯಲ್ಲೆಲ್ಲ ಕಾಣ ಸಿಕ್ಕೀತು. ಹೆಚ್ಚು ಎತ್ತರದ ಜಾಗಗಳಾದ ರೋಹ್ತಂಗ್ ಮತ್ತಿತರ ಕಡಿದಾದ ರಸ್ತೆಗೆ ಕಾಲಿಟ್ಟರೆ, ಹಿಮದ ಅದ್ಭುತ ಅನುಭವಗೊಳೊಂದಿಗೆ ನಿಮ್ಮ ಬೇಸಿಗೆಯನ್ನು ತಂಪಾಗಿಸಬಹುದು.
2. ಯಮತಂಗ್ ಕಣಿವೆ: ಸಿಕ್ಕಿಂನ ಯಮತಂಗ್ ಕಣಿವೆಯಲ್ಲಿ ಏಪ್ರಿಲ್ ಮೇ ತಿಂಗಳಲ್ಲೂ ಚಳಿಗಾಲದಂತೆ ಸ್ವೆಟರ್ ಹಾಕಿಕೊಂಡು, ಬೆಚ್ಚಗೆ ಮಲಗಬಹುದು, ಸೂರ್ಯನ ಬಿಸಿಲಿನಲ್ಲೂ ಉಣ್ಣೆಯ ಶಾಲು ಹೊದ್ದುಕೊಂಡು ತಿರುಗAಡಬಹುದ. ಹಿಮದ ಉಂಢೇಘಳನ್ನು ಮಾಡಿ ಒಬ್ಬರಿಗೊಬ್ಬರು ಎರಚಾಡಬಹುದು. ವರ್ಷವಿಡೀ ಹಿಮದಲ್ಲಿ ಹೊರಳಾಡಿಕೊಂಡಿರುವ ಈ ಯಮತಂಗ್ ಕಣಿವೆಯನ್ನುಬೇಸಿಗೆಯಲ್ಲಿ ಅನುಭವಿಸುವುದೆಂದರೆ ಅದು ಮಜಾವೇ!
3. ಪೆಹಲ್ಗಾಂ: ಕಾಶ್ಮೀರವೆಂಬ ಸ್ವರ್ಗದಲ್ಲೂ ಕೂಡಾ ಬೇಸಿಗೆಯಲ್ಲಿ ಹಿಮ ಮುಟ್ಟಬಹುದು. ಪೆಹಲ್ಗಾಂ, ಗುಲ್ಮಾರ್ಗ್ ಮತ್ತಿತರ ಕೆಲವು ಜಾಗಗಳಲ್ಲಿ ಹಾಗೂ ಇನ್ನೂ ಎತ್ತರದ ಕೆಲವು ಜಾಗಗಳಲ್ಲಿ ಹಿಮ ಬೇಸಗೆಯಲ್ಲೂ ಸಿಕ್ಕೀತು. ಹಿಮಾಲಯದ ಅದ್ಭುತ ಸೌಂದರ್ಯವನ್ನು ನೋಡುತ್ತಾ, ವಸಂತ ಕಾಲದ ಕಾಶ್ಮೀರದ ನಿಜವಾದ ಸೌಂದರ್ಯವನ್ನು ಅನುಭವಿಸಬೇಕೆಂದರೆ ಎಪ್ರಿಲ್ ಮೇ ತಿಂಗಳು ಪರ್ಫೆಕ್ಟ್ ಸಮಯ.
4. ಲಡಾಖ್: ಸಾಹಸ ಪ್ರಿಯರು ನೀವಾಗಿದ್ದರೆ, ಲಡಾಖ್ ಸರಿಯಾದ ಆಯ್ಕೆ. ಹಿಮಚ್ಛಾದಿತ ಬೆಟ್ಟಗಳ ಸಾಲು ಸಾಲು, ಹಿಮಕರಗಿದ ನೀರಿನ ಝರಿಗಳು, ಸೂರ್ಯನ ಬಿಸಿಲ ಝಳ ಎಲ್ಲವೂ ಸಮನಾಗಿ ಹಂಚಿ ಹೋಗಿರುವ ಸಮಯವೆಂದರೆ ಇದೇ. ಲಡಾಖ್ ಎಂಬ ಶೀತ ಮರುಭೂಮಿಯಲ್ಲಿ ಬೇಸಿಗೆಯಲ್ಲೂ ಹಿಮ ಸಿಗುತ್ತದೆ. ಹಿಮಚ್ಛಾದಿತ ಪರ್ವತಗಳ ಸಾಲು ಸಾಲು ನಿಮ್ಮ ನಾಲ್ಕೂ ದಿಕ್ಕುಗಳಲ್ಲೂ ಸುತ್ತುವರಿದಿರುತ್ತದೆ ಅಂದ ಮೇಲೆ ಕೇಳಬೇಕೆ!