Site icon Vistara News

Viral Video | ನಂಗೂ ಮಸಾಜ್‌ ಬೇಕು ಎಂದು ಮುಖ ಕೊಟ್ಟ ಬೆಕ್ಕು!

ಪಾಪ! ಪ್ರಾಣಿಗಳಿಗೂ ಕೂಡ ಸುಸ್ತಾಗಿರುತ್ತದೆ. ಮನುಷ್ಯರಂತೆ ಅವುಗಳು ಕೂಡ ದಿನ ನಿತ್ಯದ ಕಾರ್ಯಗಳಲ್ಲಿ ದಣಿದಿರುತ್ತವೆ. ಹೀಗಾಗಿ ಅವುಗಳಿಗೂ ಮಸಾಜ್‌ ಬೇಕಲ್ಲವೇ! ಹೀಗೆ ಮಸಾಜ್‌ ಮಾಡಿಸಿಕೊಳ್ಳುವ ಬೆಕ್ಕಿನ ವಿಡಿಯೊ ಎಲ್ಲೆಡೆ ವೈರಲ್‌ (Viral Video) ಆಗಿದೆ. ಈ ಬೆಕ್ಕು ಹೇಗೆ ತನ್ನ ಮಾಲೀಕರಿಂದ ಮಸಾಜ್‌ ಮಾಡಿಸಿಕೊಳ್ಳುತ್ತದೆ ನೋಡಿ.

ಇಲ್ಲೊಬ್ಬರು ತಮ್ಮ ಮೀನಖಂಡಕ್ಕೆ ಒಂದು ಉಪಕರಣದ ಮೂಲಕ ಮಸಾಜ್‌ ಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ ಒಂದು ಪುಟ್ಟ ಬೆಕ್ಕು ಛಂಗನೆ ಹಾರಿ ಬರುತ್ತದೆ. ಆ ಉಪಕರಣಕ್ಕೆ ತನ್ನ ಮುಖವನ್ನಿಡುತ್ತದೆ. ಮುಖ ಹಾಗೂ ಕುತ್ತಿಗೆಯ ಬಳಿ ಆ ಉಪಕರಣದ ಮೂಲಕ ಮಸಾಜ್‌ ಮಾಡಿಸಿಕೊಳ್ಳುತ್ತದೆ. ಸ್ವಲ್ಪ ಹೊತ್ತು ಮಸಾಜ್‌ ಮಾಡಿಸಿಕೊಂಡು ತನ್ನ ಪಾಡಿಗೆ ಹೊರಟು ಹೋಗುತ್ತದೆ. ಮಸಾಜ್‌ ಮಾಡಿಸಿಕೊಳ್ಳುವ ಈ ಬೆಕ್ಕಿನ ವರ್ತನೆ ಎಷ್ಟೊಂದು ಮಜವಾಗಿದೆ! ಮಾಲೀಕರ ಮೀನಖಂಡವನ್ನು ತಲೆದಿಂಬಾಸಿಕೊಂಡು, ಮಸಾಜ್‌ ಮಾಡುವ ಉಪಕರಣವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಈ ಬೆಕ್ಕು ಮಸಾಜ್‌ ಮಾಡಿಸಿಕೊಳ್ಳುತ್ತದೆ.

ಇದನ್ನೂ ಓದಿ: Viral video: ಇದೆಂಥಾ ಬಸ್ಸಾ? ಒಂದೇ ಆಟೊದಲ್ಲಿ 1,2,3,4,5,6,7.. 27 ಜನ! ಬಹುಶಃ ಇದು World record!

Exit mobile version