ವಿಧಾನಸಭೆ: ʻʻನೀವು ಶಾಸಕರಾದ ಮೇಲೆ ಬುರ್ಕಾ ಹಾಕಿರೋರು, ಗಡ್ಡ ಬಿಟ್ಟಿರೋರು ಹತ್ತಿರ ಬರಬೇಡಿ ಅಂತ ಹೇಳ್ತಾ ಇದೀರಾ? ನಿಮಗೆ ಹೇಗೆ ಅನುದಾನ ಕೊಡೋದು?ʼʼ ಹೀಗೊಂದು ಗಂಭೀರ ಪ್ರಶ್ನೆಯನ್ನು ಬಸನಗೌಡ ಪಾಟೀಲ್ ಯತ್ನಾಳ್ (Basana gowda pateel Yatnal) ಅವರಿಗೆ ಕೇಳುವ ಮೂಲಕ ವಿವಾದಕ್ಕೆ ಕಾರಣವಾದರು ವಸತಿ, ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ (Zameer Ahmad Khan). ಅಲ್ಪಸಂಖ್ಯಾತರ ಬಡಾವಣೆಗಳ (Minority layout Development) ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಅದರ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ವಿಚಾರದ ಚರ್ಚೆಯ ವೇಳೆ ಈ ಮಾತುಕತೆ ನಡೆಯಿತು.
ರಾಜ್ಯ ವಿಧಾನಸಭೆಯಲ್ಲಿ (Budget Session 2024) ಸೋಮವಾರ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು, ಅಲ್ಪಸಂಖ್ಯಾತರ ಬಡಾವಣೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಈ ಹಣದ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲಾಗಿದೆ, ಬಿಜೆಪಿ ಶಾಸಕರಿಗೆ ಕೊಟ್ಟಿಲ್ಲʼʼ ಎಂದು ವಿಜಯೇಂದ್ರ ಆರೋಪ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಸತಿ ಸಚಿವ ಜಮೀರ್ ಅಹಮದ್ ಅವರು, ಸಾವಿರ ಕೋಟಿ ಘೋಷಣೆ ಆಗಿರುವುದು ನಿಜ. ಆದರೆ, ಬಿಡುಗಡೆಯಾಗಿರೋದು 165 ಕೋಟಿ ರೂ. ಅಷ್ಟೇ ಇದರಲ್ಲಿ ತಾರತಮ್ಯ ಮಾಡಿಲ್ಲ. ಅಲ್ಪಸಂಖ್ಯಾತರ ಕಾಲೊನಿ ಎಲ್ಲಿ ಜಾಸ್ತಿ ಇದೆಯೋ ಅಲ್ಲಿ ಕೊಡ್ತಿದ್ದೇವೆ. ಎ,ಬಿ,ಸಿ ಅಂತ ವರ್ಗೀಕರಣ ಮಾಡಿ ಅನುದಾನ ಕೊಟ್ಟಿದ್ದೇವೆ. 29 ಶಾಸಕರ ಪೈಕಿ, ನಿಮ್ಮ ಕ್ಷೇತ್ರ (ಬಿ.ವೈ. ವಿಜಯೇಂದ್ರ), ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಕ್ಷೇತ್ರಗಳಿಗೆ ಐದೈದು ಕೋಟಿ ರೂ. ಕೊಟ್ಟಿದ್ದೇವೆ. ಜೆಡಿಎಸ್‌ನವರಿಗೂ ಕೊಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : Residential Schools: ವಸತಿ ಶಾಲೆಯ ಘೋಷವಾಕ್ಯ ಬದಲು; ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲವೆಂದ ಡಿಕೆಶಿ
ಜಮೀರ್ ಉತ್ತರಕ್ಕೆ ಶಾಸಕ ಯತ್ನಾಳ್ ಆಕ್ಷೇಪ
ಜಮೀರ್ ಅಹಮದ್ ಖಾನ್ ಅವರ ಉತ್ತರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅದರಲ್ಲೂ ಮುಖ್ಯವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.
ʻʻನನ್ನ ಕ್ಷೇತ್ರದಲ್ಲಿ 1.20 ಲಕ್ಷ ಅಲ್ಪಸಂಖ್ಯಾತ ಮತದಾರರಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ, ನಾವೇನು ಕಬಡ್ಡಿ ಆಡಬೇಕಾʼʼ ಎಂದು ಯತ್ನಾಳ್ ಕೇಳಿದರು. ಆಗ ಯತ್ನಾಳ್ ಗೆ ತಿರುಗೇಟು ನೀಡಿದ ಜಮೀರ್ ಅಹಮದ್ ಖಾನ್ ಅವರು, ʻʻಯತ್ನಾಳ್ ಅವರು ಅನುದಾನ ಕೊಟ್ಟಿಲ್ಲ ಅಂತ ಹೇಳ್ತಿದ್ದಾರೆ. ಬೇಕಾ, ಕೊಡಬೇಕಾ ನಿಮಗೆ ಅನುದಾನ? ನೀವು ಶಾಸಕರಾದ ಮೇಲೆ ಬುರ್ಕಾ ಹಾಕಿರೋರಯ, ಗಡ್ಡ ಬಿಟ್ಟಿರೋರು ಹತ್ತಿರ ಬರಬೇಡಿ ಅಂತೀರಾ. ನಿಮಗೆ ಹೇಗೆ ಅನುದಾನ ಕೊಡೋದು? ಅಲ್ಪಸಂಖ್ಯಾತ ವಿರೋಧಿ ನಿಲುವು ನಿಮ್ದುʼʼ ಎಂದು ಹೇಲೀದರು.
ಆಗ ಬಿಜೆಪಿ ಶಾಸಕರು ಕೆರಳಿ ನಿಂತರು. ಬಿಡುಗಡೆ ಮಾಡುತ್ತಿರುವ ಹಣ ನಿಮ್ದಾ ? ಸರ್ಕಾರದ ಹಣ ಕೊಡೋದಕ್ಕೆ ನಿಮಗೇನು ಎಂದು ಆಕ್ರೊಶದಿಂದ ಕೇಳಿದರು. ಆಗ ಶಾಸಕ ಅಶ್ವಥ್ ನಾರಾಯಣ್, ಬೊಮ್ಮಾಯಿ ಮತ್ತಿತರರು ಯತ್ನಾಳ್ ನೆರವಿಗೆ ಬಂದರು.
ʻʻಅತಿ ಹೆಚ್ಚು ಅಲ್ಪಸಂಖ್ಯಾತರು ವಿಜಯಪುರದಲ್ಲಿ ಇದ್ದಾರೆ. ಎಷ್ಟು ಅನುದಾನ ಕೊಟ್ಟಿದ್ದೀರಿʼʼ ಎಂದು ಬೊಮ್ಮಾಯಿ ಪ್ರಶ್ನೆ ಮಡಿದರು. ಅದಕ್ಕೂ ತಿರುಗೇಟು ನೀಡಿದ ಜಮೀರ್ ಅಹ್ಮದ್ ಖಾನ್, ʻʻವಿಜಯಪುರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಅನುದಾನಕ್ಕಾಗಿ ನೀವು ಒಂದು ಮನವಿನೂ ಕೊಟ್ಟಿಲ್ಲ ಯತ್ನಾಳ್ ಅವ್ರೇ.. ಅನುದಾನ ಕೇಳದೆ ಕೊಡಬೇಕು ಎಂದರೆ Eಹಗೆ? ಸರಿ ಹಣ ಕೊಟ್ಟರೆ ಅನುದಾನ ವನ್ನು ಅಲ್ಪಸಂಖ್ಯಾತರಿಗೆ ಖರ್ಚು ಮಾಡ್ತೀನಿ ಎಂದು ಒಪ್ಕೊತ್ತೀರಾ ಹೇಳಿʼʼ ಎಂದು ಎಂದ ಜಮ್ಮೀರ್ ಅಹಮದ್ ಖಾನ್ ಪ್ರಶ್ನೆ ಮಾಡಿದರು.