ವಾಷಿಂಗ್ಟನ್: ಅಂಚೆ ಮಾಡುವುದೆಲ್ಲ ಈಗಿನ ಕಾಲಕ್ಕೆ ʼಟೂ ಓಲ್ಡ್ʼ ಎನ್ನುವಂತಹ ಸಂಪ್ರದಾಯ. ಆದರೆ ಹಿಂದಿನ ಕಾಲದಲ್ಲಿ ಆ ಅಂಚೆಯೇ ಜನರ ಸಂಪರ್ಕದ ಸಂಪನ್ಮೂಲವಾಗಿತ್ತು. ಏನೇ ಆದರೂ ಅಂಚೆ ಮೂಲಕವೇ ಅದನ್ನು ದೂರದೂರವರಿಗೆ ತಿಳಿಸಬೇಕಿತ್ತು. ಕೆಲವೊಮ್ಮೆ ಅಂಚೆ ಸರಿಯಾದ ಸಮಯಕ್ಕೆ ತಲುಪಿತ್ತಾದರೂ ಎಷ್ಟೋ ಬಾರಿ ಲೇಟಾಗಿ ತಲುಪಿ ಉಪಯೋಗವೇ ಇಲ್ಲದಂತಾಗುತ್ತಿತ್ತು. ಅದೇ ರೀತಿ ಅಮೆರಿಕದಲ್ಲಿ 1969ರಲ್ಲಿ ಮಾಡಲಾಗಿದ್ದ ಪೋಸ್ಟ್ ಒಂದು ಇದೀಗ ಅಂದರೆ 2023ರಲ್ಲಿ ವಿಳಾಸಕ್ಕೆ (Viral News) ತಲುಪಿದೆ!
ಹೌದು. ಬರೋಬ್ಬರಿ 54 ವರ್ಷಗಳ ನಂತರ ಪೋಸ್ಟ್ ಒಂದು ಅದರ ವಿಳಾಸಕ್ಕೆ ತಲುಪಿದೆ. ಆದರೆ ಈಗ ಆ ವಿಳಾಸದಲ್ಲಿ ಬೇರೆಯ ಕುಟುಂಬವೇ ಇದೆ. ಗ್ಯಾಗ್ನೋನ್ಸ್ ಹೆಸರಿಗೆ ಪೋಸ್ಟ್ ಬಂದಿದ್ದು ಅದು ಯಾರು ಎನ್ನುವುದು ಕೂಡ ಅಂಚೆ ಪಡೆದವರಿಗೆ ತಿಳಿದಿಲ್ಲವಂತೆ. ಈ ವಿಚಾರವಾಗಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್ ಎಂದ ಮಗಳು! ಭಾವುಕರಾದ ತಂದೆ!
“ಇದೊಂದು ವಿಚಿತ್ರ. ನಿಮಗ್ಯಾರಿಗಾದರೂ ಈ ಗ್ಯಾಗ್ನೋನ್ಸ್ ಯಾರು ಎಂದು ತಿಳಿದಿದ್ದರೆ ತಿಳಿಸಿ. ವಿಚಿತ್ರವೆಂದರೆ ಇದರಲ್ಲಿ ವಿಳಾಸದಲ್ಲಿ ಗ್ಯಾಗ್ನೋನ್ಸ್ ಅಥವಾ ಆ ವಿಳಾಸದಲ್ಲಿ ಯಾರಿದ್ದಾರೋ ಅವರಿಗೆ ಎಂದು ಬರೆಯಲಾಗಿದೆ” ಎಂದು ಪೋಸ್ಟ್ ಪಡೆದ ಜೆಸ್ಸಿಕಾ ಮಾಹಿತಿ ನೀಡಿದ್ದಾರೆ. ಹಾಗೆಯೇ ಅವರ ಅಕ್ಕ ಪಕ್ಕದ ಮನೆಯವರ ಮಾಹಿತಿ ಪ್ರಕಾರ ಗ್ಯಾಗ್ನೋನ್ಸ್ ಅವರು ಜೆಸ್ಸಿಕಾ ಅವರ ಮನೆಯೆ ಮಾಜಿ ಮಾಲೀಕರಾಗಿದ್ದರಂತೆ. ಅವರು ಆ ಮನೆಯಲ್ಲಿ 90ರ ದಶಕದ ತನಕ ವಾಸವಿದ್ದರಂತೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜನರು ಈ ಅಂಚೆಯ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಅದರಲ್ಲೂ ಪೋಸ್ಟ್ ಮೇಲೆ ಇತ್ತೀಚಿನ ಅಂಚೆ ಚೀಟಿ ಇರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. “ಹೀಗೆ ನಮಗೂ ನಮ್ಮ ಪೂರ್ವಜರ ಯಾವುದಾದರೂ ಅಂಚೆ ಸಿಗುವುದಾಗಿದ್ದರೆ ಅದೆಷ್ಟು ಕುತೂಹಲಕಾರಿಯಾಗಿರುತ್ತಿತ್ತು” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಈ ಪೋಸ್ಟ್ ಅನ್ನು ಜೆಸ್ಸಿಕಾ ಅವರು ಫೇಸ್‌ಬುಕ್‌ನಲ್ಲಿ ಜುಲೈ 18ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಪೋಸ್ಟ್ ಹಲವಾರು ಜನರಿಂದ ಲೈಕ್‌ಗಳನ್ನು ಪಡೆದುಕೊಂಡಿದೆ. ಹತ್ತಾರು ಮಂದಿ ವಿಧ ವಿಧದ ಕಾಮೆಂಟ್‌ಗಳನ್ನು ಪೋಸ್ಟ್‌ಗೆ ಮಾಡಿದ್ದಾರೆ.