ನವದೆಹಲಿ: ಕರ್ನಾಟಕದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದಾಗ ಮಹಿಳೆಯರು ಬಸ್ಸುಗಳಲ್ಲಿ ಸೀಟಿಗಾಗಿ ಕುಸ್ತಿಯಾಡಿದ್ದ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದವು. ಅದೇ ರೀತಿಯಲ್ಲಿ ಮುಂಬೈ ಸ್ಥಳೀಯ ರೈಲಿನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ವಿಡಿಯೊವನ್ನೂ ನೀವು ನೋಡಿದ್ದೀರಿ. ಇದೀಗ ಈ ಎಲ್ಲ ಘಟನೆಗಳ ನಂತರ ರಾಷ್ಟ್ರ ರಾಜಧಾನಿ ನವದೆಹಲಿಯ ಮೆಟ್ರೋ ರೈಲಿನಲ್ಲಿ ನಿಂತುಕೊಳ್ಳುವುದಕ್ಕೆ ಜಾಗದ ವಿಚಾರದಲ್ಲಿ ಇಬ್ಬರು ಮಹಿಳೆಯರು ಜಗಳ ಆಡಿಕೊಂಡಿದ್ದಾರೆ. ಕೈ ಕೈ ಕೂಡ ಮಿಲಾಯಿಸಿಕೊಂಡಿರುವ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ಚೂಡಿದಾರ ತೊಟ್ಟ ಮಹಿಳೆಯರಿಬ್ಬರು ಮೆಟ್ರೋ ರೈಲಿನಲ್ಲಿ ನಿಂತುಕೊಳ್ಳುವ ವಿಚಾರದಲ್ಲಿ ಜಗಳವಾಡಿದ್ದಾರೆ. ಅವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಾರೆ ಕೂಡ. ಆಗ ಅಲ್ಲೇ ಕುಳಿತಿದ್ದ ಮಹಿಳೆಯೊಬ್ಬರು ಹಾಗೂ ನಿಂತಿದ್ದ ಮಹಿಳೆಯೊಬ್ಬರು ಅಡ್ಡ ಬಂದಿದ್ದು, ಇಬ್ಬರು ಹೊಡೆದಾಡಿಕೊಳ್ಳುವುದನ್ನು ತಪ್ಪಿಸುತ್ತಾರೆ. ಆದರೆ ಅವರ ಮಾತಿನ ಜಗಳ ಮಾತ್ರ ನಿಲ್ಲುವುದಿಲ್ಲ. ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಬೈದುಕೊಳ್ಳುತ್ತಲೇ ಇರುತ್ತಾರೆ.
ಇದನ್ನೂ ಓದಿ: Viral Video : ಚಿರತೆ ಮೇಲೇ ದಾಳಿ ಮಾಡಿದ ಮಂಗಗಳು! ಮುಂದೆ ಏನಾಯ್ತು?
ಈ ದೃಶ್ಯ ಕಂಡು ಮೆಟ್ರೋ ರೈಲಿನಲ್ಲಿ ಕುಳಿತಿದ್ದ ಕೆಲವರು ನಗುತ್ತಿದ್ದರೆ, ಇನ್ನು ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಅದೇ ರೀತಿ ಅವರ ಹತ್ತಿರ ಕುಳಿತಿದ್ದ ವ್ಯಕ್ತಿಯೊಬ್ಬರು ಜಗಳದ ದೃಶ್ಯವನ್ನು ಸೆರೆ ಹಿಡಿದಿದ್ದು, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೊ ಈಗ ಭಾರೀ ವೈರಲ್ ಆಗಿದೆ.
Kalesh b/w Two Woman inside Delhi metro over not giving place to stand pic.twitter.com/8a11cfg1Hz
— Ghar Ke Kalesh (@gharkekalesh) August 15, 2023
ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಘರ್ ಕೆ ಕಲೇಶ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 15ರಂದು ಸಂಜೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. “ದೆಹಲಿ ಮೆಟ್ರೋ ರೈಲಿನಲ್ಲಿ ನಿಲ್ಲುವ ಜಾಗದ ವಿಚಾರದಲ್ಲಿ ಇಬ್ಬರು ಹೆಣ್ಣು ಮಕ್ಕಳ ನಡುವೆ ಜಗಳ” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಡಲಾಗಿದೆ. ವಿಡಿಯೊವನ್ನು ಈಗಾಗಲೇ 58 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 500ಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹತ್ತಾರು ಮಂದಿ ವಿಡಿಯೊವನ್ನು ತಮ್ಮ ವಾಲ್‌ಗಳಿಗೆ ರಿಟ್ವೀಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಸ್ಮಾರ್ಟ್ ಬೆಂಗಳೂರಿನಲ್ಲಿ ಆಟೊ ಚಾಲಕರೂ ಸ್ಮಾರ್ಟ್! ವಾಚ್‌ನಲ್ಲಿ ಕ್ಯೂಆರ್ ಕೋಡ್!
ಈ ವಿಡಿಯೊ ಬಗ್ಗೆ ಹತ್ತಾರು ಮಂದಿ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇನ್ನು ಮುಂದೆ ಕೆಲಸ ಹುಡುಕುವವರು ದೆಹಲಿ ಮೆಟ್ರೋ ಹತ್ತಿಕೊಂಡು ಡೈಲಿ ವ್ಲಾಗ್ ಮಾಡಬಹುದು. ಪ್ರತಿದಿನ ಹೊಸ ಹೊಸ ರೀತಿಯ ಜಗಳಗಳನ್ನು ಕಾಣಬಹುದು. ಒಳ್ಳೆಯ ಕಂಟೆಂಟ್ ಸಿಗುತ್ತದೆ”, “ಈ ಹೆಣ್ಣು ಮಕ್ಕಳನ್ನು ಮೆಟ್ರೋ ಮಾತ್ರವಲ್ಲ, ಎಲ್ಲೇ ಹೋದರೂ ಜಗಳ ಮಾತ್ರ ತಪ್ಪುವುದಿಲ್ಲ” ಎನ್ನುವಂತಹ ಕಮೆಂಟ್‌ಗಳು ವಿಡಿಯೊಗೆ ಬಂದಿವೆ.