ಬೆಂಗಳೂರು: ಇಂಗ್ಲಿಷ್ ಸುಲಭ ಅಂಥ ಹೇಳೋದಷ್ಟೇ ಸುಲಭ. ಆದರೆ, ಸರಿಯಾಗಿ ಇಂಗ್ಲಿಷ್ ಮಾತನಾಡಲು ಇರುವ ತೊಡಕು ಅನುಭವಿಸಿದವರಿಗೇ ಮಾತ್ರ ಗೊತ್ತು. ಆದರೆ, ಒಂದು ಬಾರಿ ಇಂಗ್ಲಿಷ್ ಅನ್ನು ಅರಗಿಸಿಕೊಂಡರೆ ಆ ಮೇಲೆ ಅದರಷ್ಟು ಸುಲಭ ಇನ್ನೊಂದಿಲ್ಲ ಎಂಬುದನ್ನೂ ಕೇಳಿದ್ದೇವೆ. ಇಂಥದ್ದೇ ಒಂದು ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.(Viral News) ಗೋವಾದಲ್ಲಿ ಬಳೆ ಮಾರುವ ಮಹಿಳೆಯೊಬ್ಬಳು ಸೂಪರ್ ಇಂಗ್ಲಿಷ್ ಮಾತನಾಡುವ ವಿಡಿಯೊ ಅದಾಗಿದೆ. ಮಹಿಳೆಯ ಇಂಗ್ಲಿಷ್ಗೆ ವಿಡಿಯೊ ಮಾಡುವ ಫಾರಿನರೇ ಫಿದಾ ಆಗಿದ್ದಾನೆ.
ಗೋವಾದ ಸುಂದರವಾದ ವಗಾಟರ್ ಬೀಚ್ನಲ್ಲಿ ಮಹಿಳೆ ಬಳೆ ಮಾರುವವರು. ಅವರು ಇಂಗ್ಲಿಷ್ನಲ್ಲಿ ಮಾತನಾಡುವ ಶೈಲಿ ಜನರನ್ನು ಆಕರ್ಷಿಸಿದೆ. ಸುಶಾಂತ್ ಪಾಟೀಲ್ ಎಂಬುವರು ವಿಡಿಯೊ ಹಂಚಿಕೊಂಡಿದ್ದಾರೆ. ಈ ಕ್ಲಿಪ್ನಲ್ಲಿ ಬಳೆ ಮಾರುವ ಮಹಿಳೆ ಕೋವಿಡ್ ನಂತರದ ಕಡಲತೀರದ ತಮ್ಮ ಕಷ್ಟಗಳನ್ನು ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ವ್ಯಕ್ತಪಡಿಸಿದ್ದಾರೆ.
ಕಪ್ಪು ಬಂಡೆಯ ಬಂಡೆಗಳು ಮತ್ತು ಪ್ರಶಾಂತ ನೀರಿಗೆ ಹೆಸರುವಾಸಿಯಾದ ವಾಗೇಟರ್ ಬೀಚ್, ಗೋವಾದ ಹೆಚ್ಚು ಜನದಟ್ಟಣೆಯ ಕಡಲತೀರಗಳಿಂದ ದೂರವಿರುವ ಪ್ರಶಾಂತತೆಯನ್ನು ಬಯಸುವ ಪ್ರವಾಸಿಗರಿಗೆ ಬಹಳ ಹಿಂದಿನಿಂದಲೂ ಇಷ್ಟ. ವಿಡಿಯೊದಲ್ಲಿ, ಮಹಿಳೆ ಬಳೆಗಳು ಮತ್ತು ಮಣಿಯ ಹಾರಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಕಡಲತೀರದ ಬದಲಾಗುತ್ತಿರುವ ಸನ್ನಿವೇಶಗಳನ್ನು ವಿಡಿಯೊ ಮಾಡುವ ವ್ಯಕ್ತಿಗೆ ಇಂಗ್ಲಿಷ್ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಎಂತ ‘ಸಾವ್’ ಮರ‍್ರೆ; ‘ನಾನು ಸತ್ತಿಲ್ಲ’ ಎಂದ ಪೂನಂ ಪಾಂಡೆಯನ್ನು ಬಂಧಿಸಿ ಎಂದ ಜನ!
ಈ ವೀಡಿಯೊ 828 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ಇಂಗ್ಲಿಷ್ ಭಾಷೆಯ ಮೇಲಿನ ಮಹಿಳೆಯ ಹಿಡಿತದಿಂದ ಜನರು ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅವರು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರವರಿಗಿಂತಲೂ ಹೆಚ್ಚು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ್ದನ್ನು ಗಮನಿಸಿದ್ದಾರೆ. ಕಡಲತೀರದಲ್ಲಿ ಕಂಡುಬಂದ ಬದಲಾವಣೆಗಳನ್ನು ವಿವರಿಸುವ ಅವರ ಸಾಮರ್ಥ್ಯ, ವಿಶೇಷವಾಗಿ ಕೊರೊನಾ ರೋಗದ ನಂತರ, ವೀಕ್ಷಕಕರ ಕುರಿತಾಗಿದೆ.
ಕಂಡಕ್ಟರ್ ಸಾಹಸಕ್ಕೆ ಕ್ಷಣಾರ್ಧದಲ್ಲೇ ಉಳಿಯಿತು ಯುವತಿಯ ಪ್ರಾಣ; ಇಲ್ಲಿದೆ ವಿಡಿಯೊ
ಬೆಂಗಳೂರು: ತಮಿಳುನಾಡಿನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದರಿಂದ ಕೆಳಕ್ಕೆ ಬೀಳುತ್ತಿದ್ದ ಮಹಿಳೆಯನ್ನು ಆ ಬಸ್ನ ಕಂಡಕ್ಟರ್ ಕಾಪಾಡಿದ ವಿಡಿಯೊವೊಂದು ವೈರಲ್ ಆಗಿದೆ. ಬಸ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈರೋಡ್ ಮತ್ತು ಮೆಟ್ಟೂರು ನಡುವೆ ಪ್ರಯಾಣಿಸುವ ಖಾಸಗಿ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಕಂಡಕ್ಟರ್ ಏನಾದರೂ ತಮ್ಮ ಚಾತುರ್ಯ ತೋರದೇ ಹೋಗಿದ್ದರೆ ಕೆಳಕ್ಕೆ ಬಿದ್ದ ಮಹಿಳೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿದ್ದವು.
ವೀಡಿಯೊದಲ್ಲಿ, ಯುವತಿಯೊಬ್ಬಳು ಬಸ್ಸಿನೊಳಗೆ ನಿಂತಿರುವುದನ್ನು ನಾವು ಕಾಣಬಹುದು. ಕಂಡಕ್ಟರ್ ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತು ಹೊರಗೆ ನೋಡುತ್ತಿರುತ್ತಾರೆ. ಮಹಿಳೆ ಸೀಟಿನಿಂದ ಎದ್ದು ಇಳಿಯಲೆಂದು ಮುಂಭಾಗಕ್ಕೆ ನಡೆಯಲು ಪ್ರಾರಂಭಿಸಿದ್ದರು. ಆಕೆ ಮುಂಭಾಗದ ಕಡೆಗೆ ನಡೆಯುತ್ತಿರುವಾಗ ಸಮತೋಲನ ಕಳೆದುಕೊಂಡು ಬೀಳುತ್ತಾರೆ. ಅವರ ಮುಂದಿನ ಬಾಗಿಲ ಮೂಲಕ ಹೊರಕ್ಕೆ ಬೀಳುವ ಹಂತಕ್ಕೆ ತಲುಪಿದ್ದರು.
ಕಂಡಕ್ಟರ್ ಯುವತಿ ಬೀಳುವುದನ್ನು ನೋಡಿ ತಕ್ಷಣ ಆಕೆಯನ್ನು ಹಿಡಿದಿದ್ದಾನೆ. ಈ ಎಲ್ಲ ದೃಶ್ಯಗಳು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗಿದೆ. ಕಂಡಕ್ಟರ್ ಯುವತಿಯ ಚೀಲ ಮತ್ತು ಕೂದಲನ್ನು ಹಿಡಿದು ಕಾಪಾಡುತ್ತಾನೆ. ಕ್ಯಾಬಿನ್ ನಿಂದ ಕಿರುಚಾಟ ಕೇಳಿದ ನಂತರ ಬಸ್ ಚಾಲಕ ನಿಧಾನಗೊಳಿಸುತ್ತಾಣೆ. ಕಂಡಕ್ಟರ್ ಮಹಿಳೆಯನ್ನು ಮೇಲಕ್ಕೆ ಎಳೆದಿದ್ದಾರೆ ಬಳಿಕ ಬಸ್ನೊಳಗಿದ್ದ ಇತರ ಪ್ರಯಾಣಿಕರು ಆಕೆಗೆ ಮೇಲಕ್ಕೆ ಬರಲು ಸಹಾಯ ಮಾಡುತ್ತಾರೆ. ಘಟನೆಯಲ್ಲಿ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದು ಅದೃಷ್ಟವೇ ಸರಿ. ವರದಿಗಳ ಪ್ರಕಾರ ಮಹಿಳೆ ನಂತರ ತನ್ನ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ನಿಲ್ದಾಣದಲ್ಲಿ ಬಸ್ ಇಳಿದಿದ್ದರು.