ಹತ್ತು ವರ್ಷಗಳ ಹಿಂದೆ ಮಾಡಿಸಿರುವ ಹಳೆಯ ಆಧಾರ್ ಕಾರ್ಡ್‌ಗಳು (Aadhaar Card Fact Check) ಜೂನ್ 14ರ ಬಳಿಕ ಅಮಾನ್ಯವಾಗಲಿದೆ. ಹೀಗಾಗಿ ಆಧಾರ್ ಕಾರ್ಡ್‌ಗಳ ನವೀಕರಣಕ್ಕೆ ಇದಕ್ಕಿಂತ ಮೊದಲು ನವೀಕರಣ ಮಾಡುವುದು ಅಗತ್ಯ. ಇಲ್ಲವಾದರೆ ಬಳಿಕ ಹಳೆಯ (old) ಆಧಾರ್ ಕಾರ್ಡ್ ಗಳು ರದ್ದಾಗಲಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (viral news) ಆಗುತ್ತಿದೆ.
ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ಅನ್ನು ನವೀಕರಿಸದಿರುವ ಭಾರತೀಯ ನಾಗರಿಕರು ತಮ್ಮ ಮಾಹಿತಿಯನ್ನು ನವೀಕರಿಸಬೇಕು ಎಂದು ಆಧಾರ್ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೇಳಿದೆ. ಈ ಕಾರಣಕ್ಕಾಗಿಯೇ ಜೂನ್ 14ರವರೆಗೆ ನಿಮ್ಮ ಹಳೆಯ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸುವ ಆಯ್ಕೆಯನ್ನು ಸಂಸ್ಥೆ ನೀಡಿದೆ.
ನವೀಕರಿಸದಿದ್ದರೆ ಏನಾಗುವುದು?
ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಜೂನ್ 14ರಂದು ಕೊನೆಯ ದಿನವಾಗಿದೆ. ಆದರೆ ಅದರ ಅನಂತರ ಹಳೆಯ ಆಧಾರ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಈ ದಿನಾಂಕದ ಬಳಿಕ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುವುದಿಲ್ಲ. ಕಾರ್ಡ್ ಹೊಂದಿರುವವರು ಅದನ್ನು ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬೇಕಾಗುತ್ತದೆ.
ನವೀಕರಿಸುವುದು ಹೇಗೆ?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ ಅಧಿಕೃತ ವೆಬ್ ಸೈಟ್ https://myaadhaar.uidai.gov.in/ಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಒಂದು ಬಾರಿಯ ಪಾಸ್‌ವರ್ಡ್ (OTP) ಬಳಸಿ ಲಾಗ್ ಇನ್ ಮಾಡಬೇಕು.
ನಿಮ್ಮ ಪ್ರೊಫೈಲ್‌ನಲ್ಲಿ ಪ್ರದರ್ಶಿಸಲಾದ ಗುರುತು ಮತ್ತು ವಿಳಾಸದ ವಿವರಗಳನ್ನು ಪರಿಶೀಲಿಸಿ. ಪ್ರೊಫೈಲ್‌ನಲ್ಲಿ ಪ್ರದರ್ಶಿಸಲಾದ ವಿವರಗಳು ತಪ್ಪಾಗಿದ್ದರೆ ದಯವಿಟ್ಟು ‘ಮೇಲಿನ ವಿವರಗಳು ಸರಿಯಾಗಿವೆಯೇ’ ಎಂದು ನಾನು ಪರಿಶೀಲಿಸುತ್ತೇನೆ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ಬಳಿಕ ನೀವು ಸಲ್ಲಿಸಲು ಬಯಸುವ ಡ್ರಾಪ್-ಡೌನ್ ಮೆನುವಿನಿಂದ ಗುರುತಿನ ದಾಖಲೆಯನ್ನು ಆಯ್ಕೆ ಮಾಡಿ. ನಿಮ್ಮ ಗುರುತಿನ ದಾಖಲೆಯನ್ನು ಅಪ್‌ಲೋಡ್ ಮಾಡಿ (ಗಾತ್ರ 2 MB ಗಿಂತ ಕಡಿಮೆ; ಫೈಲ್ ಫಾರ್ಮ್ಯಾಟ್ JPEG, PNG ಅಥವಾ PDF) ನೀವು ಸಲ್ಲಿಸಲು ಬಯಸುವ ಡ್ರಾಪ್- ಡೌನ್ ಮೆನುವಿನಿಂದ ವಿಳಾಸ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿ. ನಿಮ್ಮ ವಿಳಾಸ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಿ (ಗಾತ್ರ 2 MB ಗಿಂತ ಕಡಿಮೆ; ಫೈಲ್ ಫಾರ್ಮ್ಯಾಟ್ JPEG, PNG ಅಥವಾ PDF). ಬಳಿಕ ನಿಮ್ಮ ಒಪ್ಪಿಗೆಯನ್ನು ಸಲ್ಲಿಸಿ.
ಇದನ್ನೂ ಓದಿ: Viral News: ನ್ಯಾಯ ಕೊಡಿಸಿ ಎಂದು ಠಾಣೆ ಎದುರೇ ಎಸ್‌ಐ ಪತ್ನಿ ಅಹೋರಾತ್ರಿ ಧರಣಿ; ಏನಿದು ಕೇಸ್?
ಸಲ್ಲಿಸಬೇಕಿರುವ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ ಅನ್ನು ನವೀಕರಿಸಲು ಯಾವುದಾದರೂ ದಾಖಲೆಗಳು ಬೇಕಾಗುತ್ತವೆ.
ಗುರುತಿನ ಚೀಟಿಗಾಗಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಇತ್ಯಾದಿ
ವಿಳಾಸ ಪುರಾವೆಗಾಗಿ ವಿದ್ಯುತ್ ಬಿಲ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇತ್ಯಾದಿ.