ಅಲಹಾಬಾದ್: ತಾನು ಧರಿಸಿದ ಉಡುಪಿಗೇ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನರ್ ಇಟ್ಟುಕೊಂಡು ವಕೀಲರ ಬಳಿ ಭಕ್ಷೀಸು(ಟಿಪ್ಸ್) ಪಡೆಯುತ್ತಿದ್ದ ಅಲಹಾಬಾದ್ ಹೈಕೋರ್ಟ್ನ ಜಮಾದಾರನನ್ನು ಅಮಾನತು ಮಾಡಲಾಗಿದೆ. ಬಿಳಿ ಬಣ್ಣದ ಉಡುಪು ಧರಿಸುವ ಈ ಜಮಾದಾರ, ತನ್ನ ಸೊಂಟಕ್ಕೆ ಕಟ್ಟಿದ್ದ ಪಟ್ಟಿಗೆ ಒಂದು ಪೇಟಿಎಂ ಸ್ಕ್ಯಾನರ್ ಸಿಲುಕಿಸಿ ಇಟ್ಟುಕೊಂಡಿದ್ದ. ವಕೀಲರ ಬಳಿ ಟಿಪ್ಸ್ ಕೇಳುತ್ತಿದ್ದ ಈತ, ಅದೇ ಕ್ಯೂಆರ್ ಕೋಡ್ಗೆ ಸ್ಕ್ಯಾನ್ ಮಾಡಲು ಹೇಳುತ್ತಿದ್ದ. ಆತ ಪೇಟಿಎಂ ಸ್ಕ್ಯಾನರ್ ಇಟ್ಟುಕೊಂಡಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಆತನನ್ನು ಅಮಾನತು ಮಾಡಿದ್ದಾರೆ.
ಭಕ್ಷೀಸು ನೆಪದಲ್ಲಿ ವಕೀಲರಿಂದ ಹಣ ಪಡೆಯುತ್ತಿದ್ದ ಜಮಾದಾರ ರಾಜೇಂದ್ರ ಕುಮಾರ್ನನ್ನು ಅಮಾನತುಗೊಳಿಸಲು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಆದೇಶಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮಕ್ಕೆ ನ್ಯಾಯಮೂರ್ತಿ ಅಜಿತ್ ಸಿಂಗ್ ಆದೇಶಿಸಿದ್ದಾರೆ. ಅಮಾನತು ಅವಧಿಯಲ್ಲಿ ಬೇರೆ ಯಾವುದೇ ಉದ್ಯೋಗ, ವ್ಯಾಪಾರ, ವೃತ್ತಿ, ಸಂಸ್ಥೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ರಾಜೇಂದ್ರ ಕುಮಾರ್ ಪ್ರಮಾಣಪತ್ರ ನೀಡಿದ ನಂತರವಷ್ಟೇ ಅವರಿಗೆ, ಜೀವನಾಧಾರ ಭತ್ಯೆ ನೀಡಲಾಗುವುದು ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದಾಗ್ಯೂ ರಾಜೇಂದ್ರಕುಮಾರ್ಗೆ ಸದ್ಯ ಕೋರ್ಟ್ನ ನಜರತ್ ವಿಭಾಗದಲ್ಲಿ ಕೆಲಸ ಮುಂದುವರಿಸಲು ಅವಕಾಶ ನೀಡಲಾಗಿದೆ. ಹೈಕೋರ್ಟ್ ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ: Viral video | ಮತ್ತೊಂದು ಚಾರ್ಲಿ 777 ಕತೆ: ದೆಹಲಿಯಿಂದ ಲಡಾಕ್‌ವರೆಗೆ ನಾಯಿ ಜೊತೆಗೆ ಬೈಕ್ ಸವಾರಿ!