Site icon Vistara News

Viral Video | ನೀರಿನಲ್ಲಿ ಈಜುತ್ತಿದ್ದ ಮೊಸಳೆ ಜಂಪ್​ ಮಾಡಿ ಡ್ರೋನ್​​ಗೇ ಬಾಯಿ ಹಾಕಿದ ಥ್ರಿಲ್ಲಿಂಗ್​ ವಿಡಿಯೊ ಇದು!

Drone

ವನ್ಯಜೀವಿ ಫೋಟೋಗ್ರಫಿ ಮಾಡುವವರು ಈಗ ಡ್ರೋನ್​​ನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆ. ಮೊದಲೆಲ್ಲ ಕಾಡಿನಲ್ಲಿ ಕ್ಯಾಮರಾ ಅಡಗಿಸಿಟ್ಟು ಪ್ರಾಣಿ-ಪಕ್ಷಿಗಳ, ಅವುಗಳ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಈಗ ಆ ಪದ್ಧತಿ ಇದ್ದರೂ, ಡ್ರೋನ್ ತಂತ್ರಜ್ಞಾನವನ್ನೂ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಅಂದರೆ ಡ್ರೋನ್​​ಗೆ ಕ್ಯಾಮರಾ ಅಳವಡಿಸಿ, ಕಾಡು ಪ್ರಾಣಿಗಳ, ಸರೀಸೃಪಗಳ ಚಲನವಲನ ಸೆರೆಹಿಡಿಯಲಾಗುತ್ತದೆ. ವೈಲ್ಡ್​ಲೈಫ್​ ಫೊಟೊಗ್ರಫಿಗೆ ಇದು ಇನ್ನಷ್ಟು ಸುಲಭ ವಿಧಾನ.

ಈಗೊಂದು ಥ್ರಿಲ್ಲಿಂಗ್​ ವಿಡಿಯೊ ವೈರಲ್​ ಆಗಿದೆ. ಇದು ಮೊಸಳೆ ಮತ್ತು ಡ್ರೋನ್​​ದು. ನೀವು ಈ ವಿಡಿಯೊ ನೋಡಿ. ಯಾವ ಥ್ರಿಲ್ಲಿಂಗ್​ ಸಿನಿಮಾ ದೃಶ್ಯಕ್ಕೂ ಕಡಿಮೆಯಿಲ್ಲ ಎಂದು ನಿಮಗೇ ಅನ್ನಿಸುತ್ತದೆ. ‘ಅದೊಂದು ನದಿಯಲ್ಲಿ ಮೊಸಳೆ ನದಿ ನೀರಿನಲ್ಲಿ ಈಜುತ್ತ ಹೋಗುತ್ತಿದೆ. ಅದಕ್ಕಿಂತ ಸ್ವಲ್ಪ ಮೇಲೆ ಡ್ರೋನ್​ ಮೊಸಳೆಯನ್ನು ಹಿಂಬಾಲಿಸುತ್ತಿದೆ. ಹೀಗೆ ಮೊಸಳೆಯನ್ನು ಸುತ್ತುವರಿಯುತ್ತಿರುತ್ತದೆ. ಡ್ರೋನ್​​ಗೆ ಅಳವಡಿಸಿದ್ದ ಕ್ಯಾಮರಾ ಆ ಮೊಸಳೆಯ ಚಲನೆಯನ್ನು ಸೆರೆ ಹಿಡಿಯುತ್ತಿತ್ತು. ಅಂದರೆ ವಿಡಿಯೊ ಚಿತ್ರೀಕರಣ ಆಗುತ್ತಿತ್ತು. ಅದೇ ಹೊತ್ತಲ್ಲಿ, ಆ ಮೊಸಳೆಯ ಕಣ್ಣು ಡ್ರೋನ್​​ ಮೇಲೆ ಇತ್ತು. ಮೊಸಳೆ ಡ್ರೋನ್​​ನ್ನು ನೋಡಿ ಯಾವುದೋ ಪಕ್ಷಿ ಎಂದುಕೊಂಡಿತೋ ಏನೋ ಗೊತ್ತಿಲ್ಲ, ಈಜಿಕೊಂಡು ಹೋಗುತ್ತಿದ್ದ ಸರೀಸೃಪ ಒಮ್ಮೆಲೇ ನೀರಿನಲ್ಲಿಯೇ ಎದ್ದುನಿಂತಂತೆ, ತಲೆ ಹೊರಹಾಕಿಕೊಂಡು ಚಲಿಸಲು ಪ್ರಾರಂಭ ಮಾಡಿತು. ಹಾಗೇ, ಒಂದು ಜಂಪ್​ ಹೊಡೆದು ಆ ಡ್ರೋನ್​​ನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೆ ನೀರಿನ ಆಳಕ್ಕೆ ಧುಮುಕಿ ಹೋಯಿತು. ಕೊನೇ ಕ್ಷಣ ಮಾತ್ರ ಮೈ ಜುಂ ಎನ್ನುವಂತಿದೆ’

ವಿಡಿಯೊ ನೋಡಿದ ಹಲವರು ಕಮೆಂಟ್ ಮಾಡಿದ್ದಾರೆ. ಡ್ರೋನ್​ ಶಬ್ದದಿಂದ ಮೊಸಳೆಗೆ ಕೆಟ್ಟ ಕಿರಿಕಿರಿ ಆಗಿರಬಹುದು ಎಂದು ಒಬ್ಬರು ಹೇಳಿದ್ದರೆ, ಆ ಡ್ರೋನ್​​ನ್ನು ಕಂಟ್ರೋಲ್​ ಮಾಡುತ್ತಿದ್ದ ಪೈಲೆಟ್​ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕಿತ್ತು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಹಾಗೇ, ಪ್ರಾಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ. ಅದನ್ನು ನಾವು ಗೌರವಿಸಬೇಕು. ಹೀಗೆ ಸಿಕ್ಕಸಿಕ್ಕಲ್ಲಿ ಕ್ಯಾಮರಾ ಹಿಡಿಯಲು ಹೋದರೆ, ಇದೇ ಗತಿ ಆಗುತ್ತದೆ ಎಂದು ಮತ್ತೊಬ್ಬಾತ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Viral video | ಹಗ್ಗದ ಸಹಾಯವಿಲ್ಲದೆ 122 ಮೀಟರ್‌ ಎತ್ತರದ ಕಟ್ಟಡವೇರಿದ ಸಾಹಸಿ!

Exit mobile version