ಲಕ್ನೋ: ಬಿಸಿಯನ್ನು ಮುಟ್ಟಿದಾಕ್ಷಣ ಕೈ ಸುಟ್ಟು ಹೋಗುತ್ತದೆ. ಹಾಗಿರುವಾಗ ಪೂಜಾರಿಯೊಬ್ಬ ಪುಟಾಣಿ ಮಗುವೊಂದಕ್ಕೆ ಕುದಿಯುವ ಹಾಲಿನಲ್ಲೇ ಸ್ನಾನ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದರ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸುದ್ದಿ ಭಾರೀ ವೈರಲ್ (Viral News) ಆಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಶ್ರವಣಪುರ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ವಾರಾಣಸಿಯವರಾದ ಪಂಡಿತ್ ಅನಿಲ್ ಭಗತ್ ಅವರು ಪುಟ್ಟ ಮಗುವೊಂದನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅದರ ಮೇಲೆ ಕುದಿಯುವ ಹಾಲನ್ನು ಹಾಕಿದ್ದಾರೆ. ಮಗು ನೋವು ತಾಳಲಾರದೆ ಕೂಗುತ್ತಿದ್ದರೂ ಬಿಡದೆ ಹಾಲನ್ನು ಹಾಕಲಾಗಿದೆ.
ಇದನ್ನೂ ಓದಿ: Video Viral : ಅಸುನೀಗಿತು ಪ್ರೀತಿಯ ಹಸು; ಅಳುತ್ತಲೇ ಹಾಲು-ತುಪ್ಪ ಬಿಟ್ಟ ರೈತ, ಊರಿಗೆಲ್ಲ ಊಟ ಹಾಕಿದ!
ಶ್ರವಣಪುರ ಗ್ರಾಮದಲ್ಲಿ ಇದು ಸಾಮಾನ್ಯವಾಗಿರುವಂತಹ ಸಂಪ್ರದಾಯವಂತೆ. ಕಾಶಿ ದಾಸ ಬಾಬಾ ಪೂಜೆಯ ಭಾಗವಾಗಿ ಈ ಸಂಪ್ರದಾಯ ನಡೆಸಲಾಗುತ್ತದೆಯಂತೆ. ಯಾದವ ಸಮುದಾಯಕ್ಕೆ ಸೇರಿದವರಲ್ಲಿ ಈ ರೀತಿಯ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಬಂದಿದೆ ಎಂದು ಹೇಳಲಾಗಿದೆ.
ಅಂದ ಹಾಗೆ ಈ ರೀತಿಯಲ್ಲಿ ಮಗುವಿನ ಮೇಲೆ ಬಿಸಿ ಹಾಲನ್ನು ಹಾಕಿರುವ ದೃಶ್ಯವನ್ನು ಅಲ್ಲಿ ಸೇರಿದ್ದ ಜನರೆಲ್ಲರೂ ನೋಡಿದ್ದಾರೆ. ಹಾಗೆಯೇ ಕೆಲವರು ಅದನ್ನು ವಿಡಿಯೊ ಕೂಡ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Viral Video: ಚಲಿಸುವ ಮೆಟ್ರೋದಲ್ಲೇ ಸಿನಿಮಾ ಸ್ಟೈಲಲ್ಲಿ ಪಂಚ್, ನೂಕಾಟ, ತಳ್ಳಾಟ, ಜಗಳ; ವಿಡಿಯೊ ವೈರಲ್
ಉತ್ತರ ಭಾರತದಲ್ಲಿ ಈ ರೀತಿ ಮಕ್ಕಳ ಮೇಲೆ ಸಂಪ್ರದಾಯದ ಹೆಸರಿನಲ್ಲಿ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಮಧ್ಯಪ್ರದೇಶದ ಶಧೋಲ್ ಜಿಲ್ಲೆಯಲ್ಲಿ ಮೂರು ತಿಂಗಳ ಮಗುವಿಗೆ ಕಾಯಿಲೆ ಗುಣ ಮಾಡುವ ನೆಪದಲ್ಲಿ ಸ್ವಯಂಘೋಷಿತ ಸ್ವಾಮಿ ಮಹಿಳೆಯೊಬ್ಬಳು ಕಬ್ಬಿಣದ ರಾಡುಗಳಿಂದ ಹೊಡೆದಿದ್ದಳು. 20 ಬಾರಿ ರಾಡಿನಿಂದ ಹೊಡೆದಾಗ ಮಗು ಪ್ರಾಣವನ್ನೇ ಬಿಟ್ಟಿತ್ತು. ಈ ಸುದ್ದಿ ಸಾಕಷ್ಟು ಕಡೆ ಹರಿದಾಡಿ, ಜನರ ಆಕ್ರೋಶಕ್ಕೂ ಕಾರಣವಾಗಿತ್ತು.