ಬಾಳೆ ಹಣ್ಣು ಬಹುತೇಕರು ಇಷ್ಟಪಟ್ಟು ತಿನ್ನುವ ಹಣ್ಣು. ಹೊಟ್ಟೆಯ ಹಸಿವು ತಣಿಸಲೂ, ಆರೋಗ್ಯಕ್ಕೂ ಇದು ಬೆಸ್ಟ್. ಅದರಲ್ಲೂ ಸಿಪ್ಪೆ ಮೇಲೆ ಚುಕ್ಕಿಬಿದ್ದ ಬಾಳೆ ಹಣ್ಣು ಅಂದರೆ, ಹೆಚ್ಚು ಮಾಗುತ್ತಿರುವ ಬಾಳೆ ಹಣ್ಣು ಒಳ್ಳೆಯದು ಎಂದು ಬಲ್ಲವರು ಹೇಳುತ್ತಾರೆ. ಆದರೆ ಈ ವಿಡಿಯೊ ನೋಡಿಯಾದ ಮೇಲೆ ಹೇಳಿ? ನಿಮಗೆ ಚುಕ್ಕಿ ಬಾಳೆ ಹಣ್ಣು ತಿನ್ಬೇಕು ಅನ್ನಿಸತ್ತಾ?
ಅರೆ, ನಾವ್ಯಾಕೆ ಹೀಗೆ ಹೇಳ್ತಿದ್ದೇವೆ? ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊ ಬಾಳೆಹಣ್ಣಿನ ರುಚಿ ಕೆಡಿಸೋದು ಪಕ್ಕಾ ಎಂಬಂತಿದೆ. ಚುಕ್ಕಿ ಬಾಳೆಹಣ್ಣಿನ ಪಕ್ಕ ಹೆಬ್ಬಾವಿನ ಮರಿಯೊಂದು ಇದೆ. ಅದು ಥೇಟ್ ಬಾಳೆಹಣ್ಣಿನಂತೆಯೇ ಕಾಣುತ್ತಿದೆ. ಪುಟ್ಟ ಹೆಡೆಯೊಂದಿದೆಯಷ್ಟೇ!. ಬಾಳೆಹಣ್ಣನ್ನು ಮತ್ತು ಆ ಹೆಬ್ಬಾವನ್ನು ಅಕ್ಕ-ಪಕ್ಕ ಇಟ್ಟು, ಒಮ್ಮೆಲೇ ನೋಡಿದರೆ ಬಾಳೆಹಣ್ಣು ಯಾವುದು?-ಹಾವು ಯಾವುದು ಎಂದು ಗೊತ್ತಾಗುವುದೇ ಕಷ್ಟ.
Science Girl ಎಂಬ ಟ್ವಿಟರ್ ಅಕೌಂಟ್ನಲ್ಲಿ ವಿಡಿಯೊ ಶೇರ್ ಆಗಿದೆ. ಅಂದಹಾಗೇ, ಈ ಹೆಬ್ಬಾವಿನ ಹೆಸರೇ ಬನಾನಾ ಬಾಲ್ ಹೆಬ್ಬಾವು. ಅದರ ಮೈಪೂರ್ತಿ ಹಳದಿ ಬಣ್ಣವಿದ್ದು, ಚುಕ್ಕಿ ಬಿದ್ದಿದೆ. ಮಾಗುತ್ತಿರುವ ಬಾಳೆಹಣ್ಣಿನಂತೆಯೇ ಕಾಣುತ್ತದೆ. ನೆಟ್ಟಿಗರನ್ನಂತೂ ಸಿಕ್ಕಾಪಟೆ ಗೊಂದಲಕ್ಕೀಡು ಮಾಡಿದೆ.
ಇದನ್ನೂ ಓದಿ: Viral video | ಹೊರೆ ಹೊತ್ತ ಕೈಗಳು, ತಾನಾಗಿಯೇ ಚಲಿಸುವ ಸೈಕಲು! ಇವನ ದುಡಿಮೆಯೇ ಸರ್ಕಸ್