Site icon Vistara News

Viral News: ಹಸಿವಿನಿಂದ ಭಿಕ್ಷುಕ ಸಾವು; ಆತನ ಬಳಿ ಇತ್ತು 1 ಲಕ್ಷ ರೂ!

1 lakh in cash

ಅಹಮದಾಬಾದ್​: ಓರ್ವ ಭಿಕ್ಷುಕ ಹಸಿವಿನಿಂದ ಸಾವನ್ನಪ್ಪಿದ ಬಳಿಕ ಆತನೊಬ್ಬ ಲಕ್ಷಾದೀಶ ಎಂದು ತಿಳಿದು ಜನರು ಅಚ್ಚರಿಗೊಂಡಿದ್ದಾರೆ. ಹೌದು, ಈ ಘಟನೆ ನಡೆದದ್ದು ಗುಜರಾತ್​ನಲ್ಲಿ. 50ರ ಹರೆಯದ ಭಿಕ್ಷುಕನೋರ್ವ ಇಲ್ಲಿನ ವಲ್ಸಾದ್ ಸಿವಿಲ್ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದ. ಹಸಿವಿನಿಂದಲೇ ಆತ ಸಾವನ್ನಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಆದರೆ ಆತನ ಬಳಿ 1.14 ಲಕ್ಷ ರೂ. ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವನ್ನಪಿದ ಈ ಬಿಕ್ಷುಕನ ಗುರುತು ಇನ್ನೂ ದೃಢಪಟ್ಟಿಲ್ಲ. ಆದರೆ ಆತನ ಸಾವು ಮಾತ್ರ ವಲ್ಸಾದ್ ಪೊಲೀಸರಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟ್‌ಮಾರ್ಟಂ ವರದಿಯಲ್ಲಿ ಸಾವಿಗೆ ಹಸಿವು ಕಾರಣ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಕ್ಷ ಹಣವಿದ್ದರೂ ಆತ ಹಸಿವಿನಿಂದ ಏಕೆ ಬಳಲಿದ ಎನ್ನುವುದು ಪೊಲೀಸರ ಸಂಶಯಕ್ಕೆ ಪ್ರಮುಖ ಕಾರಣ.

ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಭಾವೇಶ್ ಪಟೇಲ್, “ಬಿಕ್ಷುಕ ಗುಜರಾತಿ ಮಾತನಾಡುತ್ತಿದ್ದರು. ಅವರು ವಲ್ಸಾದ್‌ನ ಧೋಬಿ ತಲಾವ್ ಪ್ರದೇಶದಲ್ಲಿ ತಂಗಿದ್ದರು” ಎಂದು ತಿಳಿಸಿದ್ದಾರೆ.

ಸಿವಿಲ್ ಆಸ್ಪತ್ರೆಗೆ ಕರೆದೊಯ್ದಾಗ 1.14 ಲಕ್ಷ ರೂ. ನಗದು ಹಣದಲ್ಲಿ 500 ರೂಪಾಯಿಯ 38 ನೋಟುಗಳು, 200 ರೂಪಾಯಿಯ 83 ನೋಟುಗಳು, 100 ರೂಪಾಯಿಯ 537 ನೋಟುಗಳು ಮತ್ತು 20 ಮತ್ತು 10 ರೂಪಾಯಿಗಳ ಇತರ ನೋಟುಗಳು ಕಂಡುಬಂದಿದೆ. ಈ ಎಲ್ಲ ನೋಟುಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ರಾಶಿ ಮಾಡಿ ಅವರ ಸ್ವೆಟರ್ ಜೇಬಿನಲ್ಲಿ ಮತ್ತು ಪ್ಯಾಂಟ್ ಜೇಬಿನಲ್ಲಿ ಇರಿಸಲಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ಇದು ಅರಿವಿಗೆ ಬಂದಿರುವುದಾಗಿ ವೈದ್ಯಕೀಯ ಅಧಿಕಾರಿ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ Viral News : ಚಾಲಕರ ನಡುವೆ ಕಿರಿಕ್‌;‌ ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್‌

ವಲ್ಸಾದ್ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಡಿ.ಜಿತಿಯಾ ಮಾತನಾಡಿ, “ನಾವು ಅವರ ಫೋಟೋಗಳನ್ನು ತೆಗೆದುಕೊಂಡು ತಂಡವೊಂದನ್ನು ರಚಿಸಿ ಅವರ ಗುರುತು ತಿಳಿಯಲು ಧೋಬಿ ತಲಾವ್ ಪ್ರದೇಶದ ವಿವಿಧ ಸ್ಥಳಗಳಿಗೆ ಕಳುಹಿಸಿದ್ದೇವೆ. ಆದರೆ, ಯಾರಿಗೂ ಅವರು ಯಾರೆಂದು ತಿಳಿದಿಲ್ಲ. ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ. ಅವರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್‌ಮಾರ್ಟಮ್ ವರದಿ ಹೇಳುತ್ತದೆ” ಎಂದು ಇನ್ಸ್‌ಪೆಕ್ಟರ್ ಬಿ.ಡಿ.ಜಿತಿಯಾ ಹೀಳಿದ್ದಾರೆ.

ಕೋಟ್ಯಾಧಿಪತಿ ಭಿಕ್ಷುಕ

ಪಶ್ಚಿಮ ಬಂಗಾಳದ ಬಾಕ್ಸರ್ ಬಿರ್ಬಿಚಂದ್ ಆಚಾದ್ ಎಂಬ ಬಿಕ್ಷುಕ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅವರ ಸಾವಿನ ಬಳಿಕ ಅವರು ಕೋಟ್ಯಾಧಿಪತಿ ಎಂಬುದು ತಿಳಿದು ಬಂದಿತ್ತು. ಈ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ವಿಚಿತ್ರವೆಂದರೆ ಈ ಭಿಕ್ಷುಕ ಸತ್ತ ಎರಡು ವರ್ಷಗಳ ನಂತರ ಅವನ ಸಂಪಾದನೆ ಬಗ್ಗೆ ಮಾಹಿತಿ ಲಭಿಸಿತ್ತು. ಆಚಾದ್ ವಾಸವಿದ್ದ ಪಾಳು ಬಿದ್ದ ಮನೆಯ ಟ್ರಂಕ್, ಡಬ್ಬ ಮತ್ತು ಗೋಣಿ ಚೀಲದಲ್ಲಿ ಹಣ ಪತ್ತೆಯಾಗಿತ್ತು.

Exit mobile version