ಬೆಂಗಳೂರು: ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯಬೇಕೆಂದರೆ ಅದರ ಬಗ್ಗೆ ಹಲವಾರು ಬಗೆಯಲ್ಲಿ ಯೋಚನೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯ ಮಾಲೀಕರು ಕಿರಿಕಿರಿ ಮಾಡುವವರೋ ಅಥವಾ ಹೊಂದಾಣಿಕೆ ಮಾಡಿಕೊಂಡು ಹೋಗುವವರೋ ಎನ್ನುವ ಚಿಂತೆ ಬಾಡಿಗೆಗೆ ಬರುವವರಿಗೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮನೆಯ ಮಾಲಕಿ ಮಾತ್ರ ಬಾಡಿಗೆಗೆ ಬಂದವರ ಮನಸ್ಸನ್ನು ಗೆಲ್ಲುವುದರೊಂದಿಗೆ ನೆಟ್ಟಿಗರ ಮನಸ್ಸನ್ನೂ ಕದ್ದುಬಿಟ್ಟಿದ್ದಾರೆ.
ಟ್ವಿಟರ್‌ನಲ್ಲಿ Squibsters ಹೆಸರಿನಿಂದ ಗುರುತಿಸಿಕೊಂಡಿರುವ ಮಹಿಳೆ ತಮ್ಮ ಅಪಾರ್ಟ್‌ಮೆಂಟ್ ಅನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಹಾಗೆ ಕೊಡುವುದಕ್ಕೂ ಮೊದಲು ಅವರು ಒಂದು ಕೆ.ಜಿಯಾಗುವಷ್ಟು ಎಲೆ ಕೋಸಿನ ಕಿಮ್ಚಿ(ಕೋರಿಯನ್ ದೇಶದಲ್ಲಿ ಉಪ್ಪಿನಕಾಯಿಯಂತೆ ಬಳಸಲಾಗುವ ಖಾದ್ಯ)ಯನ್ನು ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದರಂತೆ. ಬಾಡಿಗೆಗೆ ಬರುವವರು ಮಾತನಾಡುವಾಗ ತಮಗೆ ಕಿಮ್ಚಿ ಎಂದರೆ ಬಹಳ ಇಷ್ಟ ಎಂದು ಹೇಳಿದ್ದರಂತೆ. ಅದಕ್ಕಾಗಿಯೇ ಅವರು ಈ ರೀತಿಯಲ್ಲಿ ಬಾಡಿಗೆಗೆ ಬಂದವರಿಗೆ ಕಿಮ್ಚಿಯನ್ನೇ ವೆಲ್‌ಕಮ್ ಗಿಫ್ಟ್ ಆಗಿ ನೀಡಿದ್ದಾರೆ.
ಇದನ್ನೂ ಓದಿ: Viral News : ನಾಯಿಗಳಿಗೂ ಬಂತು ಕ್ಯೂಆರ್ ಕೋಡ್! ಇದು ನಾಯಿಯ ಆಧಾರ್ ಕಾರ್ಡ್!
ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ತಾವು ಮಾಡಿದ ಕಿಮ್ಚಿಯ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಹಾಗೆಯೇ, “ನಾನು ಒಂದು ಕೆ.ಜಿ ಕಿಮ್ಚಿ ತಯಾರಿಸಿ ನನ್ನ ಬಾಡಿಗೆದಾರರಿಗೆಂದು ಫ್ರಿಜ್‌ನಲ್ಲಿ ಇಟ್ಟಿದ್ದೆ. ನಾನು ಅಪ್ಲಿಕೇಶನ್ ಹಾಕುವುದಕ್ಕೆ ಅತ್ಯುತ್ತಮ ಮನೆ ಮಾಲಕಿ ಎನ್ನುವ ಅವಾರ್ಡ್ ಏನಾದರು ಇದೆಯೇ?” ಎಂದು ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.
I made a 1kg batch of kimchi and stored it in the fridge for my tenant before subletting my apartment to him.
— Squibsters (@squibsters) July 5, 2023
(Is there a best landlord award I can apply for) pic.twitter.com/xsjjthKkJJ
ಅವರ ಈ ಪೋಸ್ಟ್ ಎಲ್ಲೆಡೆ ಹರಿದಾಡಿದ್ದು, ವೈರಲ್ ಆಗಿದೆ. ಜುಲೈ 5ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಹಲವರು ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. “ಅಬ್ಬಾ, ಎಲ್ಲರಿಗೂ ನಿಮ್ಮಂತಹ ಮನೆ ಮಾಲೀಕರೇ ಸಿಗಬೇಕು”, “ನಮ್ಮ ಮನೆ ಮಾಲೀಕರು ಯಾವಾಗಲೂ ಕಿತ್ತಾಡುತ್ತಾರೆ. ನೀವು ದಿ ಬೆಸ್ಟ್” ಎನ್ನುವಂತಹ ಕಾಮೆಂಟ್‌ಗಳು ಬಂದಿವೆ. ಇನ್ನು ಕೆಲವರು ಈ ಕಿಮ್ಚಿಯನ್ನು ಮಾಡುವ ವಿಧಾನ ಏನು ಎಂದು ಹೇಳಿಕೊಡಿ ಎಂದೂ ಕೇಳಿದ್ದಾರೆ. ಹಾಗೆಯೇ ಕೆಲವರು ಮನೆ ಮಾಲಕಿಯ ಕಾಲೆಳೆದಿದ್ದಾರೆ ಕೂಡ!