Site icon Vistara News

Bengaluru News : ಶ್ವಾನಗಳ ಕೈಕಾಲು ಕಟ್ಟಿಹಾಕಿ ವಿಷ ಪ್ರಾಶನ!

Poisoning of dogs

ಬೆಂಗಳೂರು: ಬೆಂಗಳೂರಿನ ಆರ್‌ಆರ್‌ನಗರ ಹಾಗೂ ಹೊಸಕೆರೆಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ (Bengaluru News) ನಡೆದಿದೆ. ಕೆಲ ಕಿಡಿಗೇಡಿಗಳು ನಾಯಿಗಳಿಗೆ ವಿಷ ಪ್ರಾಶನ (Poisoning of dogs) ಮಾಡಿ ಹತ್ಯೆ ಮಾಡಿದ್ದಾರೆ. ಹಿಂದೊಮ್ಮೆ ರಸ್ತೆಬದಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದ. ಮತ್ತೊಂದು ಅಮಾನವೀಯ ಘಟನೆ ಮರುಕಳಿಸಿದೆ.

ರಾತ್ರಿಯಾದರೆ ಬೀದಿನಾಯಿಗಳು ಬೋಗಳುತ್ತವೆ, ರಸ್ತೆಯಲ್ಲಿ ಓಡಾಡುವರ ಮೇಲೆ ದಾಳಿ ಮಾಡುತ್ತೇವೆ ಎಂದು ಸುಮಾರು 18 ನಾಯಿಗಳಿಗೆ ವಿಷ ಹಾಕಿದ್ದಾರೆ. ಆರ್‌ಆರ್ ನಗರದಲ್ಲಿ 7 ಶ್ವಾನಗಳ ಕಳೆಬರಹ ಪತ್ತೆ ಆಗಿದೆ. ಆರ್‌.ಆರ್ ನಗರ, ಹೊಸಕೆರೆಹಳ್ಳಿ ವಾರ್ಡ್ ಬೌಂಡ್ರಿಯಲ್ಲಿ ಶ್ವಾನಗಳು ಸತ್ತು ಬಿದ್ದಿವೆ.

ಬೀದಿನಾಯಿಗಳ ಹತ್ಯೆ ಮಾಡಿದ ಪಾಪಿಗಳು

ಕಾರಲ್ಲಿ ಬಂದು ವಿಷವುಣಿಸಿದ ಕಿರಾತಕ

ಆರ್‌ಆರ್‌ ನಗರದ ಸುತ್ತಮುತ್ತ ಒಂದು ವಾರದಿಂದ ಸುಮಾರು 18 ನಾಯಿಗಳು ಕಾಣೆಯಾಗಿವೆ ಎಂದು ಸಹವರ್ತಿನ್ ಆನಿಮಲ್‌ ವೆಲ್‌ಫೇರ್‌ಗೆ ದೂರು ಬಂದಿದ್ದವು. ವಿಚಾರಣೆಗೆ ಹೋದಾಗ ಸ್ಥಳೀಯರೆಲ್ಲವೂ ಯಾರೋ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ನಾಯಿಗಳಿಗೆ ಹಾಲು ಕುಡಿಸಿ ಹೋದರೂ ಮರುದಿನ ವಿಡಿಯೊ ಮಾಡಿಕೊಂಡು ಹೋಗಿದ್ದ. ಇದಾದ ಬಳಿಕ ನಾಯಿಗಳೆಲ್ಲವೂ ಕಾಣೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Mobile Addiction : ಮಕ್ಕಳಿಗಿನ್ನು ಮೊಬೈಲ್‌ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!

ಅಲ್ಲಿರುವ ಕೆಲವರು ಅಕ್ಕ ಪಕ್ಕ ಹುಡುಕಿದಾಗ 8 ಶ್ವಾನಗಳ ಮೃತದೇಹವು ದೊರೆತಿದೆ. ಇನ್ನು ಹತ್ತು ಶ್ವಾನಗಳ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿದೆ ಎಂದು ಸಹವರ್ತಿನ್‌ ಆನಿಮಲ್‌ ವೆಲ್‌ಫೇರ್‌ನ ಸಾಧನ ಹೆಗ್ಡೆ ಮಾಹಿತಿ ನೀಡಿದ್ದಾರೆ. ಸದ್ಯ ದೊರೆತಿರುವ ಶ್ವಾನಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸತ್ತಿರುವ ಶ್ವಾನಗಳದ್ದು ಸಹಜ ಸಾವು? ಅಥವಾ ವಿಷ ಹಾಕಿ ಹತ್ಯೆ ಮಾಡಿರುವುದಾ ಎಂಬುದು ತಿಳಿಯಲಿದೆ.

ಎಲ್ಲ ಶ್ವಾನಗಳ ಕೈ-ಕಾಲು ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. 7 ರಲ್ಲಿ 5 ಮೃತದೇಹಗಳು ಸಂಪೂರ್ಣ ಕೊಳೆತು ಹೋಗಿವೆ. ಹೀಗಾಗಿ ವಿಕೃತ ಮನಸ್ಸಿನ ವ್ಯಕ್ತಿಗಳು ಬೇಕಂತಲೇ ಶ್ವಾನಗಳನ್ನು ಕೊಂದು ಹಾಕಿದ್ದಾರೆ ಎಂದು ಸಾಧನ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಆರ್‌ಆರ್ ನಗರ ಪೊಲೀಸ್‌ ಠಾಣೆಯಲ್ಲಿ ಶ್ವಾನ ಪ್ರೇಮಿಗಳು ಎಫ್‌ಐಆರ್‌ (FIR) ದಾಖಲು ಮಾಡಿದ್ದಾರೆ. ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ಶ್ವಾನಗಳಿಗೆ ವಿಷ ಹಾಕಿದ ನಿರ್ದಯಿಯನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version