Site icon Vistara News

Bizarre Jacket | ಎಲೆ ಕೋಸಿನ ರೇಟ್ 60,000 ರೂ.? ಟ್ವಿಟರ್‌ನಲ್ಲಿ ನಡೀತಿದೆ ಹೊಸ ಚರ್ಚೆ!

ಎಲೆಕೋಸಿನ ಪದರಗಳನ್ನೆಲ್ಲ ತೆಗೆದು ಅದರಲ್ಲೇ ಒಂದು ಬಟ್ಟೆ ಮಾಡಿಕೊಂಡಿರಿ ಎಂದುಕೊಳ್ಳಿ. ಅದನ್ನು ತೊಟ್ಟುಕೊಂಡು ಊರನ್ನೆಲ್ಲ ಒಮ್ಮೆ ಸುತ್ತಿಬಂದರೆ ಏನಾಗಬಹುದು? ಹಾಂ! ಈ ಬ್ರ್ಯಾಂಡೆಡ್ ಜಾಕೆಟ್ (Bizarre Jacket) ತೊಟ್ಟರೆ ನಮ್ಮ ಕಥೆ ಅದೇ ಆಗುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Viral Video | ಪಾನ್‌ ಬನಾರಸ್‌ ವಾಲಾ ಹಾಡಿಗೆ ಮನಬಿಚ್ಚಿ ಕುಣಿದ ಅಂಕಲ್‌, ಎನರ್ಜಿಗೆ ಸೆಲ್ಯೂಟ್‌ ಎಂದ ಜನ
ಪ್ರಸಿದ್ಧ ಬ್ರ್ಯಾಂಡ್ ಆಗಿರುವ ಡೀಸೆಲ್ ಇಂಥದ್ದೊಂದು ವಿಚಿತ್ರ ಜಾಕೆಟ್ ಅನ್ನು ಬಿಡುಗಡೆ ಮಾಡಿದೆ. ಅಂದ ಹಾಗೆ ಅದರ ಬೆಲೆ ಬರೋಬ್ಬರಿ 59,999 ರೂ.! ನೋಡುವುದಕ್ಕೆ ಎಲೆ ಕೋಸಿನಂತೆಯೇ ಕಾಣುವ ಈ ಜಾಕೆಟ್‌ಗೆ ಇಷ್ಟೊಂದು ಬೆಲೆ ಏಕೆ ಎನ್ನುವುದು ನೆಟ್ಟಿಗರ ಪ್ರಶ್ನೆ.


ಈ ವಿಚಿತ್ರ ಜಾಕೆಟ್‌ನ ಫೋಟೋವನ್ನು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಎಲೆ ಕೋಸು ತೋರಿಸುವುದಕ್ಕೆ ಇವರಿಗೆ 60,000 ರೂ. ಕೊಡಬೇಕೇ?” ಎಂದು ಪ್ರಶ್ನಿಸಿದ್ದಾರೆ. ಈ ಜಾಕೆಟ್ ಸಾಮಾಜಿಕ ಜಾಲತಾಣಗಳಾದ್ಯಂತ ಟ್ರೋಲ್ ಆಗಿದೆ. “ಇದಕ್ಕೆ 200 ರೂ. ಕೊಟ್ಟರೂ ಹೆಚ್ಚೇ” ಎಂದು ಕೆಲವರು ಹೇಳಿದರೆ, “ಈ ಜಾಕೆಟ್ ತೆಗೆದುಕೊಂಡು ಅಡುಗೆಗೆ ಹಾಕಬೇಕೇ ಅಥವಾ ಕಸದ ಬುಟ್ಟಿಗೆ ಹಾಕಬೇಕೇ?” ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral Video | ಹಿಮವನ್ನು ಸಂಭ್ರಮಿಸುವುದೆಂದರೆ ಹೀಗೆ ನೋಡಿ! ನಾಯಿಯ ವಿಡಿಯೋಗೆ ಅಪಾರ ಮೆಚ್ಚುಗೆ

ಪ್ರಸಿದ್ಧ ಬ್ರ್ಯಾಂಡ್‌ಗಳು ಈ ರೀತಿ ವಿಚಿತ್ರ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಡುವುದು ಇದೇ ಮೊದಲೇನಲ್ಲ. ಈ ಹಿಂದೆ ನವೆಂಬರ್ ತಿಂಗಳಲ್ಲೇ ಇದೇ ಡೀಸೆಲ್ ಕಂಪನಿ ವಿಚಿತ್ರವಾದ ಸ್ಕರ್ಟ್ ಒಂದನ್ನು ಬಿಡುಗಡೆ ಮಾಡಿತ್ತು. ನೋಡುವುದಕ್ಕೆ ಯಾವುದೋ ದೊಡ್ಡ ಬೆಲ್ಟ್ ರೀತಿಯೇ ಕಾಣುತ್ತಿದ್ದ ಆ ಸ್ಕರ್ಟ್‌ನ ಬೆಲೆ ಬರೋಬ್ಬರಿ 82,000 ರೂ. ಆಗಿತ್ತು. ಅದೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

Exit mobile version