Site icon Vistara News

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

board exam tension viral news

ಲಖನೌ: ತನ್ನ ಯುಪಿ ಬೋರ್ಡ್ (UP Board Exam, Public Exam) 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಪಡೆದ ಪಾಸಾದ ವಿದ್ಯಾರ್ಥಿಯೊಬ್ಬ (Student), ಫಲಿತಾಂಶ ನೋಡಿದ ಕ್ಷಣವೇ ನಂಬಲಾಗದೆ ಮೂರ್ಛೆ ಹೋಗಿದ್ದಾನೆ. ನಂತರ ಈತನನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ. ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಒತ್ತಡವನ್ನು ಇದು ಎತ್ತಿ ತೋರಿಸಿದೆ.

ತನ್ನ ಯುಪಿ ಬೋರ್ಡ್ 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಪಡೆದ ನಂತರ, ಐಸಿಯುಗೆ ದಾಖಲಾದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದಾನೆ. ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಗಳಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಆದರೆ ಸಂತೋಷದ ಕ್ಷಣವೇ ಆತನ ಕುಟುಂಬಕ್ಕೆ ದುಃಖದಾಯಕವಾಯಿತು. ಆತನ ಸ್ಥಿತಿ ಸುಧಾರಿಸದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಕುಮಾರ್ ಬೇಗನೆ ಪ್ರಜ್ಞೆಯನ್ನು ಪಡೆದ.

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 20, 2024ರಂದು ಬಿಡುಗಡೆ ಮಾಡಲಾಯಿತು. 10 ನೇ ತರಗತಿಯಲ್ಲಿ 89.55% ಮತ್ತು 12 ನೇ ತರಗತಿಯಲ್ಲಿ 82.60% ಮಂದಿ ಉತ್ತೀರ್ಣರಾಗಿದ್ದಾರೆ. ಶುಭಂ ವರ್ಮಾ ಮತ್ತು ಪ್ರಾಚಿ ನಿಗಮ್ ಯುಪಿಎಂಎಸ್‌ಪಿ 10 ಮತ್ತು 12 ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Exit mobile version