ಮುಂಬೈ: ಹೀಲ್ಸ್ ತೊಟ್ಟಾಗ ನೋಡುವುದಕ್ಕೆ ಎತ್ತರ ಕಾಣುತ್ತಾರೆ ಎನ್ನುವುದು ಸತ್ಯ. ಆದರೆ ಅದನ್ನು ನಿರ್ವಹಿಸುವುದು ದೊಡ್ಡ ಸಾಹಸ ಎನ್ನುವುದು ಕೂಡ ಅಷ್ಟೇ ಸತ್ಯ. ಹೈ ಹೀಲ್ಸ್ ತೊಟ್ಟು ಕಾಲನ್ನೇ ಮುರಿದುಕೊಂಡ ಯುವತಿಯರೂ ಕೂಡ ಇದ್ದಾರೆ. ಆದರೆ ಇಲ್ಲೊಬ್ಬ ಯುವಕ ಹುಡುಗಿಯರ ಹೈ ಹೀಲ್ಸ್ ಮತ್ತು ಮಿನಿ ಸ್ಕರ್ಟ್ ಅನ್ನು ತೊಟ್ಟುಕೊಂಡು ಭರ್ಜರಿಯಾಗಿ ನೃತ್ಯ ಮಾಡಿದ್ದಾನೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್(Viral Video) ಆಗಿದೆ.
ಪಂಜಾಬ್ನ ವೈಟ್ ಬ್ಲ್ಯಾಕ್ ಅಂಡ್ ಬ್ರೌನ್ ಹಾಡು ನಿಮಗೆ ನೆನಪಿರಬಹುದು. 2022ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದ್ದ ಹಾಡದು. ಅದೇ ಹಾಡಿಗೆ ಮುಂಬೈನ ಎನ್ ಲಾಯ್ ಹೆಸರಿನ ವ್ಯಕ್ತಿ ನೃತ್ಯ ಮಾಡಿದ್ದಾನೆ. ಹುಡುಗಿಯರಂತೆ ಮಿನಿ ಸ್ಕರ್ಟ್ ತೊಟ್ಟ ಎನ್ ಲಾಯ್ ಪಾಯಿಂಟ್ ಹೀಲ್ಸ್ ಅನ್ನು ಕಾಲಿಗೆ ಹಾಕಿಕೊಂಡಿದ್ದಾನೆ. ವೈಟ್ ಬ್ಲ್ಯಾಕ್ ಅಂಡ್ ಬ್ರೌನ್ನ ಫಾಸ್ಟ್ ಮ್ಯೂಸಿಕ್ಗೆ ತಕ್ಕಂತೆ ಅತ್ಯಂತ ವೇಗವಾಗಿ ನೃತ್ಯವನ್ನು ಮಾಡಿದ್ದಾನೆ. ಒಂದು ಸೆಕೆಂಡ್ ಕೂಡ ಗ್ಯಾಪ್ ಕೊಡದಂತೆ ಎಲ್ಲ ಸ್ಟೆಪ್ಸ್ ಅನ್ನು ಮಾಡಿ ಮುಗಿಸಿದ್ದಾನೆ.
ಇದನ್ನೂ ಓದಿ: Viral Video: ನಾಚ್ ಬಸಂತಿ; ಬಿಹಾರ ಸರ್ಕಾರಿ ಅಧಿಕಾರಿ ಬೀಳ್ಕೊಡುಗೆ ವೇಳೆ ಸೊಂಟ ಬಳುಕಿಸಿದ ಬಾರ್ ಡಾನ್ಸರ್
ಈ ವಿಡಿಯೊವನ್ನು ಎನ್ ಲಾಯ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೇ 24ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ 20 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 1.57 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೊಗೆ ಮೆಚ್ಚುಗೆಯ ಕಮೆಂಟ್ಗಳ ಸುರಿಮಳೆಯೇ ಸುರಿದಿದೆ. “ಅಬ್ಬಬ್ಬಾ, ಚೂರೇ ಚೂರು ಹೀಲ್ಸ್ ಇರುವ ಚಪ್ಪಲಿ ಹಾಕಿಕೊಂಡರೆ ನನಗೆ ನಡೆಯುವುದೇ ಕಷ್ಟವಾಗಿಬಿಡುತ್ತದೆ. ಅಂಥದ್ದರಲ್ಲಿ ಈ ರೀತಿ ಹೈ ಹೀಲ್ಸ್ ಹಾಕಿಕೊಂಡು ಇಷ್ಟೊಂದು ಎನರ್ಜಿಟಿಕ್ ಆಗಿ ನೃತ್ಯ ಮಾಡಿದ್ದಾರೆಂದರೆ ಅದು ಅದ್ಭುತವೇ ಸರಿ”, “ಪಂಜಾಬಿ ಹಾಡು ಮತ್ತು ನಿಮ್ಮ ಈ ನೃತ್ಯ… ನೋಡುವುದಕ್ಕೆ ಸೊಗಸಾಗಿದೆ”, “ಹುಡುಗಿಯರೂ ಮಾಡಲು ಅಸಾಧ್ಯವಾದಂತಹ ನೃತ್ಯವನ್ನು ನೀವು ಮಾಡಿದ್ದೀರಿ” ಎನ್ನುವಂತಹ ಕಮೆಂಟ್ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್”, “ಸೂಪರ್” ಎನ್ನುವಂತಹ ನೂರಾರು ಕಮೆಂಟ್ಗಳನ್ನು ನೀವಿಲ್ಲಿ ಕಾಣಬಹುದಾಗಿದೆ.