ಎಲ್ಲಿ ಸಂಗೀತ ನಾದ ಹೊಮ್ಮಿಸುತ್ತಿರುತ್ತದೆಯೋ ಅಲ್ಲಿ ಮಾತು ಮೌನವಾಗುತ್ತದೆ. ಜನ ಮಂತ್ರಮುಗ್ಧರಾಗುತ್ತಾರೆ. ಈ 8 ವರ್ಷದ ಬಾಲಕ ರೈಲಿನಲ್ಲಿ ಅದ್ಭುತವಾಗಿ ಹಾಡುವ ಮೂಲಕ ಪ್ರಯಾಣಿಕರನ್ನು ಮೌನಕ್ಕೆ ಜಾರಿಸಿದ್ದಾನೆ. ಮುದ್ದು ಹುಡುಗ ರಾಗ-ಭಾವ ತುಂಬಿಕೊಂಡು ಶಾಸ್ತ್ರೀಯ ಸಂಗೀತ ಹಾಡುತ್ತಿದ್ದರೆ, ಆ ಪ್ರಯಾಣಿಕರೆಲ್ಲ ಭಕ್ತಿಯಿಂದ ಕೇಳುತ್ತಿದ್ದರು. ಹೀಗೊಂದು ದೃಶ್ಯ ಕಂಡುಬಂದಿದ್ದು ಚೆನ್ನೈನಿಂದ ಕಾಶಿಗೆ ಹೋಗುತ್ತಿರುವ ರೈಲಿನಲ್ಲಿ. ಅದರ ಅಪ್ಪರ್ ಬರ್ತ್ ನಲ್ಲಿ ಕುಟುಂಬದವರ ಜತೆ ಪ್ರಯಾಣ ಮಾಡುತ್ತಿದ್ದ ಬಾಲಕ ಅತ್ಯಂತ ಸುಂದರವಾಗಿ ಹಾಡಿದ್ದಾನೆ. ಇವನು ಚೆನ್ನೈ ಮೂಲದ ಸೂರ್ಯನಾರಾಯಣನ್ ಎಂಬ ಬಾಲಕ ಎಂದು ವಿಡಿಯೊ ಶೇರ್ ಮಾಡಿಕೊಂಡ ಸಂಗೀತಾ ತಿಳಿಸಿದ್ದಾರೆ.
ರೈಲಿನಲ್ಲಿ ಕುಟುಂಬದವರು, ಸ್ನೇಹಿತರೊಟ್ಟಿಗೆ ಪ್ರಯಾಣ ಮಾಡುವಾಗ ಅವರವರೇ ಸೇರಿಕೊಂಡು ಅಂತ್ಯಾಕ್ಷರಿ ಆಡುವುದೋ, ಹರಟೆ ಹೊಡೆಯುವುದೋ ಇದ್ದೇ ಇರುತ್ತದೆ. ಆದರೆ ಈ ಬಾಲಕ ತನ್ನ ಪ್ರತಿಭೆಯಿಂದ ರೈಲು ಪ್ರಯಾಣಿಕರ ಗಮನ ಸೆಳೆದಿದ್ದಾನೆ. ಆತನ ಹಾಡು ಮುಗಿಯುವವರೆಗೂ ಒಬ್ಬೇ ಒಬ್ಬ ಪ್ರಯಾಣಿಕನೂ ತನ್ನ ಸೀಟ್ಗೆ ಮರಳಲಿಲ್ಲ. ಇನ್ನು ವೈರಲ್ ಆದ ವಿಡಿಯೊ ನೋಡಿ ನೆಟ್ಟಿಗರೂ ಬಾಲಕನನ್ನು ಹೊಗಳಿದ್ದಾರೆ. ಎಂಥಾ ಅದ್ಭುತ ಗಾಯನ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ: Viral video | ಮೈನಸ್ 40 ಡಿಗ್ರಿಯಲ್ಲಿ ಬಾಂಗ್ಡಾ ಡ್ಯಾನ್ಸ್ ಮಾಡಿ ಮೈ ಬೆಚ್ಚಗಾಗಿಸಿದ!