Site icon Vistara News

Brain Game : ಈ ಚಿತ್ರದಲ್ಲಿ ವಿಶೇಷ ಟೋಪಿ ಹಾಕಿಕೊಂಡ ಹಕ್ಕಿಯನ್ನು ಗುರುತಿಸಿ ನೋಡೋಣ!

#image_title

ಬೆಂಗಳೂರು: ಇತ್ತೀಚೆಗೆ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಗೇಮ್‌ನಂತಹ ಆಟಗಳು ಹೆಚ್ಚು ಸದ್ದು ಮಾಡುತ್ತಿರುತ್ತವೆ. ಅದೇ ರೀತಿಯ ಬ್ರೈನ್‌ ಗೇಮ್‌ ಒಂದನ್ನು ಇದೀಗ ನಾವು ನಿಮಗಾಗಿ ಹೊತ್ತು ತಂದಿದ್ದೇವೆ.

ಇಲ್ಲಿ ಒಂದಿಷ್ಟು ಹಕ್ಕಿಗಳ ಚಿತ್ರವನ್ನು ಕೊಡಲಾಗಿದೆ. ಇದರಲ್ಲಿ ಎಲ್ಲ ಹಕ್ಕಿಗಳು ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡುತ್ತಿವೆ. ಒಂದಿಷ್ಟು ಹಕ್ಕಿಗಳು ಮುತ್ತನ್ನಿಡುತ್ತ, ಹೂವು ಕೊಡುತ್ತಾ ಪ್ರೀತಿಯಲ್ಲಿದ್ದರೆ, ಕೆಲವು ಪುಸ್ತಕ ಓದುತ್ತಿವೆ, ಇನ್ನು ಕೆಲವು ಸುಮ್ಮನೆ ನಿಂತಿವೆ. ಅಂದ ಹಾಗೆ ಈ ಎಲ್ಲ ಹಕ್ಕಿಗಳು ಕೂಡ ಟೋಪಿಗಳನ್ನು ಹಾಕಿಕೊಂಡಿವೆ. ಎಲ್ಲ ಹಕ್ಕಿಗಳದ್ದು ಒಂದೇ ರೀತಿಯ ಟೋಪಿಯೇನಲ್ಲ. ಆದರೂ ಈ ಹಕ್ಕಿಗಳ ಟೋಪಿಗಳಲ್ಲಿ ಒಂದು ರೀತಿಯ ಟೋಪಿ ಮಾತ್ರ ಬಹಳ ವಿಶಿಷ್ಟವಾಗಿದೆ. ಅದು ಯಾವುದು ಎಂದು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು.


ಈ ಸವಾಲನ್ನು Gergely Dudás – Dudolf ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸೋಮವಾರ ಹಂಚಿಕೊಳ್ಳಲಾದ ಈ ಸವಾಲು ಹೆಚ್ಚೇ ಸದ್ದು ಮಾಡುತ್ತಿದೆ. ಪೋಸ್ಟ್‌ ನೋಡಿರುವ ಅನೇಕರು ತಮ್ಮ ಖಾತೆಗಳಲ್ಲಿ ಪೋಸ್ಟ್‌ ಅನ್ನು ಹಂಚಿಕೊಂಡಿದ್ದು, ತಮ್ಮ ಸ್ನೇಹಿತರಿಗೂ ಸವಾಲು ಒಡ್ಡಲಾರಂಭಿಸಿದ್ದಾರೆ. ಹಾಗೆಯೇ ಅಲ್ಲಿರುವ ಹಕ್ಕಿಗಳ ಬಗ್ಗೆಯೂ ಸಾಕಷ್ಟು ಕಾಮೆಂಟ್‌ಗಳು ಬರಲಾರಂಭಿಸಿವೆ.

ಇದನ್ನೂ ಓದಿ: Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್‌; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್‌
ಈ ಹಕ್ಕಿಗಳ ಟೋಪಿಗಳಲ್ಲಿ ಯಾವುದು ವಿಶಿಷ್ಟವಾಗಿದೆ ಎನ್ನುವುದನ್ನು ಕಂಡುಹಿಡಿಯಲು ಆಯಿತೇ? ಇಲ್ಲವಾದರೆ ನಾವೇ ಉತ್ತರ ಕೊಡುತ್ತೇವೆ ನೋಡಿ. ಇಲ್ಲಿರುವ ಎಲ್ಲ ಹಕ್ಕಿಗಳ ಟೋಪಿಗಳಿಗೆ ಹೋಲಿಸಿದರೆ ಈ ಕೆಳಗೆ ಗುರುತಿಸಲಾದ ರೀತಿಯ ಟೋಪಿ ವಿಶಿಷ್ಟವಾಗಿದೆ. ಇದರಲ್ಲಿ ಟೋಪಿಯ ಮೇಲೆ ಮತ್ತೊಂದು ವಿನ್ಯಾಸವನ್ನು ನೀವು ಕಾಣಬಹುದಾಗಿದೆ.

Exit mobile version