ಬುದ್ಧಿಗೆ ಕೆಲಸ ಕೊಡುವ ಚಿತ್ರಗಳು, ಒಗಟುಗಳು, ಫಜಲ್ಗಳು, ಲೆಕ್ಕಗಳೆಲ್ಲ ಸಖತ್ ಖುಷಿಕೊಡುತ್ತವೆ. ಅದನ್ನು ಬಿಡಿಸುವಷ್ಟು ಹೊತ್ತಾದರೂ ನಮ್ಮ ಮನಸು ಮತ್ತು ಬುದ್ಧಿ ಏಕಾಗ್ರತೆಯ ಸ್ಥಿತಿಯಲ್ಲಿರುತ್ತದೆ. ಮನಸು ಹಾಳಾಗಿದ್ದರೆ, ಏನೇನೋ ಬೇಡದ್ದೆಲ್ಲ ಯೋಚಿಸುತ್ತಿದ್ದರೂ, ಅದರಲ್ಲೂ ನೀವು ಓವರ್ ಥಿಂಕ್ (Overthink)ಮಾಡುವವರಾಗಿದ್ದರೆ, ಅದೆಲ್ಲದರಿಂದ ಪಾರಾಗಲು ಇಂಥ ಯಾವುದಾದರೂ ಬುದ್ಧಿಗೆ ಕೆಲಸ ಕೊಡುವ ಆಟದಲ್ಲಿ ತೊಡಗಿಸಿಕೊಳ್ಳಿ. ಲೆಕ್ಕ ಬಿಡಿಸಿ, ಸುಡೊಕು ಬಗೆಹರಿಸಿ. ನಿಮ್ಮ ಮನಸು ಫ್ರೆಶ್ ಆಗುತ್ತದೆ…ಈಗ ನಾವಿಲ್ಲಿ ಕೊಟ್ಟಿದ್ದೇವಲ್ಲ ಫೋಟೋ, ಅದರಲ್ಲಿ ಒಂದು ಕಪ್ಪೆಯಿದೆ ಹುಡುಕಿ ನೋಡೋಣ..!
ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ. ಬರಿ ಎಲೆಗಳೇ ತುಂಬಿ ಹೋಗಿವೆ. ಹಚ್ಚಹಸಿರು, ತಿಳಿಹಸಿರು, ಹಳದಿ, ನೇರಳೆ ಬಣ್ಣದ ಎಲೆಗಳು ಎಲ್ಲೆಲ್ಲೂ ಕಾಣುತ್ತಿವೆ. ಆದರೆ ಇಷ್ಟೆಲ್ಲ ಎಲೆಗಳ ಮಧ್ಯೆ ಒಂದು ಕಪ್ಪೆ ಸಿಲುಕಿಕೊಂಡಿದೆ. ನಿಮ್ಮ ಕಣ್ಣು ಮತ್ತು ಬುದ್ಧಿಗೆ ಕೆಲಸ ಕೊಡಿ. ಆ ಕಪ್ಪೆಯನ್ನು ಹುಡುಕಿ.
Gergely Dudás ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಫೋಟೋವನ್ನು ಟ್ವೀಟ್ ಮಾಡಲಾಗಿದೆ. ಮಾರ್ಚ್ 3ರಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರೂ ಕೂಡ ಕಪ್ಪೆ ಹುಡುಕವ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಹಲವರು ಕಪ್ಪೆ ಎಲ್ಲಿದೆ ಎಂಬುದನ್ನು ಹೇಳಿದ್ದಾರೆ. ಒಂದಷ್ಟು ಜನರು ತಪ್ಪು ಉತ್ತರ ಕೊಟ್ಟಿದ್ದರೆ, ಕೆಲವರು ಸರಿ ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ಒಂದಷ್ಟು ಜನರಂತೂ, ಇದರ ಸಹವಾಸವೇ ಬೇಡ. ನಮಗೆ ಅಷ್ಟು ತಾಳ್ಮೆಯೇ ಇಲ್ಲ ಎಂದು ಒಪ್ಪಿಕೊಂಡು ಬಿಟ್ಟಿದ್ದಾರೆ.
ಏನು..? ನಿಮಗೆ ಕಪ್ಪೆ ಕಂಡಿತಾ? ಎಲೆಗಳ ಮಧ್ಯೆಯಿದೆಯೋ, ಯಾವುದೋ ಮೂಲೆ ಸೇರಿಕೊಂಡಿದೆಯೋ ಎಂದೆಲ್ಲ ಯೋಚಿಸುತ್ತಿದ್ದೀರೋ? ಹುಡುಕಲು ಸಾಧ್ಯವೇ ಇಲ್ಲವೇ? ಹಾಗಾದರೆ ಈ ಕೆಳಗಿನ ಫೋಟೋ ನೋಡಿ. ಫೋಟೋದಲ್ಲಿ ಕಪ್ಪೆ ಇರುವ ಜಾಗದಲ್ಲಿ ಮಾರ್ಕ್ ಮಾಡಲಾಗಿದೆ..