Site icon Vistara News

Viral Video : ಬಲು ಚೂಟಿ ಈ ಬೆಕ್ಕು; ಇದು ಮಾಡುವ ಕಾಯಿನ್‌ ಟ್ರಿಕ್‌ ಹೇಗಿದೆ ನೋಡಿ

coin trick of cat

ಬೆಂಗಳೂರು: ಸಾಕು ಪ್ರಾಣಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡಿ ವೈರಲ್‌ ಆಗುತ್ತಿರುತ್ತವೆ. ಅದರಲ್ಲೂ ಮುದ್ದಾದ ನಾಯಿ ಅಥವಾ ಬೆಕ್ಕಿನ ವಿಡಿಯೊಗಳಂತೂ ನೆಟ್ಟಿಗರಿಗೆ ಹೆಚ್ಚೇ ಇಷ್ಟವಾಗುತ್ತವೆ. ಅದೇ ರೀತಿಯಲ್ಲಿ ಇದೀಗ ಚೂಟಿ ಬೆಕ್ಕೊಂದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಿಂದ ಭಾರೀ ಮೆಚ್ಚುಗೆ (Viral Video) ಪಡೆದುಕೊಳ್ಳುತ್ತಿದೆ.

ಟ್ವಿಟರ್‌ನಲ್ಲಿ Buitengebieden ಹೆಸರಿನ ಖಾತೆಯಲ್ಲಿ ಇಂಥದ್ದೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಬೆಕ್ಕಿನ ಮಾಲೀಕರು ನಾಣ್ಯವೊಂದನ್ನು ತಮ್ಮ ಕೈ ಬೆರಳುಗಳ ಮೇಲೆ ಇಟ್ಟುಕೊಂಡು ಅದನ್ನು ಹಾರಿಸಿದಂತೆ ಮಾಡಿ ಬೆರಳುಗಳ ಕೆಳಗೆ ಮುಚ್ಚಿಟ್ಟುಕೊಳ್ಳುತ್ತಾರೆ. ತಮ್ಮ ಬೆಕ್ಕನ್ನು ಕೈಗಳ ಮುಂದೆಯೇ ಕೂರಿಸಿಕೊಂಡು ಎರಡು ಬಾರಿ ಈ ಟ್ರಿಕ್‌ ಅನ್ನು ಬೆಕ್ಕಿಗೆ ಮಾಡಿ ತೋರಿಸುತ್ತಾರೆ.

ಇದನ್ನೂ ಓದಿ: Viral News : ವಾಕಿಂಗ್‌ ಮಾಡುತ್ತಿದ್ದ ಡಿಐಜಿ ಮೊಬೈಲನ್ನೇ ಕಿತ್ತುಕೊಂಡ ಹೋದ ಕಳ್ಳರು!
ಹೀಗೆ ಮಾಡಿದ ನಂತರ ನಾಣ್ಯವನ್ನು ಬೆಕ್ಕಿನ ಕೈಯ ಮೇಲೆ ಇಡುತ್ತಾರೆ. ಟ್ರಿಕ್‌ ಅನ್ನು ಕಲಿತುಕೊಂಡಿದ್ದ ಬೆಕ್ಕು, ತನ್ನ ಮಾಲೀಕರು ಮಾಡಿದಂತೆಯೇ ಮಾಡಿ, ನಾಣ್ಯವನ್ನು ಕೈಯ ಕೆಳಗೆ ಬಚ್ಚಿಟ್ಟುಕೊಳ್ಳುತ್ತದೆ. ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಅದರೊಂದಿಗೆ “ಕ್ವಿಕ್‌ ಲರ್ನರ್‌” ಎಂದು ಬರೆಯಲಾಗಿದೆ.

ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಜುಲೈ 19ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ 66 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 1 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ರಿಟ್ವೀಟ್‌ ಮಾಡಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?
“ಅಬ್ಬಾ, ಎಷ್ಟೊಂದು ಕ್ಯೂಟ್‌ ಆಗಿದೆ ಈ ಬೆಕ್ಕು”, “ನಿಜಕ್ಕೂ ಇದು ಕ್ವಿಕ್‌ ಲರ್ನರ್‌. ಎಷ್ಟು ಬೇಗ ಟ್ರಿಕ್‌ ಅನ್ನು ಕಲಿತುಕೊಂಡುಬಿಟ್ಟಿತು”, “ಬೆಕ್ಕುಗಳು ನಮಗೆ ಸಿಗುವ ಬೆಸ್ಟ್‌ ಫ್ರೆಂಡ್‌ಗಳು” ಎಂದು ಜನರು ಹಲವಾರು ರೀತಿಯ ಕಾಮೆಂಟ್‌ಗಳನ್ನು ವಿಡಿಯೊಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ “ವಾವ್‌”, “ಸೂಪರ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳು ಕೂಡ ವಿಡಿಯೊಗೆ ಬಂದಿವೆ. Buitengebieden ಟ್ವಿಟರ್‌ ಖಾತೆಯಲ್ಲಿ ಇದೊಂದೇ ಅಲ್ಲದೆ ಹಲವಾರು ವಿಡಿಯೊಗಳನ್ನು ಟ್ವೀಟ್‌ ಮಾಡಲಾಗಿದ್ದು, ಅದರಲ್ಲಿ ಹಲವಾರು ವಿಡಿಯೊಗಳು ವೈರಲ್‌ ಆಗಿವೆ.

Exit mobile version