ಮುಂಬೈ: ಭಾರತದಲ್ಲಿ ಕೋಳಿಗಳು ೫೦-೮೦ ಗ್ರಾಂ ತೂಕದ ಮೊಟ್ಟೆಗಳನ್ನು ಹಾಕುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ ಕೋಳಿಯೊಂದು ಭಾರಿ ತೂಕದ (Giant Egg) ಮೊಟ್ಟೆ ಹಾಕಿದೆ. ಕೊಲ್ಹಾಪುರದಲ್ಲಿ ಕೋಳಿಯು ೨೧೦ ಗ್ರಾಂ ತೂಕದ ಮೊಟ್ಟೆ ಹಾಕಿದ್ದು, ಇದು ದೇಶದಲ್ಲಿಯೇ ಭಾರಿ ಗಾತ್ರದ ಮೊಟ್ಟೆ ಎನಿಸಿದೆ. ಇದು ಹೈ ಲೈನ್ ಹಾಗೂ ಡಬ್ಲ್ಯೂ ೮೦ (Hi-line And W 80) ತಳಿಯ ಕೋಳಿ ಎಂದು ತಿಳಿದುಬಂದಿದೆ.
ಕೊಲ್ಹಾಪುರ ಜಿಲ್ಲೆ ತಲಸಂದೆ ಗ್ರಾಮದ ಪೌಲ್ಟ್ರಿ ಫಾರ್ಮ್‌ನಲ್ಲಿರುವ ಕೋಳಿಯೊಂದು ಮೊಟ್ಟೆ ಹಾಕಿದೆ. ಇದು ಸಾಮಾನ್ಯ ಮೊಟ್ಟೆಗಳಿಗಿಂತ ಹಚ್ಚಿನ ತೂಕ ಎನಿಸಿದೆ. ಬಳಿಕ ತೂಕ ಮಾಡಿದಾಗ ಇದು ೨೧೦ ಗ್ರಾಂ ಇರುವುದು ಗೊತ್ತಾಗಿದೆ. ವರದಿಗಳ ಪ್ರಕಾರ ಇದು ದೇಶದಲ್ಲಿಯೇ ಹೆಚ್ಚು ತೂಕದ ಮೊಟ್ಟೆ ಎನಿಸಿದೆ.
ಪಂಜಾಬ್‌ನ ಕೋಳಿಯೊಂದು ೧೬೨ ಗ್ರಾಂ ತೂಕ ಇತ್ತು. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿತ್ತು. ಆದರೀಗ, ಮಹಾರಾಷ್ಟ್ರದಲ್ಲಿ ಕೋಳಿ ಹಾಕಿದ ಮೊಟ್ಟೆ ೨೧೦ ಗ್ರಾಂ ಇರುವುದರಿಂದ ಇದೇ ಹೆಚ್ಚಿನ ತೂಕದ ಮೊಟ್ಟೆ ಎನಿಸಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆಯ ಫೋಟೊಗಳು ವೈರಲ್ ಆಗಿವೆ.
ಇದನ್ನೂ ಓದಿ | Kantara Movie | ʻಚಾನ್ಸೇ ಇಲ್ಲ, ನೋ ವೇʼ ಎಂದು ರೆಬೆಲ್ ಆಗಿ ಟ್ವೀಟ್ ಮಾಡಿದ ರಿಷಬ್ ಶೆಟ್ಟಿ: ವೈರಲ್ ಆಯ್ತು ಪೋಸ್ಟ್!