Site icon Vistara News

Viral Video : ಸಮುದ್ರದ ಆಳದಲ್ಲಿ ಧ್ವಜ ಹಾರಿಸಿದ ಕರಾವಳಿ ರಕ್ಷಣಾ ಪಡೆ! ಹೆಮ್ಮೆ ಎನಿಸುತ್ತದೆ ಈ ವಿಡಿಯೊ

coast guard independence day

ಚೆನ್ನೈ: ಇಂದು ಪೂರ್ತಿ ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಎಲ್ಲೆಡೆ ತ್ರಿವರ್ಣ ಧ್ವಜಗಳು ಹಾರಿದ್ದು, ಅದರ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿವೆ. ಅಂದ ಹಾಗೆ ಈ ಬಾರಿ ನೌಕಾ ಪಡೆಯು ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿದೆ. ಸಮುದ್ರದ ಆಳದಲ್ಲಿ ನಿಂತ ಕರಾವಳಿ ರಕ್ಷಣಾ ಪಡೆಯ(ಕೋಸ್ಟ್‌ ಗಾರ್ಡ್‌) ಯೋಧರು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral Video) ಆಗಿದೆ ಕೂಡ.

ಹೌದು. ತಮಿಳುನಾಡಿನ ರಾಮೇಶ್ವರ ಕಡಲ ದಡದಲ್ಲಿ ಕೋಸ್ಟ್‌ ಗಾರ್ಡ್‌ನ ಯೋಧರು ಸಮುದ್ರದ ಆಳಕ್ಕೆ ತಲುಪಿದ್ದಾರೆ. ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕಟ್ಟಿಕೊಂಡು ಕಡಲ ಗರ್ಭಕ್ಕಿಳಿದ ಅವರುಗಳು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಆ ದೃಶ್ಯವನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಲಾಗಿದೆ.

ಇದನ್ನೂ ಓದಿ: Viral Video: ರೇಸರ್​ಗಳಂತೆ ರಾಂಚಿಯಲ್ಲಿ ಬೈಕ್​ ಓಡಿಸಿದ ಧೋನಿ; ಬೈಕ್​ ಬೆಲೆ ಎಷ್ಟು?
ಈ ವಿಡಿಯೊವನ್ನು ಎಎನ್‌ಐ ಮಾಧ್ಯಮ ಸಂಸ್ಥೆಯು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊದೊಂದಿಗೆ ಈ ವಿಡಿಯೊವನ್ನು ರಾಮೇಶ್ವರದ ಕಡಲಾಳದಲ್ಲಿ ಚಿತ್ರೀಕರಿಸಿದ್ದು, ಹಾಗೆಯೇ ಅಲ್ಲಿರುವುದು ಕೋಸ್ಟ್‌ ಗಾರ್ಡ್‌ನ ಯೋಧರು ಎನ್ನುವ ಮಾಹಿತಿಯನ್ನೂ ಕೊಡಲಾಗಿದೆ.


ಈ ವಿಡಿಯೊವನ್ನು ಎಎನ್‌ಐ ಟ್ವಿಟರ್‌ ಖಾತೆಯಲ್ಲಿ ಮಂಗಳವಾರ ಬೆಳಗ್ಗೆ 10.48ರ ಸಮಯಕ್ಕೆ ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ವಿಡಿಯೊ 1.84 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 8,800ಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಕ್ಕೂ ಅಧಿಕ ಮಂದಿ ವಿಡಿಯೊವನ್ನು ತಮ್ಮ ತಮ್ಮ ವಾಲ್‌ಗಳಿಗೆ ರಿಪೋಸ್ಟ್‌ ಮಾಡಿಕೊಂಡಿದ್ದಾರೆ. ಸಾಕಷ್ಟು ಮಂದಿ ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ತರಕಾರಿ ಮಾರುವ ವ್ಯಕ್ತಿಯ ಬ್ಯಾಂಕ್‌ ಖಾತೆಗೆ 172 ಕೋಟಿ ರೂ. ಬಿತ್ತು; ಮುಂದೇನಾಯ್ತು?
“ಇದು ಭಾರತೀಯರೆಲ್ಲರೂ ಹೆಮ್ಮೆ ಪಡೆಬೇಕಾದ ಕ್ಷಣ”, “ಇದು 2023ರ ನಮ್ಮ ಸಾಧನೆ”, “ನಮ್ಮ ಸೇನೆಯ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ. ಹಾಗೆಯೇ ನಮ್ಮ ದೇಶದ ಬಗ್ಗೆಯೂ ಹೆಮ್ಮೆಯಿದೆ” ಎನ್ನುವಂತಹ ಕಾಮೆಂಟ್‌ಗಳು ಬಂದಿವೆ. ಅದರ ಜತೆಯಲ್ಲಿ “ಜೈ ಹಿಂದ್”‌, “ಭಾರತ್‌ ಮಾತಾ ಕಿ ಜೈ”, “ಸ್ವಾತಂತ್ರ್ಯ ದಿನದ ಶುಭಾಶಯಗಳು” ಎನ್ನುವಂತಹ ಹಲವು ಕಾಮೆಂಟ್‌ಗಳು ಕೂಡ ವಿಡಿಯೊಗೆ ಬಂದಿವೆ.

Exit mobile version