ಈ ರೊಟ್ಟಿ ಮಾಡುವವರು ಎಂಜಲು ಉಗುಳಿ, ಅದನ್ನು ಬೇಯಿಸುವ ಹಲವು ವಿಡಿಯೊಗಳು ಕಳೆದ ವರ್ಷ ವೈರಲ್ ಆಗಿದ್ದವು. ವಿವಾದಗಳೂ ಎದ್ದಿದ್ದವು. ಹಾಗೇ, ವಿಡಿಯೊಗಳು ವೈರಲ್ ಆದ ಬೆನ್ನಲ್ಲೇ ಆ ದುರುಳರನ್ನು ಪೊಲೀಸರು ಅರೆಸ್ಟ್ ಮಾಡಿ, ಅವರ ಅಂಗಡಿಯನ್ನು ಮುಚ್ಚಿಸಿದ ಘಟನೆಗಳೂ ನಡೆದಿದ್ದವು. ಈಗ ಅಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕೀಳು ಮನಸ್ಥಿತಿಯ ಜನರು ಅದೇನೇ ಆದರೂ ತಮ್ಮ ಬುದ್ಧಿ ಬಿಡುವುದಿಲ್ಲ ಎಂಬುದಕ್ಕೆ ವಿಡಿಯೊ ಸಾಕ್ಷಿ.
ಅಂದಹಾಗೇ, ಈ ಘಟನೆ ನಡೆದಿದ್ದು ಘಾಜಿಯಾಬಾದ್ನ ಸಾಹಿಬಾಬಾದ್ನಲ್ಲಿರುವ ಹೋಟೆಲ್ನಲ್ಲಿ. ಈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ತಸೀರುದ್ದೀನ್ ಎಂಬಾತ ಆರೋಪಿ. ಎರಡು-ಮೂರು ಜನರ ಜತೆ ಸೇರಿ ರೊಟ್ಟಿ ತಯಾರು ಮಾಡುತ್ತಿರುವ ಈತ ಮಧ್ಯೆಮಧ್ಯೆ ಅದಕ್ಕೆ ಉಗುಳುವುದನ್ನು ವಿಡಿಯೊ ನೋಡಬಹುದು. ಲೋಕೇಶ್ ರೈ ಎಂಬುವರು ವಿಡಿಯೊವನ್ನು ಶೇರ್ ಮಾಡಿಕೊಂಡು, ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿದ್ದರು. ಆರೋಪಿಯನ್ನು ಬಂಧಿಸಿದ್ದೇವೆ. ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ತಿಲಾ ಮೋರ್ ಪೊಲೀಸ್ ಸ್ಟೇಶನ್ನ ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ ತಿಳಿಸಿದ್ದಾರೆ.
2021ರ ಮಾರ್ಚ್ ತಿಂಗಳಲ್ಲಿ ಪಶ್ಚಿಮ ದೆಹಲಿಯ ಹೋಟೆಲ್ವೊಂದರಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಇಬ್ಬರು ಸೇರಿ ತಂದೂರಿ ರೊಟ್ಟಿ ಮಾಡುತ್ತಿದ್ದರು. ಅವರೂ ಕೂಡ ಇದೇ ಹೊಲಸು ಕೆಲಸ ಮಾಡುತ್ತಿದ್ದರು. ರೊಟ್ಟಿಯನ್ನು ತಟ್ಟಿ, ಅದನ್ನು ಬೇಯಿಸಲು ಹಾಕುವಾಗ ಅದರ ಮೇಲೆ ಉಗುಳುತ್ತಿದ್ದರು. ಆಗ ಜಿತೇಂದ್ರ ಶರ್ಮಾ ಎಂಬುವರು ವಿಡಿಯೊ ಶೇರ್ ಮಾಡಿದ್ದರು. ಅದರ ಬೆನ್ನಲ್ಲೇ ದೆಹಲಿ ಪೊಲೀಸರು ಆ ಇಬ್ಬರನ್ನೂ ಅರೆಸ್ಟ್ ಮಾಡಿದ್ದರು.
ಇದನ್ನೂ ಓದಿ: ಚೆಂಡಿಗೆ ಎಂಜಲು ಬಳಸುವ ಪದ್ಧತಿ ಸಂಪೂರ್ಣ ನಿಷೇಧ, ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಐಸಿಸಿ