Site icon Vistara News

ಸಿಂಹದ ಮರಿಯಂಥ ಕರುವಿಗೆ ಜನ್ಮ ನೀಡಿದ ಹಸು; ಮೃತಪಟ್ಟರೂ ಮಣ್ಣು ಮಾಡಲು ತೆಗೆದುಕೊಂಡು ಹೋಗಲು ಆಗದಷ್ಟು ಜನವೋ ಜನ!

Cow gives birth lion like calf In Madhya Pradesh

#image_title

ಭೋಪಾಲ್​: ಮಧ್ಯಪ್ರದೇಶದಲ್ಲಿ ಹಸುವೊಂದರ ಹೊಟ್ಟೆಯಲ್ಲಿ ಸಿಂಹದ ಮರಿಯಂಥ ಕರು ಹುಟ್ಟಿದೆ (lion-like calf in Madhya Pradesh). ಅಲ್ಲಿನ ರೈಸೆನ್ ಜಿಲ್ಲೆಯ ಬೇಗಂಗಂಜ್​​ನಲ್ಲಿರುವ ಗೋರ್ಖಾ ಎಂಬ ಹಳ್ಳಿಯಲ್ಲಿ ಹುಟ್ಟಿದ ವಿಚಿತ್ರ ಕರುವನ್ನು ನೋಡಲು ಆ ಹಳ್ಳಿ ಮಾತ್ರವಲ್ಲ, ಸುತ್ತಲಿನ ಹಳ್ಳಿಗಳ ಜನರೂ ದಂಡುದಂಡಾಗಿ ಬರುತ್ತಿದ್ದಾರೆ. ಸದ್ಯ ಅಲ್ಲಿನ ಎಲ್ಲರ ಬಾಯಲ್ಲೂ ಈಗ ಸಿಂಹದ ಮರಿಯಂಥ ಹಸುವಿನ ಕರುವಿನ ಸುದ್ದಿಯೇ..!

ಕರುವನ್ನು ನೋಡಿದ ಜನರು ಅವರಷ್ಟಕ್ಕೇ ಅವರು ಒಂದೊಂದು ಕತೆ ಹೆಣೆಯುತ್ತಿದ್ದಾರೆ. ಹೀಗಾಗಿರಬಹುದು..ಹಾಗಾಗಿರಬಹುದು ಎಂದು ಅಂದಾಜಿಸುತ್ತಿರುವ ಬೆನ್ನಲ್ಲೇ, ಅಲ್ಲಿನ ಪಶುವೈದ್ಯರು ಇದಕ್ಕೆ ಉತ್ತರ ನೀಡಿದ್ದಾರೆ. ಹಸುವಿನ ಗರ್ಭಕೋಶದಲ್ಲಿ ಸಮಸ್ಯೆ ಇದ್ದಾಗ ಇಂಥ ಕರುಗಳು ಹುಟ್ಟುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ. ಸಿಂಹದ ಮರಿಯಂಥ ಕರು ಹುಟ್ಟಿದಾಗ ಆರೋಗ್ಯವಾಗಿಯೇ ಇತ್ತು. ಆದರೆ 30 ನಿಮಿಷದಲ್ಲಿಯೇ ಸಾವನ್ನಪ್ಪಿದೆ. ಆದರೂ ತಕ್ಷಣಕ್ಕೆ ಅದನ್ನು ಮಣ್ಣುಮಾಡಲಿಲ್ಲ. ಯಾಕೆಂದರೆ ಅದನ್ನು ನೋಡಲು ಜನರು ಆಗಮಿಸುತ್ತಲೇ ಇದ್ದರು ಎಂದು ವರದಿಯಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ನಮ್ಮ ರಾಜ್ಯ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿತ್ತು. ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬವರ ಕೊಟ್ಟಿಗೆಯಲ್ಲಿ ಹಸು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿತ್ತು. ಒಂದೇ ದೇಹ ಎರಡು ತಲೆ, ನಾಲ್ಕು ಕಣ್ಣುಗಳನ್ನು, ಎರಡು ಕಿವಿಗಳನ್ನು ಹೊಂದಿತ್ತು. ಇದೇನೂ ಹೊಸ ಸನ್ನಿವೇಶವಲ್ಲ. ಅಲ್ಲೊಂದು, ಇಲ್ಲೊಂದು ಎಂಬಂತೆ ವಿಚಿತ್ರ ಕರುಗಳು, ವಿಚಿತ್ರ ಶಿಶುಗಳ ಜನನವಾಗುತ್ತಲೇ ಇರುತ್ತವೆ. ಆದರೆ ಹಾಗೆ ಹುಟ್ಟಿದ ಪ್ರಾಣಿಗಳ/ಶಿಶುಗಳ ಜೀವಿತಾವಧಿ ತೀರ ಕಡಿಮೆ ಇರುತ್ತದೆ.

ಇದನ್ನೂ ಓದಿ: Leopard Trapped: ಇಲ್ಲಿ ಚಿರತೆಗಳು ಮುದುಡಿ ಮಲಗಿವೆ, ಆಕಳ ಕರುವಿನ ನೋಟಕ್ಕೇ ಗಡಗಡ ನಡುಗುತ್ತಿವೆ.. ಏನಿದು ವಿಚಿತ್ರ!?

Exit mobile version