ಮೊಸಳೆಗಳು ಅತ್ಯಂತ ಅಪಾಯಕಾರಿ ಸರೀಸೃಪಗಳು. ಮೊಸಳೆಗಳು ಇರುವ ಹೊಳೆ, ನದಿ, ಸರೋವರಗಳ ಸಮೀಪ ಹೋದಾಗ ನಾವೆಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗೋದಿಲ್ಲ. ಬಲಶಾಲಿ ಮೊಸಳೆಗಳು ಮನುಷ್ಯರನ್ನೂ ಸೇರಿ, ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಬಲ್ಲವು ಎಂಬುದು ನಮಗೆಲ್ಲ ಗೊತ್ತಿದೆ. ಆದರೆ ಆ ಮೊಸಳೆಗಳು ಲೋಹದ ಬೇಲಿಯನ್ನೂ ಬಾಗಿಸಿಬಿಡುವಷ್ಟು ಶಕ್ತಿಶಾಲಿ ಎಂಬುದು ನಿಮಗೆ ಗೊತ್ತಾ? ನೀವೆಂದಾದರೂ ಮೊಸಳೆ, ಲೋಹದ ಬೇಲಿಯನ್ನು ಮುರಿದಿದ್ದು ನೋಡಿದ್ದೀರಾ?; ಇಲ್ಲಿದೆ ನೋಡಿ ಅಚ್ಚರಿ ಹುಟ್ಟಿಸುವ ವಿಡಿಯೊ..
ದೊಡ್ಡದಾದ ಮೊಸಳೆಯೊಂದು ಕಬ್ಬಿಣದ ಬೇಲಿಯ ಒಂದು ಬದಿಗೆ ಇದೆ. ಆ ಸರೀಸೃಪಕ್ಕೆ ಬೇಲಿಯ ಮತ್ತೊಂದು ಭಾಗಕ್ಕೆ ಹೋಗಬೇಕಾಗಿತ್ತು. ಮೊದಲು ತನ್ನ ಮೂತಿಯನ್ನು ಕಬ್ಬಿಣದ ಸರಳುಗಳ ಮಧ್ಯೆ ಹಾಕಿತು. ನಂತರ ಅದನ್ನು ಹಿಗ್ಗಿಸಿ, ತನ್ನ ಇಡೀ ಮೈಯನ್ನು ಅದರಲ್ಲಿ ನುಗ್ಗಿಸಿಯೇ ಬಿಟ್ಟಿದೆ. ಅಂದಹಾಗೇ, ಇದು ಕಬ್ಬಿಣದ ಬೇಲಿ ಎಂದೇ ಹೇಳಲಾಗುತ್ತಿದ್ದರೂ, ನಿಜಕ್ಕೂ ಅದು ಕಬ್ಬಿಣದ್ದೋ, ಅಥವಾ ಇನ್ಯಾವುದೇ ಲೋಹದ ಬೇಲಿಯೋ ಎಂಬುದು ಸ್ಪಷ್ಟವಾಗಿಲ್ಲ. ನೆಟ್ಟಿಗರಂತೂ ವಿಡಿಯೊ ನೋಡಿ ಹುಬ್ಬೇರಿಸಿದ್ದಾರೆ.
ಇಲ್ಲಿದೆ ನೋಡಿ ಮೊಸಳೆ, ಲೋಹದ ಬೇಲಿಯನ್ನೇ ಮುರಿದ ವಿಡಿಯೊ: