Site icon Vistara News

Viral Video : ಅಪ್ಪ ನಾನೀಗ ಡಾಕ್ಟರ್‌ ಎಂದ ಮಗಳು! ಭಾವುಕರಾದ ತಂದೆ!

daughter tells father that she is a doctor

ತಂದೆ ತಾಯಿಗೆ ಮಕ್ಕಳನ್ನು ದೊಡ್ಡ ಹಂತದಲ್ಲಿ ನೋಡಬೇಕು ಎನ್ನುವ ಆಸೆಯಿರುತ್ತದೆ. ಆ ಸಾಧನೆಯನ್ನು ಮಕ್ಕಳು ಮಾಡಿದಾಗ ತಂದೆ ತಾಯಿ ನಿಜಕ್ಕೂ ಸಂತಸದಿಂದ ಕುಣಿದಾಡಿಬಿಡುತ್ತಾರೆ. ಅದೇ ರೀತಿ ತಂದೆಯೊಬ್ಬರು ತಮ್ಮ ಮಗಳು ಡಾಕ್ಟರ್‌ ಆದಳು ಎನ್ನುವ ಸಂತೋಷದಿಂದ ಹರಸುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಸನಾ ಅರ್ಷಫ್‌ ಹೆಸರಿನ ಯುವತಿ ವಿಡಿಯೊ ರೆಕಾರ್ಡಿಂಗ್‌ ಮಾಡುತ್ತಾ ತನ್ನ ತಂದೆಗೆ ಕರೆ ಮಾಡುತ್ತಾಳೆ. ಮೊದಲಿಗೆ ಅವರ ಕ್ಷೇಮ ಸಮಾಚಾರ ವಿಚಾರಿಸುತ್ತಾಳೆ. ನಂತರ ನನಗೆ ಸ್ವಲ್ಪ ಹಣ ವರ್ಗಾಯಿಸಿ ಎಂದು ಕೇಳುತ್ತಾಳೆ. ಹಾಗೆಯೇ, “ನೀವು ನನಗೆ ಹಣ ವರ್ಗಾಯಿಸುವಾಗ ಏನೆಂದು ಹೆಸರು ತೋರಿಸುತ್ತದೆ” ಎಂದು ಕೇಳುತ್ತಾಳೆ. ಅದಕ್ಕೆ ಆಕೆಯ ತಂದೆ ಸನಾ ಅರ್ಷಫ್‌ ಎಂದು ಹೇಳುತ್ತಾರೆ. ಆಗ ಆಕೆ “ಬರೀ ಸನಾ ಅಲ್ಲ ಅಪ್ಪ, ಡಾಕ್ಟರ್‌ ಸನಾ ಅರ್ಷಫ್‌. ರಿಸಲ್ಟ್‌ ಬಂದಿದೆ. ನಾನು ಪಾಸ್‌ ಆಗಿಬಿಟ್ಟೆ” ಎಂದು ಸಂತಸದಿಂದ ಹೇಳುತ್ತಾಳೆ.

ಇದನ್ನೂ ಓದಿ: Viral Video: ಮಹಾಕಾಲನ ಮೆರವಣಿಗೆ ಮೇಲೆ ನೀರು ಉಗುಳಿದ್ದವರ ಮನೆ ಧ್ವಂಸ; ಜತೆಗೆ ತಮಟೆ, ಡ್ರಮ್ ವಾದನ
ಅದನ್ನು ಕೇಳಿದ ತಂದೆ ಸಂತಸದಿಂದ ಮಗಳಿಗೆ ಅಭಿನಂದನೆ ತಿಳಿಸಲಾರಂಭಿಸುತ್ತಾರೆ. ಹಲವಾರು ರೀತಿಯಲ್ಲಿ ಮಗಳಿಗೆ ಆಶೀರ್ವದಿಸುತ್ತಾರೆ. ಈ ಎಲ್ಲ ದೃಶ್ಯವನ್ನು ಸನಾ ಅವರು ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದಾರೆ.


ಈ ವಿಡಿಯೊವನ್ನು ಡಾ. ಹರೆ ಹೆಸರಿನವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಡಿಯೊವನ್ನು ಮೇ 30ರಂದು ಪೋಸ್ಟ್‌ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ 20 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 2.5 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ತರೇವಾರು ಕಾಮೆಂಟ್‌ಗಳನ್ನು ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

“ನೀಟ್ ಆಕಾಂಕ್ಷಿಯಾಗಿರುವ ನನಗೆ ಈ ವಿಡಿಯೊ ನೋಡಿದಾಕ್ಷಣ ಕಣ್ಣಲ್ಲಿ ನೀರು ಬಂದಿತು. ನೀವು ನಿಜಕ್ಕೂ ಗ್ರೇಟ್‌. ಎಲ್ಲ ಒಳ್ಳೆಯದೇ ಆಗಲಿ”, “ಪ್ರತಿಯೊಬ್ಬ ತಂದೆಯೂ ಹೆಮ್ಮೆ ಪಡುವ ವಿಚಾರ. ವಿಡಿಯೊ ತುಂಬಾ ಚೆನ್ನಾಗಿದೆ”, “ನಮಗೂ ಇಂಥದ್ದೇ ದೊಡ್ಡ ಕನಸಿದೆ. ನಮ್ಮ ಕನಸೂ ಆದಷ್ಟು ಬೇಗ ಈಡೇರುವಂತಾಗಲಿ” ಎನ್ನುವಂತಹ ನೂರಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್‌”, “ಅಭಿನಂದನೆಗಳು”, “ಗ್ರೇಟ್‌ ಡಾಟರ್‌ ಅಂಡ್‌ ಡಾಕ್ಟರ್‌” ಎನ್ನುವಂತಹ ಹಲವಾರು ಕಮೆಂಟ್‌ಗಳೂ ವಿಡಿಯೊಗೆ ಬಂದಿವೆ.

Exit mobile version