ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ (Indian cricket team batsman) ಶುಬ್ ಮನ್ ಗಿಲ್ (Shubman Gill) ಅವರನ್ನು ವಿರಾಟ್ ಕೊಹ್ಲಿ (Virat Kohli) ದೂಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social food) ಭಾರಿ ವೈರಲ್ ಆಗಿದೆ. ಆದರೆ ಇದು ಡೀಪ್ ಫೇಕ್ ವಿಡಿಯೋ (Deepfake Video) ಎನ್ನಲಾಗಿದ್ದರೂ ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.
ವಿರಾಟ್ ಕೊಹ್ಲಿಯು ಈ ಡೀಪ್ ಫೇಕ್ ವಿಡಿಯೋದಲ್ಲಿ ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯು ಮಾತನಾಡುತ್ತಾ, ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋ ಕೃತಕ ಬುದ್ಧಿಮತ್ತೆಯ ತಪ್ಪು ಬಳಕೆ ಮತ್ತು ಅದು ಹೇಗೆ ಅಪಾಯಕಾರಿ ಎಂಬುದರ ಕುರಿತು ಕಳವಳ ವ್ಯಕ್ತಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಗಮನ ಸೆಳೆದಿರುವ ಎಡಿಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿಯು, ನಾನು ಗಿಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರು ನಿಸ್ಸಂದೇಹವಾಗಿ ಪ್ರತಿಭಾವಂತರು. ಆದರೆ ಭರವಸೆಯನ್ನು ತೋರಿಸುವುದು ಮತ್ತು ದಂತಕಥೆಯಾಗುವುದರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದ್ದಾರೆ.
AI is Dangerous pic.twitter.com/njUvwiwc4t
— Cricketopia (@CricketopiaCom) August 27, 2024
ಇದಲ್ಲದೆ, ಎಡಿಟ್ ಮಾಡಿರುವ ವಿಡಿಯೋದಲ್ಲಿ ನಾಯಕ ಗಿಲ್ ಅವರ ತಂತ್ರದ ಬಗ್ಗೆ ಕೊಹ್ಲಿ ಮಾತನಾಡುವುದನ್ನು ಕಾಣಬಹುದು. ಗಿಲ್ ಅವರ ತಂತ್ರವು ಘನವಾಗಿದೆ. ಆದರೆ ನಾವೇ ಮುಂದೆ ಹೋಗಬಾರದು. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ.. ಒಬ್ಬನೇ ವಿರಾಟ್ ಕೊಹ್ಲಿ.
ಈ ವಿಡಿಯೋವನ್ನು ಆಗಸ್ಟ್ 27 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 4,000 ಹೆಚ್ಚು ಲೈಕ್‌ಗಳನ್ನು ಹೊಂದಿದೆ. ಅನೇಕ ಜನರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Duleep Trophy: ದುಲೀಪ್ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್
ಒಬ್ಬ ಬಳಕೆದಾರ, ಜನರು ಎಷ್ಟೇ ಸೊಕ್ಕಿನವರಾಗಿರಬಹುದು ಆದರೆ ಅವರು ಇದನ್ನು ಎಂದಿಗೂ ಹೇಳುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು , ನೀವು ಎಐ ಎಂದು ಹೇಳದಿದ್ದರೆ, ನಾನು ಶೇ. 95ರಷ್ಟು ನಂಬುತ್ತಿದ್ದೆ ಎಂದಿದ್ದಾರೆ.
ನಾನು ಅರೆ ನಿದ್ದೆಯಲ್ಲಿದ್ದೇನೆ ಮತ್ತು ವಿರಾಟ್ ಈ ರೀತಿ ಮಾತನಾಡುವುದಿಲ್ಲ ಮತ್ತು ಇದು ಅವರ ಧ್ವನಿಯೂ ಅಲ್ಲ ಎಂದು ನನಗೆ ಇನ್ನೂ ತಿಳಿದಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.