ಕಾನ್ಪುರ: ಮಗಳ ಮದುವೆ (daughter wedding) ಮಾಡಿ ಗಂಡನ ಮನೆಗೆ ಕಳುಹಿಸುವಾಗ ಬ್ಯಾಂಡ್ ಬಾಜಾದೊಂದಿಗೆ (band baja) ಕಳುಹಿಸುವುದು ಸಂಪ್ರದಾಯ. ಆದರೆ ಇಲ್ಲೊಬ್ಬರು ಮಗಳ ವಿಚ್ಛೇದನದ ಬಳಿಕ ಬ್ಯಾಂಡ್ ಬಾಜಾದೊಂದಿಗೆ (Divorce Celebration) ಮಗಳನ್ನು ಮರಳಿ ಮನೆಗೆ ಕರೆ ತಂದು ಸಂಭ್ರಮಿಸಿದ್ದಾರೆ. ಈ ಘಟನೆ ಕಾನ್ಪುರದಲ್ಲಿ (Kanpur) ಭಾರಿ ಸದ್ದು ಮಾಡಿದೆ.
ಕಾನ್ಪುರದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಮಗಳ ವಿಚ್ಚೇದನವನ್ನು ಬ್ಯಾಂಡ್ ಬಾಜಾದೊಂದಿಗೆ ಆಚರಿಸಿ ಸಂಭ್ರಮಿಸಿದ್ದಾರೆ. ವಿಚ್ಛೇದನದ ಬಳಿಕ ಮಗಳು ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಸಮಾಜದ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಮಗಳಿಗೆ ಯಾವುದೇ ಸಾಮಾಜಿಕ ಕಳಂಕ ಬಾರದೇ ಇರಲಿ ಎಂದು ತಂದೆಯೊಬ್ಬರು ಸ್ಫೂರ್ತಿದಾಯಕ ಹೆಜ್ಜೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ: Divorce Case : ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್ ಪೀರಿಯೆಡ್ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!
ಮಗಳು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸುವಾಗ ಬ್ಯಾಂಡ್ ಬಾಜಾದೊಂದಿಗೆ ಗಂಡನ ಮನೆಗೆ ಕಳುಹಿಸಿಕೊಡುತ್ತೇವೆ. ಅದೇ ರೀತಿ ವಿಚ್ಛೇದನದ ಬಳಿಕ ಆಕೆ ಹೊಸ ಜೀವನವನ್ನು ಆರಂಭಿಸುವ ಸಮಯ. ನಾವು ಅವಳನ್ನು ಕೆಲವು ವರ್ಷಗಳ ಹಿಂದೆ ಕಳುಹಿಸಿದ್ದೇವೆ. ಈಗ ಮರಳಿ ಕರೆ ತಂದಿದ್ದೇವೆ. ಅವಳು ಹೊಸದಾಗಿ ಜೀವನ ಪ್ರಾರಂಭಿಸುವ ಸಮಯ ಬಂದಿದೆ ಎಂದು ಬಿಎಸ್ ಎನ್ ಎಲ್ ನ ನಿವೃತ್ತ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.
कानपुर : तलाक होने पर बेटी को धूमधाम से वापस लाया पिता
— भारत समाचार | Bharat Samachar (@bstvlive) April 29, 2024
➡बेटी को लाने ढोल-बाजे के साथ ससुराल पहुंचा पिता
➡उर्वी की शादी चकेरी के आशीष के साथ हुई थी
➡उर्वी दिल्ली एयरपोर्ट पर कार्यरत है, उनकी एक 5 साल बेटी है
➡8 साल बाद हुआ तलाक तो पिता लाया वापस
➡लेकिन दहेज लोभी ससुरालियों… pic.twitter.com/VSP6Dyst4C
ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಎಂಜಿನಿಯರ್ ಆಗಿರುವ ಅನಿಲ್ ಅವರ ಪುತ್ರಿ ಉರ್ವಿ (36) ಅವರಿಗೆ 2016ರಲ್ಲಿ ಕಂಪ್ಯೂಟರ್ ಎಂಜಿನಿಯರ್ ಒಬ್ಬನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಉರ್ವಿ ದಂಪತಿ ದೆಹಲಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಉರ್ವಿಯ ಅತ್ತೆಯಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫೆ. 28ರಂದು ಅವರು ವಿವಾಹ ವಿಚ್ಛೇದನ ಪಡೆದಿದ್ದಾರೆ. ಎಂಟು ವರ್ಷಗಳ ಚಿತ್ರಹಿಂಸೆ, ಹೊಡೆತ ಮತ್ತು ನಿಂದೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಕೊನೆಗೆ ಮದುವೆ ಮುರಿಯುವ ನಿರ್ಧಾರ ಮಾಡಿದೆ ಎಂದು ಉರ್ವಿ ಹೇಳಿದರು.
ವಿಚ್ಛೇದನಕ್ಕೂ ಸಂಭ್ರಮ
ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ ಈಗ ವಿಚ್ಛೇದನಗಳು ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಜಗಳಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆಯುತ್ತಿದ್ದಾರೆ.
ವಿಚ್ಛೇದನ ಎನ್ನುವುದು ಕೇವಲ ಒಂದು ಹೆಣ್ಣನ್ನು ಮಾತ್ರವಲ್ಲ ಆಕೆಯ ಸಂಪೂರ್ಣ ಕುಟುಂಬವನ್ನೇ ಜರ್ಜರಿತರನ್ನಾಗಿ ಮಾಡುತ್ತದೆ. ತಮ್ಮ ನೋವು ತಮಗೆ ಆದರೂ ಸಮಾಜದ ಚುಚ್ಚು ಮಾತುಗಳು ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತದೆ. ವಿಚ್ಛೇದನ ಎನ್ನುವುದು ಹೆಣ್ಣಿಗೆ ಶಾಪವಲ್ಲ ಎಂಬುದನ್ನು ತೋರ್ಪಡಿಸಲು ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಸಂಭ್ರಮಿಸುವವರು ಹೆಚ್ಚಾಗಿದ್ದಾರೆ. ವಿದೇಶದಲ್ಲಿದ್ದ ಈ ಸಂಸ್ಕೃತಿ ಈಗ ನಮ್ಮಲ್ಲೂ ಬೇರೂರುತ್ತಿದೆ.
ದೊಡ್ಡದೊಡ್ಡ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಸಂಭ್ರಮಿಸುತ್ತಾರೆ. ಇತ್ತೀಚಿಗೆ ಫ್ಯಾಶನ್ ಡಿಸೈನರ್ ಶಾಲಿನಿ ಕೆಂಪು ಬಣ್ಣದ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಕೊಂಡು ವಿಚ್ಛೇದನವನ್ನು ಸಂಭ್ರಮಿಸಿದ್ದರು.
ಇಂತಹ ಸಂಸ್ಕೃತಿಯನ್ನು ಇದೀಗ ಪೋಷಕರೇ ಮುಂದೆ ನಿಂತು ಆಚರಿಸುತ್ತಿರುವುದು ನೊಂದ ಹೆಣ್ಣಿಗೆ ಶಕ್ತಿ ತುಂಬಿದಂತಾಗುವುದು.