Site icon Vistara News

Viral Video: ಇದು ಕದ್ದುಮುಚ್ಚಿ ಮುತ್ತು ಕೊಡುವ ಮುದ್ದಾದ ನಾಯಿ! ನಿಮ್ಮ ಮನೆ ನಾಯಿನೂ ಹೀಗೇನಾ?

dog video

ಬೆಂಗಳೂರು: ನಾಯಿಗಳನ್ನು ಸಾಕಿದವರಿಗೆ ಅವು ತೋರಿಸುವ ಪ್ರೀತಿಯ ಬಗ್ಗೆ ಅರಿವಿರುತ್ತದೆ. ನಿಜಕ್ಕೂ ಒಂದು ಪುಟ್ಟ ಮಗುವಿನಷ್ಟೇ ಮುಗ್ದತೆ, ಪ್ರೀತಿಯನ್ನು ನಾವು ನಾಯಿಗಳಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ತನ್ನ ಮಾಲೀಕನ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿರುವ ನಾಯಿಯೊಂದು ಮಾಲೀಕನಿಗೆ ಕದ್ದುಮುಚ್ಚಿ ಮುತ್ತನ್ನಿಡುವ ಮುದ್ದಾದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಟ್ವಿಟರ್‌ನಲ್ಲಿ Buitengebieden ಹೆಸರಿನ ಖಾತೆಯಲ್ಲಿ ಇಂಥದ್ದೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಸೋಫಾದ ಕೆಳಗೆ ಕುಳಿತಿರುತ್ತಾನೆ. ಅವನು ಸಾಕಿರುವ ನಾಯಿ ಸೋಫಾದ ಮೇಲೆ ಕುಳಿತಿರುತ್ತದೆ. ಆತ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡು ಮೊಬೈಲ್‌ ಕ್ಯಾಮೆರಾ ಆನ್‌ ಮಾಡಿಕೊಂಡಿರುತ್ತಾನೆ. ಆತ ಮೊಬೈಲ್‌ನತ್ತ ನೋಡುವಾಗ ಆ ನಾಯಿ ಬೇಗನೆ ಆತನತ್ತ ಬಂದು ಆತನ ಕೆನ್ನೆಗೆ ಮುತ್ತನ್ನಿಡುತ್ತದೆ. ಅದನ್ನು ನೋಡಲೆಂದು ಆತ ತಿರುಗುವುದರೊಳಗೆ ನಾಯಿ ತನಗೇನೂ ಗೊತ್ತಿಲ್ಲವೇನೋ ಎನ್ನುವಂತೆ ಮೊದಲಿದ್ದ ಜಾಗದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಹತ್ತು ಸೆಕೆಂಡುಗಳಲ್ಲಿ ಒಟ್ಟು ಮೂರು ಬಾರಿ ನಾಯಿ ಈ ರೀತಿ ಕದ್ದುಮುಚ್ಚಿ ಮುತ್ತನ್ನು ಕೊಡುತ್ತದೆ.

ಇದನ್ನೂ ಓದಿ: Viral Video : ಕಾವಾಲಯ್ಯ ಎಂದು ಕುಣಿಯುತ್ತಿರುವ ಈ ಬೆಡಗಿಯ ನೋಡಿ!
ಈ ವಿಡಿಯೊವನ್ನು ಜುಲೈ 25ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.6 ಕೋಟಿಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 2.8 ಲಕ್ಷಕ್ಕೂ ಅಧಿಕ ಮಂದಿ ಟ್ವೀಟ್‌ಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ 34 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿಕೊಂಡಿದ್ದಾರೆ.


ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ. “ನನ್ನ ಬಳಿಯೂ ನಾಯಿ ಇದೆ. ಆದರೆ ಅದು ಹೀಗೆ ಕದ್ದುಮುಚ್ಚಿ ಮುತ್ತನ್ನು ಕೊಡುವುದೇ ಇಲ್ಲ. ನೇರವಾಗಿಯೇ ಬಂದು ಕೊಟ್ಟು ಹೋಗುತ್ತದೆ. ಹೀಗೆ ಕದ್ದುಮುಚ್ಚಿ ಮುತ್ತು ಕೊಡುವುದು ಏನೋ ಒಂಥರ ಚಂದ”, “ಆ ನಾಯಿ ಎಷ್ಟೊಂದು ಮುದ್ದಾಗಿದೆ”, “ಇಷ್ಟೊಂದು ಪ್ರೀತಿ ಮಾಡುವ ನಾಯಿಯನ್ನು ಸಾಕುತ್ತಿರುವ ನೀವು ಅದೃಷ್ಟವಂತರು” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಷ್ಟೇ ಅಲ್ಲದೆ “ವಾವ್‌”, “ಸೂಪರ್”‌ ಎಂದೂ ಜನರು ವಿಡಿಯೊ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Exit mobile version