Site icon Vistara News

Viral Video : ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಲ್ಲಿ ಭರ್ಜರಿ ನಿದ್ದೆ ಹೊಡೆದ ನಾಯಿ! ವೈರಲ್‌ ಆಯ್ತು ವಿಡಿಯೊ

dog video

ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತದೆ. ಅದರಲ್ಲೂ ಮುದ್ದಾದ ನಾಯಿಗಳ ವಿಡಿಯೊವಂತೂ ನೆಟ್ಟಿಗರ ಮನಸ್ಸನ್ನು ಕದ್ದು ಬಿಡುತ್ತದೆ. ಅಂಥದ್ದೇ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್‌ (Viral Video) ಆಗಿದೆ.

ನೀವು ನಾಯಿಗಳನ್ನು ಹೆಚ್ಚಾಗಿ ಪ್ರೀತಿಸುವುದಾದರೆ ಇನ್‌ಸ್ಟಾಗ್ರಾಂನಲ್ಲಿ ವರ್ಲ್ಡ್‌ ವೈಡ್‌ ವಿನ್ಸ್ಟನ್‌ ಹೆಸರಿನ ಖಾತೆಯನ್ನು ಹಿಂಬಾಲಿಸಲೇಬೇಕು. ವಿನ್ಸ್ಟನ್‌ ಹೆಸರಿನ ನಾಯಿ ತನ್ನ ಮಾಲೀಕನೊಂದಿಗೆ ಮಾಡುವ ಎಲ್ಲ ಸರ್ಕಸ್‌ಗಳನ್ನು ನೀವು ಆ ಖಾತೆಯಲ್ಲಿ ಕಾಣಬಹುದು. ಅದರಂತೆ ಈಗ ವೈರಲ್‌ ಆಗಿರುವ ವಿಡಿಯೊದಲ್ಲಿ ವಿನ್ಸ್ಟನ್‌ ತನ್ನ ಮಾಲೀಕ ವಿಮಾನದಲ್ಲಿ ಬುಕ್‌ ಮಾಡಿಕೊಂಡಿದ್ದ ಬಿಸಿನೆಸ್‌ ಕ್ಲಾಸ್‌ ಸೀಟ್‌ ಅನ್ನು ತಾನೇ ಆವರಿಸಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪುಟ್ಟದೊಂದು ಗೊಂಬೆಯ ಜತೆಯಲ್ಲಿ ಪ್ರಪಂಚದ ಅರಿವೇ ಇಲ್ಲವೆನ್ನುವಂತೆ ವಿನ್ಸ್ಟನ್‌ ಮಲಗಿಕೊಂಡಿದ್ದಾನೆ!

ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ
ಈ ವಿಡಿಯೊವನ್ನು ವರ್ಲ್ಡ್‌ವೈಡ್‌ ವಿನ್ಸ್ಟನ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಾನು ಅವನನ್ನು ಎಬ್ಬಿಸಬೇಕೇ?” ಎಂದು ಕ್ಯಾಪ್ಶನ್‌ನಲ್ಲಿ ಪ್ರಶ್ನೆ ಕೇಳಲಾಗಿದೆ. ಈ ವಿಡಿಯೊವನ್ನು ಜೂನ್‌ 19ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 17 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 1.4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.

ಈ ವಿಡಿಯೊಗೆ ಸಾವಿರಾರು ಕಮೆಂಟ್‌ಗಳ ಸುರಿಮಳೆಯೇ ಸುರಿದಿದೆ. “ಅಷ್ಟು ಮುದ್ದಾದ ನಾಯಿ ಅಷ್ಟೊಂದು ಚೆನ್ನಾಗಿ ಮಲಗಿದ್ದರೆ ಅದನ್ನು ಎಬ್ಬಿಸುವುದಕ್ಕೆ ನಿಮಗೆ ಮನಸ್ಸಾದರೂ ಬರುತ್ತದೆಯೇ?”, “ಈ ರೀತಿ ವಿನ್ಸ್ಟನ್‌ ಮಲಗಿರುವುದಾದರೆ ನಾನು ನನ್ನ ಸೀಟನ್ನು ಬಿಟ್ಟುಕೊಟ್ಟು ಟಾಯ್ಲೆಟ್‌ನಲ್ಲೇ ಕುಳಿತುಕೊಳ್ಳಲೂ ಸಿದ್ಧ”, “ದಯವಿಟ್ಟು ಅವನನ್ನು ಎಬ್ಬಿಸಬೇಡಿ. ಅವನಿಗೆ ಒಳ್ಳೆಯ ಕನಸು ಬೀಳಲಿ” ಎನ್ನುವಂತಹ ಹಲವಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ ಬಿಸಿನೆಸ್‌ ಕ್ಲಾಸ್‌ನಲ್ಲಿ ನಾಯಿಗಳನ್ನು ಕರೆದುಕೊಂಡು ಹೋಗುವುದಕ್ಕೆ ಅವಕಾಶವಿದೆಯೇ ಎನ್ನುವ ಪ್ರಶ್ನೆಯನ್ನೂ ನೆಟ್ಟಿಗರು ಕೇಳಿದ್ದಾರೆ. ಅದಕ್ಕೆ ವಿನ್ಸ್ಟನ್‌ನ ಮಾಲೀಕ “ಕೆಲವೊಂದು ಏರ್‌ಲೈನ್‌ಗಳು ನಾಯಿಗಳನ್ನು ಕರೆದುಕೊಂಡು ಹೋಗಲು ಅವಕಾಶ ಕೊಡುತ್ತವೆ” ಎಂದು ಉತ್ತರಿಸಿದ್ದಾರೆ.

Exit mobile version