Site icon Vistara News

Viral Video : ಈ ಮುದ್ದಾದ ನಾಯಿ ಮರಳನ್ನು ಅಗೆಯುವ ಮಜಾ ನೋಡಿ!

dog viral video

ಸಾಕು ಪ್ರಾಣಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತದೆ. ಅದರಲ್ಲೂ ನಾಯಿಗಳ ವಿಡಿಯೊವಂತೂ ಸಾಕಷ್ಟು ಬೇಗನೇ ಜನರಿಗೆ ಇಷ್ಟವಾಗಿಬಿಡುತ್ತದೆ. ಅಂಥದ್ದೇ ಒಂದು ಮುದ್ದಾದ ನಾಯಿ ಮರಳನ್ನು ಅಗೆಯುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ (Viral Video) ಪಾತ್ರವಾಗುತ್ತಿದೆ.

ನಾಯಿಯೊಂದು ಸಮುದ್ರದ ದಡದಲ್ಲಿ ಮರಳನ್ನು ಅಗೆಯುತ್ತಿರುತ್ತದೆ. ಆಗ ಅದಕ್ಕೆ ಅಲ್ಲಿದ್ದ ದಪ್ಪನೆಯ ಕೋಲೊಂದು ಕಣ್ಣಿಗೆ ಬೀಳುತ್ತದೆ. ಅದು ಕಾಲಿಗೆ ಸಿಕ್ಕ ತಕ್ಷಣ ನಾಯಿ ಆ ಕಡೆ ಬಿಟ್ಟು ಮತ್ತೊಂದು ಕಡೆಯಿಂದ ಮರಳನ್ನು ಅಗೆಯಲು ಮುಂದಾಗುತ್ತದೆ. ಆಗಲೂ ಅದೇ ಕೋಲು ಅದರ ಕಾಲಿಗೆ ಸಿಕ್ಕಿಕೊಳ್ಳುತ್ತದೆ. ನಂತರ ಅದೇ ಕೋಲನ್ನು ನಾಯಿ ಸಾಕಷ್ಟು ದೂರ ಎಳೆದುಕೊಂಡು ಹೋಗುತ್ತದೆ.

ಇದನ್ನೂ ಓದಿ: Viral Video: ರೈಲು ನಿಲ್ದಾಣದಲ್ಲಿ ಬಾಲಕನಿಗೆ ಒದ್ದು, ತುಳಿದ ಪೊಲೀಸ್‌ ಪೇದೆ; ನಿಮಗೆ ಮಕ್ಕಳಿಲ್ಲವೇ ಎಂದ ಜನ
ಈ ವಿಡಿಯೊವನ್ನು ರೆಡ್ಡಿಟ್‌ನಲ್ಲಿ ಅನಿಮಲ್‌ ಬೀಯಿಂಗ್‌ ಡೆರ್ಪ್ಸ್‌ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆಯೇ ವಿಡಿಯೊದೊಂದಿಗೆ “ನಮ್ಮ ನಾಯಿಗೆ ಗುಂಡಿ ತೋಡುವುದೇ ಅರ್ಥವಾಗಿಲ್ಲ” ಎಂದು ಕ್ಯಾಪ್ಶನ್‌ ಕೊಡಲಾಗಿದೆ. ಈ ವಿಡಿಯೊವನ್ನು ಮೂರು ದಿನಗಳ ಮೊದಲು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊಗೆ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Our dog doesn’t understand digging
by u/KJongsDongUnYourFace in AnimalsBeingDerps

“ಮುದ್ದಾದ ನಾಯಿ, ಮುದ್ದಾದ ಬ್ಯಾಕ್‌ಗ್ರೌಂಡ್‌”, “ನಾಯಿಗಳಿಗೆ ಇಂತಹ ಜಾಗ ಸಿಕ್ಕರೆ ಆಟವಾಡುವುದಕ್ಕೆ ಭಾರೀ ಸಂತೋಷವಾಗಿಬಿಡುತ್ತದೆ”, “ಅಬ್ಬಾ, ನಾಯಿ ಎಷ್ಟು ಮುದ್ದಾಗಿ ಆಟವಾಡುತ್ತಿದೆ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ ಹಲವರು “ವಾವ್‌”, “ಸೂಪರ್‌”, “ಕ್ಯೂಟ್‌” ಎನ್ನುವ ಮೂಲಕವೂ ಮೆಚ್ಚುಗೆಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: Viral Video : ಹೈ ಹೀಲ್ಸ್‌, ಮಿನಿ ಸ್ಕರ್ಟ್‌ ತೊಟ್ಟು ಯುವಕನ ಭರ್ಜರಿ ಡ್ಯಾನ್ಸ್‌!
ಈ ರೀತಿಯ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ಯುವಕನೊಬ್ಬ ಪಂಜಾಬಿ ಹಾಡಾದ ವೈಟ್‌ ಬ್ಲ್ಯಾಕ್‌ ಅಂಡ್‌ ಬ್ರೌನ್‌ ಹಾಡಿಗೆ ಹೈ ಹೀಲ್ಸ್‌ ಮತ್ತು ಮಿನಿ ಸ್ಕರ್ಟ್‌ ತೊಟ್ಟುಕೊಂಡು ಮಾಡಿದ್ದ ಡ್ಯಾನ್ಸ್‌ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿತ್ತು. ಆ ಯುವಕನ ಸಾಧನೆ ಬಗ್ಗೆ ಕೂಡ ಸಾಕಷ್ಟು ಚರ್ಚೆಗಳು ಏರ್ಪಟ್ಟಿದ್ದವು.

Exit mobile version