ಅಂತರ್ಜಾಲವೆಂಬುದೀಗ ನಮ್ಮನ್ನು ಆಕಾಶದೆತ್ತರದಿಂದ ಸಾಗರದ ಆಳದವರೆಗೆ ಬೆಸೆದಿದೆ. ನಾಡು-ಕಾಡು-ನೀರು, ಪ್ರಾಣಿಪಕ್ಷಿಗಳು, ಚಿಕ್ಕಪುಟ್ಟ ಜೀವಿಗಳ ತರಹೇವಾರಿ ವಿಡಿಯೊಗಳು ಕಾಣಸಿಗುತ್ತವೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಪ್ರಾಣಿ-ಪಕ್ಷಿಗಳ ವಿಡಿಯೊಗಳಂತೂ ನಮ್ಮಲ್ಲಿ ಅನೇಕರಿಗೆ ಸಖತ್ ಖುಷಿಕೊಡುತ್ತವೆ. ಹಾಗೇ, ಈಗ ಡಾಲ್ಫಿನ್ ಮೀನೊಂದರ ವಿಡಿಯೊ ವೈರಲ್ ಆಗುತ್ತಿದೆ.
ಅದೆಂಥಾ ಚೆಂದದ ವಿಡಿಯೊ ಎಂದರೆ, ಎಂಥವರ ಮುಖದಲ್ಲೂ ಒಂದು ಮಂದಹಾಸ ಮೂಡಿಸುತ್ತಿದೆ. ಅದರಲ್ಲೂ ನಿಮ್ಮ ಮನಸಿಗೆ ತುಂಬ ಬೇಸರವಾಗುತ್ತಿದ್ದರೆ, ಒಂದು ಸಲ ಈ ವಿಡಿಯೊ ನೋಡಿಬಿಡಿ. ಈ ಡಾಲ್ಫಿನ್ ಕಾಮನಬಿಲ್ಲಿನ ಪಕ್ಕದಲ್ಲಿ ಮುದ್ದಾಗಿ ಜಿಗಿದಂತೆ, ನಿಮ್ಮ ಮನಸೂ ಉತ್ಸಾಹದೆಡೆಗೆ ಜಿಗಿದುಬಿಡುತ್ತದೆ..!
Science girl ಎಂಬ ಟ್ವಿಟರ್ ಅಕೌಂಟ್ನಲ್ಲಿ 2022ರ ಅಕ್ಟೋಬರ್ ತಿಂಗಳಲ್ಲಿ ವಿಡಿಯೊ ಶೇರ್ ಆಗಿದೆ. ಸಾಗರದ ನೀಲಿ ನೀರಿನಲ್ಲಿ ಕಾಮನಬಿಲ್ಲಿನ ಪ್ರತಿಬಿಂಬ ಮೂಡುತ್ತದೆ. ಅದೇ ಸಮಯದಲ್ಲಿ ಬೆಳ್ಳನೆಯ, ಮುದ್ದಾದ ಡಾಲ್ಫಿನ್ವೊಂದು ಒಂದು ಜಿಗಿತ ಹಾರಿ ಮತ್ತೆ ನೀರಿನಾಳಕ್ಕೆ ಮುಳುಗುತ್ತದೆ. ಮತ್ತು ಅದೇ ಕ್ಷಣದಲ್ಲಿ ಕಾಮನ ಬಿಲ್ಲಿನ ಬಿಂಬವೂ ಮರೆಯಾಗುತ್ತದೆ..ಕಾಮನಬಿಲ್ಲು ಮತ್ತು ಡಾಲ್ಫಿನ್ ಒಂದೇ ಕ್ಷಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿ, ಕೂಡಲೇ ಒಂದೇ ಬಾರಿ ಮರೆಯಾಗಿವೆ. ಈ ದೃಶ್ಯವನ್ನು ವಿವಿರಿಸುವುದಕ್ಕಿಂತಲೂ ನೋಡುವುದೇ ಉತ್ತಮ. ಒಂದು ಸಲ ವಿಡಿಯೊವನ್ನು ನೋಡಿಬಿಡಿ. ಹಾ..ಸುಮ್ಮನೆ ಹೇಳುವುದಿಲ್ಲ, ಈ ಸೃಷ್ಟಿಯೊಂದು ವೈಚಿತ್ರ್ಯ-ಸೌಂದರ್ಯಗಳ ಗೂಡು ಎಂಬ ಮಾತನ್ನು..!
ಇದನ್ನೂ ಓದಿ: Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು