Site icon Vistara News

Viral Video : ಕತ್ತಲೆ ತುಂಬಿದ ಮನೆಗೆ ಬೆಳಕು ತಂದ ಐಪಿಎಸ್‌ ಅಧಿಕಾರಿ!

woman in UP finally gets electricity

ಲಕ್ನೋ: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಇಂದಿಗೂ ಕೆಲವು ಕುಗ್ರಾಮಗಳಲ್ಲಿ ವಿದ್ಯುತ್‌ ಪರಿಚಯವೇ ಇಲ್ಲದೆ ಜನರು ಬದುಕುತ್ತಿದ್ದಾರೆ. ಅದೇ ರೀತಿ ವಿದ್ಯುತ್‌ ಇಲ್ಲದೆಯೇ ಜೀವನ ಕಳೆಯುತ್ತಿದ್ದ ವಯೋವೃದ್ಧೆಗೆ ಐಪಿಎಸ್‌ ಅಧಿಕಾರಿಯೊಬ್ಬರು ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನೂರ್ಜಹಾನ್‌ ಹೆಸರಿನ ವೃದ್ಧೆ ಈವರೆಗೂ ವಿದ್ಯುತ್‌ ಅನ್ನೇ ನೋಡಿರಲಿಲ್ಲ. ಇದನ್ನು ಗಮನಿಸಿದ ಐಪಿಎಸ್‌ ಅಧಿಕಾರಿ ಅನುಕೃತಿ ಶರ್ಮಾ ಅವರು ಈ ಬಗ್ಗೆ ವಿದ್ಯುತ್‌ ಇಲಾಖೆಯೊಂದಿಗೆ ಮಾತನಾಡಿದ್ದಾರೆ. ವಿದ್ಯುತ್‌ ಸಂಪರ್ಕಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಿಸಿ, ನೂರ್‌ಜಹಾನ್‌ ಅವರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Viral Video : ಇದು ಟಾಯ್ಲೆಟ್ಟೋ ಅಕ್ವೇರಿಯಮ್ಮೋ? ವಿಚಿತ್ರವಾಗಿದೆ ಈ ವಿಡಿಯೊ!
ನೂರ್ಜಹಾನ್‌ ಅವರ ಮನೆಗೆ ಮೀಟರ್‌ ಬೋರ್ಡ್‌ ಹಾಕುವುದು, ಅವರ ಮನೆಯಲ್ಲಿ ಮೊದಲನೇ ಬಾರಿಗೆ ಬಲ್ಬ್‌ ಬೆಳಗುವುದು ಮತ್ತು ಫ್ಯಾನ್‌ ತಿರುಗುವ ಎಲ್ಲ ಚಿತ್ರಣಗಳನ್ನು ವಿಡಿಯೊ ಮಾಡಲಾಗಿದೆ. ಅದರಲ್ಲಿ ನೂರ್ಜಹಾನ್‌ ಅವರ ಸಂತಸವನ್ನು ಕಾಣಬಹುದಾಗಿದೆ. ಈ ವಿಡಿಯೊವನ್ನು ಅನುಕೃತಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದು ನನ್ನ ಜೀವನದ ಅತ್ಯಂತ ಸಾರ್ಥಕತೆಯ ಕ್ಷಣ. ನೂರ್ಜಹಾನ್‌ ಅವತರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು ಅವರ ಬದುಕಿಗೆ ಬೆಳಕು ತಂದಂತಾಯಿತು. ಅವರ ಮುಖದ ಮೇಲಿನ ನಗು ನಮಗೆ ತೃಪ್ತಿ ತಂದಿದೆ. ಇದಕ್ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.


ಅನುಕೃತಿ ಅವರ ಈ ಟ್ವೀಟ್‌ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಭಾರೀ ಸದ್ದು ಮಾಡುತ್ತಿದೆ. ಬಡ ವೃದ್ಧೆಯೊಬ್ಬರ ಬದುಕಲ್ಲಿ ಬೆಳಕಾದ ಐಪಿಎಸ್‌ ಅಧಿಕಾರಿಗೆ ಎಲ್ಲರೂ ಧನ್ಯವಾದಗಳನ್ನು ಹೇಳಲಾರಂಭಿಸಿದ್ದಾರೆ. “ನಿಜಕ್ಕೂ ನಿಮ್ಮಂತಹ ಅಧಿಕಾರಿಗಳು ನಮ್ಮ ದೇಶಕ್ಕೆ ಬೇಕಾಗಿದ್ದಾರೆ” ಎಂದು ಜನರು ಮೆಚ್ಚುಗೆಯ ಮಾತುಗಳನ್ನು ಕಾಮೆಂಟ್‌ಗಳಲ್ಲಿ ತಿಳಿಸಲಾರಂಭಿಸಿದ್ದಾರೆ.

Exit mobile version