ದೈತ್ಯ ದೇಹದ ಆನೆ ಅಷ್ಟೇ ಮುದ್ಮುದ್ದು ಎಂಬುದರಲ್ಲಿ ಅನುಮಾನವಿಲ್ಲ. ಮಾನವನೊಂದಿಗೆ ಅವು ಚೆನ್ನಾಗಿ ಹೊಂದಿಕೊಳ್ಳಬಲ್ಲವು. ಆನೆಗಳನ್ನು ಪಳಗಿಸಿಕೊಂಡರೆ ಅವುಗಳೊಂದಿಗೆ ತುಂಬ ಅದ್ಭುತವಾದ ಸಮಯವನ್ನು ನಾವು ಕಳೆಯಬಹುದು. ಅದರಲ್ಲೂ ಮಕ್ಕಳಿಗಂತೂ ಆನೆಗಳೆಂದರೆ ಸೋಜುಗ, ಅದರ ಉದ್ದನೆಯ ಸೊಂಡಿಲು ಮುಟ್ಟುವುದೇ ಅವಕ್ಕೊಂದು ಸಂಭ್ರಮ. ಹಾಗೇ, ಆನೆಗಳೂ ಮಕ್ಕಳೊಂದಿಗೆ ಕೀಟಲೆ ಮಾಡುವ, ಆಟ ಆಡುವ ಹಲವು ವಿಡಿಯೋಗಳನ್ನು ನಾವು ನೋಡಿದ್ದೇವೆ.
ಈಗ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ದೊಡ್ಡ ಕಿವಿಯ ಆನೆಯೊಂದು, ಪುಟ್ಟ ಹುಡುಗಿಯನ್ನು ಅನುಕರಣೆ (mimic) ಮಾಡುವ ಚೆಂದ ನೋಡಬೇಕು. ಸಲಗವೊಂದರ ಮುಂದೆ ನಿಂತ ಚಿಕ್ಕ ಬಾಲಕಿ ತನ್ನ ಸೊಂಟ, ಕಾಲನ್ನು ಕುಲುಕುತ್ತ ಡಾನ್ಸ್ ಮಾಡುತ್ತಾಳೆ. ಅದನ್ನು ನೋಡಿದ ಆನೆ ತನ್ನ ಕಿವಿಯನ್ನು ಮಾತ್ರ ಅದೇ ರೀತಿ ಕುಲುಕಿಸುತ್ತದೆ. ತಲೆ ಕುಣಿಸಿ ತನಗೂ ನೃತ್ಯ ಮಾಡಲು ಬರುತ್ತದೆ ನೋಡು ಎಂಬ ಭಾವವನ್ನು ಹೊರಹಾಕುತ್ತದೆ. ಬಾಲಕಿಯಂತೆ ತನ್ನ ಇಡೀ ದೇಹವನ್ನು ಅದಕ್ಕೆ ಅಲ್ಲಾಡಿಸಲು ಸಾಧ್ಯವಾಗದೆ ಇದ್ದರೂ ‘ಆನೆ ಕಿವಿ ಡಾನ್ಸ್’ ಅದ್ಭುತವಾಗಿಯೇ ಇದೆ.
cute_wild_tv ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಮೊದಲು ಈ ವಿಡಿಯೋ ಶೇರ್ ಆಗಿತ್ತು. ಅವರು ‘ಲವ್ ಲವ್ ಲವ್ ಲವ್ ಯೂ ಎಲೆಫಂಟ್ ಎಂದು ಬರೆದುಕೊಂಡಿದ್ದಾರೆ. 7.2 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 456 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ದೀಪಾಂಶು ಕಾಬ್ರಾ ಎಂಬುವರೊಬ್ಬರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ‘ಯಾರ ಡಾನ್ಸ್ ಚೆನ್ನಾಗಿದೆ?’ ಎಂದು ಕೇಳಿದ್ದಾರೆ. ಈ ವಿಡಿಯೋ ನೋಡಿ ನೀವೂ ಹೇಳಿ ‘ಯಾರು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ?’
ಇದನ್ನೂ ಓದಿ: Viral Video | ಅಯ್ಯೋ ಯಾಕಾದ್ರೂ ಕೈ ಹಾಕಿದೆನೋ; ಮೊಬೈಲ್ ಕಳ್ಳ ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ !