Site icon Vistara News

Viral Video : ವಿಮಾನದಲ್ಲೇ ಕುಸ್ತಿ ಆರಂಭಿಸಿದ ಬ್ರಿಟನ್‌-ಅಮೆರಿಕ ಪ್ರಜೆಗಳು!

fight in flight

ಲಂಡನ್‌: ವಿಮಾನದಲ್ಲಿ ಸಣ್ಣ ಪುಟ್ಟ ಜಗಳಗಳು ಆಗುವುದು ಸಾಮಾನ್ಯ. ಆದರೆ ಇಬ್ಬರು ಪ್ರಯಾಣಿಕರು ಕುಸ್ತಿಗೇ ಬೀಳುವುದನ್ನು ನೋಡಿದ್ದೀರಾ? ಅಂಥದ್ದೊಂದು ಘಟನೆ ಇತ್ತೀಚೆಗೆ ರ್ಯಾನಾರ್‌ ವಿಮಾನದಲ್ಲಿ ನಡೆದಿದೆ. ಅಮೆರಿಕ ಮೂಲದ ಪ್ರಯಾಣಿಕ ಹಾಗೂ ಬ್ರಿಟನ್‌ ಮೂಲದ ಪ್ರಯಾಣಿಕ ಕುಸ್ತಿ ಆಡಿಕೊಂಡಿರುವ ಘಟನೆ ಈ ವಿಮಾನದಲ್ಲಿ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ರ್ಯಾನಾರ್‌ ವಿಮಾನವು ಯುರೋಪ್‌ನ ಮಾಲ್ಟಾದಿಂದ ಬ್ರಿಟನ್‌ನ ಲಂಡನ್‌ಗೆ ಹೊರಟಿತ್ತು. ಅಮೆರಿಕದ ಮೂಲದ ವ್ಯಕ್ತಿಯ ಸೀಟು ವಿಮಾನದ ಕಿಟಕಿಯ ಪಕ್ಕದಲ್ಲಿತ್ತು. ಹಾಗೆಯೇ ಆ ಸಾಲಿನ ಮಧ್ಯದ ಸೀಟು ಬ್ರಿಟನ್‌ ಮೂಲದ ಪ್ರಯಾಣಿಕನಾಗಿತ್ತು. ಬ್ರಿಟನ್‌ ಪ್ರಯಾಣಿಕ ಅದಾಗಲೇ ಮಧ್ಯದ ಸೀಟಿನಲ್ಲಿ ಕುಳಿತಿದ್ದ. ಅಮೆರಿಕದ ಪ್ರಯಾಣಿಕ ನಂತರ ಬಂದಿದ್ದು, ಕಿಟಕಿಯ ಬಳಿಯಿರುವ ಸೀಟಿಗೆ ಹೋಗಲು ಜಾಗ ಕೊಡು ಎಂದು ಬ್ರಿಟನ್‌ ಮೂಲದ ಪ್ರಯಾಣಿಕನಿಗೆ ಕೇಳಿದ್ದಾನೆ. ಆದರೆ ಅದಕ್ಕೆ ಆತ ಒಪ್ಪದಿದ್ದಾಗ ಮಾತಿನ ಚಕಮಕಿ ಆರಂಭವಾಗಿದೆ. ಕೊನೆಗೆ ಅದು ಹೆಚ್ಚಾಗಿದ್ದು, ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: ತೂಕ ಹೆಚ್ಚಾಯ್ತೆಂದು 19 ಪ್ರಯಾಣಿಕರನ್ನು ಕೆಳಗಿಳಿಸಿ ಹೊರಟು ಹೋದ ವಿಮಾನ!
ಈ ದೃಶ್ಯವನ್ನು ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅದರಲ್ಲಿ ಹಲವು ಸಹ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಜಗಳವನ್ನು ನಿಲ್ಲಿಸಲು ಹರಸಾಹಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್‌ ಆಗಿದೆ. ಎರಡು ಪ್ರಮುಖ ದೇಶಗಳ ನಾಗರಿಕರು ಈ ರೀತಿಯಲ್ಲಿ ಕಿತ್ತಾಡಿಕೊಳ್ಳುತ್ತಿರುವುದನ್ನು ನೋಡಿ ಜನರು ಆಡಿಕೊಂಡು ನಗಲಾರಂಭಿಸಿದ್ದಾರೆ.

ಈ ರ್ಯಾನರ್‌ ಏರ್‌ಲೈನ್‌ ಹಲವು ವಿಚಾರಗಳಲ್ಲಿ ಇತ್ತೀಚೆಗೆ ಸುದ್ದಿಯಾಗಿದೆ. ಇತ್ತೀಚೆಗೆ ರ್ಯಾನರ್‌ ವಿಮಾನದ ಶೌಚಾಲಯದಲ್ಲಿ ಪ್ರಯಾಣಿಕನೊಬ್ಬ ಧೂಮಪಾನ ಮಾಡಿದ್ದರಿಂದ ವಿಮಾನದ ಸಿಬ್ಬಂದಿ ಆತನಿಗೆ ಬೈದಿದ್ದರು. ನಂತರ ಬ್ರಿಟನ್‌ ಪೊಲೀಸರು ಆತನನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುತ್ತಿದ್ದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಹಾಗೆಯೇ ಮೇ ತಿಂಗಳಲ್ಲಿ ಈ ವಿಮಾನದಲ್ಲಿ ಪ್ರಯಾಣಿಸಿದ ಅಂಗವಿಕಲ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಸರಿಯಾದ ವ್ಯವಸ್ಥೆಗಳೇ ಇಲ್ಲ ಎಂದು ದೂರಿದ್ದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು.

Exit mobile version