ಬೆಂಗಳೂರು: ಮದುವೆ ಎಂದರೆ ಸಂಭ್ರಮ. ಎರಡು ಜೀವಗಳು ಜೀವನಪೂರ್ತಿ ಒಟ್ಟಿಗೆ ಇರುವುದಕ್ಕೆ ಅಣಿಯಾಗಿ, ಒಂಟಿ ಬಾಳಿನಿಂದ ಜಂಟಿ ಬಾಳಿಗೆ ಸಾಗುವ ಘಳಿಗೆಯದು. ಮದುವೆ ಮನೆಗಳಲ್ಲಿ ನವ ಜೋಡಿಯ ಸಂಭ್ರಮ ನೋಡುವುದೇ ಒಂದು ಖುಷಿ. ಆದರೆ ಇಲ್ಲೊಂದು ಮದುವೆ ವಿಚಿತ್ರವಾಗಿದೆ. ಮದುವೆಯಾದ ದಂಪತಿ ವೇದಿಕೆ ಮೇಲೇ ಜಗಳವಾಡಿಕೊಂಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ವಧು ವರರು ವೇದಿಕೆ ಮೇಲೆ ನಿಂತಿರುತ್ತಾರೆ. ಇಬ್ಬರು ಹಾರ ಬದಲಿಸಿಕೊಂಡ ನಂತರ ವರ ವಧುವಿಗೆ ಸಿಹಿ ತಿನಿಸಲು ಮುಂದಾಗುತ್ತಾನೆ. ಆದರೆ ಅದನ್ನು ತಿನ್ನದ ವಧು ಆ ಸಿಹಿಯನ್ನು ಕೈನಲ್ಲಿ ಕಿತ್ತುಕೊಂಡು ಅಲ್ಲಿ ನೆರೆದಿದ್ದ ಜನರ ಕಡೆ ಎಸೆಯುತ್ತಾಳೆ. ಇದರಿಂದಾಗಿ ವರ ಬೇಸರಗೊಂಡು ಮುಖವನ್ನು ಸಪ್ಪೆ ಮಾಡಿಕೊಳ್ಳುತ್ತಾನೆ. ಅದಾದ ನಂತರ ವರನಿಗೆ ಕುಡಿಸುವುದಕ್ಕೆಂದು ವಧುವಿನ ಕೈಗೆ ನೀರಿನ ಲೋಟವನ್ನು ಕೊಡಲಾಗುತ್ತದೆ. ವಧು ನೀರು ಕೊಡಲು ಮುಂದಾದಾಗ ಸೇಡು ತೀರಿಸಿಕೊಳ್ಳಲು ಮುಂದಾಗುವ ವರ ನೀರನ್ನು ಕುಡಿಯದೆ ಆಕೆಯ ಕೈಯನ್ನು ತಳ್ಳುತ್ತಾಳೆ.
ಇದನ್ನೂ ಓದಿ: Viral News: ಪಕ್ಕದ ಮನೆಯವರ 32 ಮರ ಕಡಿದವನಿಗೆ 12 ಕೋಟಿ ರೂ. ದಂಡ, ಕತ್ತರಿಸಲು ಕಾರಣ ವಿಚಿತ್ರ
ಆಗ ವಧುವಿನ ಸಿಟ್ಟು ನೆತ್ತಿಗೇರುತ್ತದೆ. ಲೋಟದಲ್ಲಿದ್ದ ನೀರನ್ನು ಚೆಲ್ಲಿ, ಲೋಟವನ್ನು ಮತ್ತೆ ಅತಿಥಿಗಳತ್ತ ಎಸೆಯುತ್ತಾಳೆ. ಅಲ್ಲಿದ್ದ ಜನರೆಲ್ಲರೂ ಆಶ್ಚರ್ಯದಿಂದ ನಗಲಾರಂಭಿಸುತ್ತಾರೆ. ಈ ದೃಶ್ಯಗಳನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
Trailer aisa hai to picture में kya kya hoga
— Hasna Zaroori Hai 🇮🇳 (@HasnaZarooriHai) June 28, 2023
😂😂😂😂😂😂😂 pic.twitter.com/sVaWUB4YDz
ಈ ವಿಡಿಯೊವನ್ನು ಹಸ್ನಾ ಜರೂರಿ ಹೈ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೂನ್ 28ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೊವನ್ನು 93 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಮಂದಿ ಈ ಟ್ವೀಟ್‌ಗೆ ಲೈಕ್ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ.
ಹಲವಾರು ಮಂದಿ ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಮಾಲೆ ಬದಲಿಸಿಕೊಂಡು ಎರಡು ನಿಮಿಷ ಕೂಡ ಇವರಿಗೆ ನೆಮ್ಮದಿಯಾಗಿ ಇರಲಿಕ್ಕೆ ಆಗಲಿಲ್ಲವೆಂದ ಮೇಲೆ ಜೀವನಪೂರ್ತಿ ಹೇಗಿರುತ್ತಾರೆ?”, “ಅಯ್ಯಯ್ಯೋ ಇದು ಮದುವೆಯಲ್ಲಿ, ದೊಡ್ಡ ಗಂಡಾಂತರ”, “ಇದು ಯಾವ ರೀತಿಯ ಮದುವೆ. ಹುಡುಗ ಹುಡುಗಿಗೆ ಈ ಮದುವೆ ಒಪ್ಪಿಗೆ ಇದೆಯೋ ಇಲ್ಲವೋ?” ಎನ್ನುವಂತ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.