Site icon Vistara News

Viral News : ಇದರಲ್ಲಿ ತಪ್ಪಿಸಿಕೊಂಡಿರುವ 2 ನಾಯಿಗಳನ್ನು ಹುಡುಕಿ ನೋಡೋಣ!

find the dogs

#image_title

ಬೆಂಗಳೂರು: ಮೆದುಳಿಗೆ, ಕಣ್ಣುಗಳಿಗೆ ಕೆಲಸ ಕೊಡುವ ಸಾಕಷ್ಟು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ಮತ್ತೊಂದು ಚಿತ್ರವನ್ನು ನಾವು ನಿಮಗಾಗಿ ಹೊತ್ತು (Viral News) ತಂದಿದ್ದೇವೆ. ಈ ಚಿತ್ರದಲ್ಲಿ ನೀವು 43 ಸೆಕೆಂಡುಗಳ ಒಳಗೆ, ಮಾಲೀಕರಿಂದ ತಪ್ಪಿಸಿಕೊಂಡಿರುವ ಎರಡು ನಾಯಿಗಳನ್ನು ಹುಡುಕಬೇಕಿದೆ!

ಇದನ್ನೂ ಓದಿ: Viral Video : ಜನಪದ ಹಾಡೂ ವೈರಲ್​! ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡಿಗೆ ಬಗೆಬಗೆಯ ರೀಲ್ಸ್​!
ಲಾರ್ಡ್ಸ್‌ ಆಂಡ್‌ ಲ್ಯಾಬ್ರಡರ್ಸ್‌ ಹೆಸರಿನ ಸಂಸ್ಥೆ ಇಂಥದ್ದೊಂದು ಚಿತ್ರವನ್ನು ಸಿದ್ಧಪಡಿಸಿದೆ. ಚಿತ್ರದಲ್ಲಿ ದೊಡ್ಡದೊಂದು ಪಾರ್ಕ್‌ ಅನ್ನು ತೋರಿಸಲಾಗಿದೆ. ಹಸಿರಿನಿಂದ ತುಂಬಿರುವ ಆ ಪಾರ್ಕ್‌ನಲ್ಲಿ ಹಲವಾರು ಮಂದಿ ತಮ್ಮ ಸಾಕು ನಾಯಿಗಳನ್ನು ವಾಕಿಂಗ್‌ ಮಾಡಿಸುತ್ತಿದ್ದಾರೆ. ಎಲ್ಲ ನಾಯಿಗಳ ಕೊರಳಿಗೆ ಬೆಲ್ಟ್‌ ಹಾಕಲಾಗಿದ್ದು, ಅದರ ಇನ್ನೊಂದು ತುದಿಯನ್ನು ಅದರ ಮಾಲೀಕರಿಗೆ ಕೊಡಲಾಗಿದೆ. ಆದರೆ ಈ ಚಿತ್ರದಲ್ಲಿ ಎರಡು ನಾಯಿಗಳು ಮಾತ್ರ ಮಾಲೀಕರಿಂದ ತಪ್ಪಿಸಿಕೊಂಡು ಸುತ್ತುತ್ತಿವೆ. ತಪ್ಪಿಸಿಕೊಂಡಿರುವ ಆ ಎರಡು ನಾಯಿಗಳನ್ನು ನೀವು ಹುಡುಕಬೇಕಿದೆ.


ಲಾರ್ಡ್ಸ್‌ ಆಂಡ್‌ ಲ್ಯಾಬ್ರಡರ್ಸ್‌ ಸಂಸ್ಥೆಯ ಪ್ರಕಾರ ಐದರಲ್ಲಿ ಒಬ್ಬರು ಮಾತ್ರ 43 ಸೆಕೆಂಡುಗಳ ಒಳಗೆ ತಪ್ಪಿಸಿಕೊಂಡಿರುವ ಎರಡು ನಾಯಿಗಳನ್ನು ಹುಡುಕುತ್ತಾರೆ. ಹಾಗೆಯೇ ಎಲ್ಲರಿಗೆ ಸರಾಸರಿ 58 ಸೆಕೆಂಡುಗಳು ಆ ನಾಯಿಗಳನ್ನು ಹುಡುಕಲು ಬೇಕಾಗುತ್ತಿದೆಯಂತೆ.

ಇದನ್ನೂ ಓದಿ: Video Viral: ಒಂದು ಟಿಸಿಗೆ ಬರೀ ನೂರೇ ರೂಪಾಯಿ, ಕಾಸು ಕೊಟ್ರಷ್ಟೇ ಇಲ್ಲಿ ಕಮಾಯಿ; ಈತ ದುರ್ಗದ ಲಂಚ ಪುರುಷ!
ನೀವು ಈಗಾಗಲೇ ಚಿತ್ರವನ್ನು ನೋಡಿರುತ್ತೀರಿ. ಈಗ ಆ ತಪ್ಪಿಸಿಕೊಂಡಿರುವ ನಾಯಿಗಳನ್ನು ಹುಡುಕಿ. 43 ಸೆಕೆಂಡುಗಳಲ್ಲಿ ಹುಡುಕಿದ್ದೇ ಆದಲ್ಲಿ ನಿಮ್ಮ ಕಣ್ಣು ಅತ್ಯಂತ ಸೂಕ್ಷ್ಮವಾಗಿದೆ ಎಂದರ್ಥ. ಸಮಯವಾದರೂ ಹುಡುಕಲು ಸಾಧ್ಯವಾಗಲಿಲ್ಲ ಎಂದರೆ ಚಿಂತಿಸಬೇಡಿ. ನಿಮಗಾಗಿ ನಾವೇ ಆ ನಾಯಿಗಳನ್ನು ಹುಡುಕಿದ್ದೇವೆ. ಈ ಆಟದ ಸರಿಯಾದ ಉತ್ತರವನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದ್ದೇವೆ ನೋಡಿ.


ಈ ರೀತಿಯ ಸಾಕಷ್ಟು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇಂತಹ ಆಟಗಳನ್ನು ಜನರು ವ್ಯಾಪಕವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ.

Exit mobile version