ಭಾರತದಲ್ಲಿ ಮದುವೆ ಎಂಬುದು ಅತ್ಯಂತ ವಿಶೇಷ ಕ್ಷಣ. ಅದ್ಧೂರಿ ಸಿದ್ಧತೆಗಳು, ಕಂಗೊಳಿಸುವ ಅಲಂಕಾರ, ಖುಷಿಖುಷಿಯಾಗಿ ಓಡಾಡಿಕೊಂಡಿರುವ ಕುಟುಂಬದ ಜನರು-ಅತಿಥಿಗಳು…ಒಟ್ಟಾರೆ ಸಂಪೂರ್ಣ ಸಡಗರ-ಸಂಭ್ರಮ.
ನಮ್ಮ ಮನೆಯ ಮದುವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರಲಿ ಎಂದೇ ಎಲ್ಲರೂ ಬಯಸುತ್ತಾರೆ. ಅದಕ್ಕಾಗಿಯೇ ವಾಹನಗಳ ವ್ಯವಸ್ಥೆಯನ್ನೂ ಅವರೇ ಮಾಡಿಬಿಡುತ್ತಾರೆ. ಅತಿಥಿಗಳನ್ನೆಲ್ಲ ಮದುವೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಬರಲೆಂದೇ ಬಸ್, ಟೆಂಪೋ, ಕಾರುಗಳ ವ್ಯವಸ್ಥೆ ಮಾಡುತ್ತಾರೆ. ಇದಕ್ಕೆ ದಿಬ್ಬಣ ಎಂದು ಕರೆಯಲಾಗುತ್ತದೆ.
ಆದರೆ ಇಲ್ಲೊಂದು ಕುಟುಂಬ ಇನ್ನೂ ಮುಂದುವರಿದು ದಿಬ್ಬಣಕ್ಕಾಗಿ ವಿಮಾನವನ್ನೇ ಕಾಯ್ದಿರಿಸಿದೆ. ಅದರಲ್ಲಿ ವಧು-ವರರೂ ಒಟ್ಟಾಗಿ ಮದುವೆ ನಡೆಯುವ ಸ್ಥಳಕ್ಕೆ ವಿಮಾನದಲ್ಲಿ ಹೋಗಿದ್ದಾರೆ. ಶ್ರೇಯಾ ಶಾ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ನೂರಾರು ಜನ ಆ ವಿಮಾನದಲ್ಲಿ ಹಾಡು ಹೇಳುತ್ತ, ಮಸ್ತ್ ಮಜಾ ಮಾಡುತ್ತ ಮದುವೆಗೆ ತೆರಳಿದ್ದಾರೆ. ಅಂದಹಾಗೇ, ಈ ಸಂಭ್ರಮ ರಾಜಸ್ಥಾನದ ಜೈಸಲ್ಮೇರ್ನದ್ದು ಎನ್ನಲಾಗಿದೆ.
ಇದನ್ನೂ ಓದಿ: Viral Video| ಲಿಫ್ಟ್ನಲ್ಲಿ ಸಿಲುಕಿದ 8 ವರ್ಷದ ಬಾಲಕನ ಪರದಾಟ; ಎಮರ್ಜನ್ಸಿ ಬಟನ್ ಒತ್ತಿದರೂ ಆಗಲಿಲ್ಲ ಪ್ರಯೋಜನ