Site icon Vistara News

Viral News : ಬಸ್​ನ ಏಣಿ ಮೇಲೆ ಹತ್ತಿಕೊಂಡು ಗೋವಾದಲ್ಲಿ ಫ್ರೀ ರೈಡ್​ ಮಾಡಿದ ವಿದೇಶಿ ದಂಪತಿ!

Viral News

ಪಣಜಿ: ಗೋವಾ ಭಾರತದ ಪ್ರಮುಖ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರು ಸಮಯ ಕಳೆಯಲು ಅಲ್ಲಿಗೆ ಬರುತ್ತಾರೆ. ವಿದೇಶದಿಂದ ಬಂದವರಂತೂ ಬಿಂದಾಸ್​ ಆಗಿ ಖರ್ಚುಮಾಡಿಕೊಂಡು ಅಲ್ಲಿ ಕಾಲ ಕಳೆಯುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ವಿದೇಶಿ ಜೋಡಿಯೊಂದು ಬಸ್​ನ ಏಣಿಮೇಲೆ ಏರಿಕೊಂಡು ಪ್ರಯಾಣ ಮಾಡಿರುವ ಘಟನೆ ವರದಿಯಾಗಿದೆ. ಇದರ ವಿಡಿಯೊ (Viral News) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಗೋವಾದ ಮಾಪುಸಾದಲ್ಲಿ ಚಿತ್ರೀಕರಿಸಲಾಗಿದೆ. ಬಸ್​​ನ ಹಿಂಭಾಗದಲ್ಲಿ ಇಬ್ಬರು ಪ್ರವಾಸಿಗರು ನೇತಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅವರಿಗೆ ತಮ್ಮ ಕೃತ್ಯವನ್ನು ವೀಡಿಯೊ ಮಾಡುತ್ತಿರುವ ದೃಶ್ಯ ಅರಿವಿಗೆ ಬಂದಿಲ್ಲ. ಹಿಂಬದಿ ಬ್ಯಾಗ್​ಗಳನ್ನು ಹಾಕಿಕೊಂಡಿರುವ ಬಸ್​ನ ಏಣಿಯನ್ನು ಹಿಡಿದುಕೊಂಡು ಸಾಕಷ್ಟು ದೂರ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: Viral News:‌ 18ನೇ ವಯಸ್ಸಿಗೆ ಡಾಕ್ಟರ್‌, 22ಕ್ಕೆ ಡಿ.ಸಿ; ಎಲ್ಲ ಬಿಟ್ಟು 26 ಸಾವಿರ ಕೋಟಿ ರೂ. ಕಂಪನಿ ಕಟ್ಟಿದ; ಇದು ಸೈನಿ ಕತೆ

ಭಾರತೀಯರು ಅನೇಕ ಬಾರಿ ಈ ರೀತಿ ಮಾಡುತ್ತಾರೆ. ಆದರೆ, ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದೆ. ಅಲ್ಲದೆ ಕಾನೂನುಬಾಹಿರ ಕೂಡ. ಸಾರ್ವಜನಿಕ ಸಾರಿಗೆಯಲ್ಲಿ ನೇತಾಡಿಕೊಂಡು ಹೋಗಿದ್ದಕ್ಕೆ ದಂಡ ವಿಧಿಸಬಹುದು. ಅಲ್ಲದೆ, ಸಾರ್ವಜನಿಕ ಸಾರಿಗೆಯಲ್ಲಿ ಹಣ ಪಾವತಿಸದೇ ಪ್ರಯಾಣಿಸುವುದು ಭಾರತದಲ್ಲಿ ಅಪರಾಧವಾಗಿದೆ. ರಸ್ತೆ ಉಬ್ಬು ಅಥವಾ ಗುಂಡಿಗೆ ಬಸ್​ ಹತ್ತಿಳಿಯವು ವೇಳೆ ನೇತಾಡುವ ಪ್ರಯಾಣಿಕರು ಕೆಳಗೆ ಬೀಳುವ ಸಾಧ್ಯತೆಗಳಿವೆ. ಭಾರತದ ರಸ್ತೆಗಳೂ ಉತ್ತಮ ರಸ್ತೆ ಪರಿಸ್ಥಿತಿಗಳಲ್ಲಿ ಇರುವುದಿಲ್ಲ. ಕೆಳಗೆ ಬಿದ್ದಾಗ ಬೇರೊಂದು ವಾಹನ ಅವರ ಮೇಲೆ ಹರಿದರೂ ಅವರಿಗೂ ಸಮಸ್ಯೆ.

ಬಸ್ಸಿನ ಚಾವಣಿ ಮೇಲೆ ಪ್ರಯಾಣಿಸುವುದು ಅಥವಾ ಬಸ್ಸಿನ ಹಿಂದೆ ನೇತಾಡುವುದು ಕಾನೂನುಬಾಹಿರವಾಗಿದ್ದರೂ. ದೇಶದ ಹಲವು ಕಡೆ ಇದು ಸಾಮಾನ್ಯ ದೃಶ್ಯವಾಗಿರುತ್ತದೆ. ಸ್ಥಳೀಯ ಪೊಲೀಸರು ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದರೂ, ಸಾರಿಗೆ ಸೌಕರ್ಯದ ಕೊರತೆಯಿಂದಾಗಿ ಇಂಥ ಘಟನೆಗಳು ನಡೆಯುತ್ತದೆ.

ಗೋವಾದಲ್ಲಿನ ಪ್ರವಾಸಿಗರು ನಿಯಮಗಳನ್ನು ಪಾಲಿಸುತ್ತಿಲ್ಲ. ಕಾನೂನುಬಾಹಿರ ಮತ್ತು ಅಪಾಯಕಾರಿಯಾದ ಕೆಲಸಗಳನ್ನು ಮಾಡುತ್ತಾರೆ ಎಂಬುದಾಗಿ ಆಗಾಗ ದೂರುಗಳು ಕೇಳಿ ಬರುತ್ತವೆ. ಅನೇಕ ಸಂದರ್ಭಗಳಲ್ಲಿ, ಪ್ರವಾಸಿಗರು ಕಡಲತೀರಗಳಿಗೆ ವಾಹನಗಳನ್ನು ತೆಗೆದುಕೊಂಡು ತಿರುಗಾಡುವುದನ್ನು ನಾವು ನೋಡಿದ್ದೇವೆ. ಅನೇಕ ಸಂದರ್ಭಗಳಲ್ಲಿ, ಸಂರಕ್ಷಿತ ಕಡಲತೀರಗಳಾಗಿರುತ್ತವೆ. ಅಲ್ಲಿ ಆಮೆಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಸ್ಥಳೀಯರ ದೂರುಗಳೊಂದಿಗೆ, ಪೊಲೀಸರು ಆಗಾಗ್ಗೆ ಅಂತಹ ಅಪರಾಧಿಗಳನ್ನು ಹಿಡಿಯುತ್ತಾರೆ. ಇದು ಸ್ಥಳೀಯರಿಗೂ ಇದು ಸಮಸ್ಯೆ ಉಂಟು ಮಾಡುತ್ತದೆ.

ಈ ಹಿಂದೆ ಅನೇಕ ಪ್ರವಾಸಿಗರನ್ನು ಇಂಥ ತಪ್ಪುಗಳನ್ನು ಮಾಡಿದ ಆರೋಪಗಳ ಮೇಲೆ ಬಂಧಿಸಲಾಗಿದೆ. ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋವಾ ಒಂದು ಪ್ರವಾಸಿ ತಾಣವಾಗಿರುವುದರಿಂದ, ರಾಜ್ಯದ ಹೆಚ್ಚಿನ ಆದಾಯವು ಪ್ರವಾಸೋದ್ಯಮದಿಂದ ಬರುತ್ತದೆ. ಆದಾಗ್ಯೂ, ಸ್ಥಳೀಯರು ಇಂತಹ ಪ್ರವಾಸಿಗರ ನಡವಳಿಕೆಯಿಂದ ಬೇಸರಗೊಂಡಿದ್ದಾರೆ.

ಟ್ಯಾಕ್ಸಿ ಒಕ್ಕೂಟಗಳಿಂದಾಗಿ ಗೋವಾ ಸುತ್ತುವುದು ದುಬಾರಿಯಾಗಿದೆ ಎಂಬ ಮಾತಿದೆ. ಹೆಚ್ಚಿನ ಪ್ರವಾಸಿಗರು ವಾಹನಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಅದು ದುಬಾರಿಯಾಗುತ್ತಿರುವ ಕಾರಣ ಉಚಿತವಾಗಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Exit mobile version