Site icon Vistara News

Viral Video : ಹರ್ಯಾಣ್ವಿ ಹಾಡಿಗೆ ಮಸ್ತ್‌ ಸ್ಟೆಪ್ಸ್‌ ಹಾಕಿದ ಪುಟಾಣಿ! ಈ ವಿಡಿಯೊವನ್ನು ನೋಡದೇ ಇರಲು ಸಾಧ್ಯವೇ?

girl dance video

ಬೆಂಗಳೂರು: ಈಗಿನ ಮಕ್ಕಳು ಎಲ್ಲದರಲ್ಲೂ ಫಾಸ್ಟ್‌. ಕೋಡಿಂಗ್‌ ಮಾಡುವುದರಿಂದ ಹಿಡಿದು ವೇದಿಕೆ ಮೇಲೆ ಹೆಜ್ಜೆ ಹಾಕಿ ಮೋಡಿ ಮಾಡುವವರಗೆ ಎಲ್ಲದರಲ್ಲೂ ಈಗಿನ ಮಕ್ಕಳು ಎತ್ತಿದ ಕೈ. ಬೆಳೆದು ನಿಂತವರಿಗೇ ಸಾಧ್ಯವಾಗದ ಎಷ್ಟೋ ಸಾಧನೆಯನ್ನು ಈಗ ಪುಟಾಣಿ ಮಕ್ಕಳು ಮಾಡಿ ತೋರಿಸಲಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ಪುಟ್ಟ ಬಾಲಕಿಯೊಬ್ಬಳು ಹರ್ಯಾಣ್ವಿ ಹಾಡಿಗೆ ಹೆಜ್ಜೆ ಹಾಕಿ ಎಲ್ಲರೂ ಮೋಡಿಯಾಗುವಂತೆ ಮಾಡಿದ್ದಾಳೆ. ಆಕೆಯ ನೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video ) ಆಗಿದೆ.

ಸೋಮಿ ಶರ್ಮಾ ಹೆಸರಿನ ಬಾಲಕಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಆಕೆ ಹರ್ಯಾಣಿ ಹಾಡಾದ ಕ್ಯೂ ಆಯಾ ರಸೋಡೆ ಮೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಪುಟ್ಟ ಪುಟ್ಟ ಹೆಜ್ಜೆಗಳನ್ನು ಎನರ್ಜಿಟಿಕ್‌ ಆಗಿ ಕುಣಿಸುತ್ತಿರುವ ಬಾಲಕಿಯನ್ನು ನೋಡಿ ನೆಟ್ಟಿಗರು ಫಿದಾ ಆಗುತ್ತಿದ್ದಾರೆ. ವಿಡಿಯೊದಲ್ಲಿ ಬಾಲಕಿ ಜಾನಪದ ಉಡುಗೆಯನ್ನೂ ತೊಟ್ಟಿದ್ದು, ಅದರಂತೆಯೇ ಆಭರಣ ತೊಟ್ಟಿದ್ದಾಳೆ. ಅದಕ್ಕೆ ಹೋಲುವಂತಹ ಮೇಕಪ್‌ ಅನ್ನೂ ಮಾಡಿಸಿಕೊಂಡಿದ್ದಾಳೆ.

ಇದನ್ನೂ ಓದಿ: Video Viral : ಹೆಡೆಯೆತ್ತಿ ನಿಂತಿದ್ದ ನಾಗರಹಾವಿನ ಜತೆ ಬೆಕ್ಕಿನ ಕಾದಾಟ ; ಸೆಣಸಾಟದಲ್ಲಿ ಗೆದ್ದವರ‍್ಯಾರು?
ಈ ವಿಡಿಯೊವನ್ನು ನಾಲ್ಕು ದಿನಗಳ ಹಿಂದೆ ಸೋಮಿ ಶರ್ಮಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊವನ್ನು 3.23 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 22.6 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ 350ಕ್ಕೂ ಅಧಿಕ ಮಂದಿ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.


“ವಾವ್‌, ವಾಟ್‌ ಎ ಗ್ರೇಟ್‌ಫುಲ್‌ ಡ್ಯಾನ್ಸರ್‌”, “ನೀವು ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಿದ್ದೀರಿ, ಹಾಗೆಯೇ ಅಷ್ಟೇ ಸುಂದರವಾಗಿದ್ದೀರಿ ಕೂಡ. ಹೀಗೆ ಬೆಳೆಯುತ್ತಿರಿ”, “ತುಂಬ ಚಂದದ ನೃತ್ಯ. ಆ ದೇವರು ನಿಮಗೆ ಆಶೀರ್ವಾದ ಮಾಡಲಿ”, “ಹೇ ಪುಟಾಣಿ. ಹೀಗೇ ಅಭ್ಯಾಸ ಮಾಡುತ್ತಿರು ಮತ್ತು ಪ್ರತಿನಿತ್ಯ ಬೆಳೆಯುತ್ತಿರು. ದೇವರು ನಿನಗೆ ಆಶೀರ್ವದಿಸಲಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಷ್ಟೇ ಅಲ್ಲದೆ ಜನರು “ವಾವ್‌”, “ಸೂಪರ್”, “ಆಸಮ್‌” ಎನ್ನುವಂತಹ ಹಲವಾರು ಕಾಮೆಂಟ್‌ಗಳನ್ನೂ ವಿಡಿಯೊಗೆ ಮಾಡಿದ್ದಾರೆ.

ಇದನ್ನೂ ಓದಿ: Viral Video : ಬೈಗುಳವೇ ಹಾಡಾದಾಗ… ವೈರಲ್‌ ಆಗ್ತಿದೆ ಲಪ್ಪು ಸ ಸಚಿನ್‌ ಹಾಡು

ಸೋಮಿ ಶರ್ಮಾ ಚಿಕ್ಕ ವಯಸ್ಸಿನಲ್ಲೇ ನೃತ್ಯ ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಲವಾರು ವಿಡಿಯೊಗಳನ್ನು ಹರಿಬಿಟ್ಟಿದ್ದಾಳೆ. ಅವಳ ಸಾಕಷ್ಟು ವಿಡಿಯೊಗಳು ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡು, ಲೈಕ್‌ಗಳನ್ನು ಪಡೆದುಕೊಂಡಿದೆ ಕೂಡ. ಹಾಗೆಯೇ ಆಕೆಯನ್ನು ಇನ್‌ಸ್ಟಾಗ್ರಾಂನಲ್ಲಿ 6.46 ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ ಕೂಡ.

Exit mobile version